More

    ಕುಸ್ತಿಪಟು ಸುಶೀಲ್ ಕುಮಾರ್ ವಿರುದ್ಧ ಜಾಮೀನುರಹಿತ ವಾರೆಂಟ್

    ನವದೆಹಲಿ: ಎರಡು ಬಾರಿ ಒಲಿಂಪಿಕ್ ಪದಕ ವಿಜೇತ ಕುಸ್ತಿಪಟು ಸುಶೀಲ್ ಕುಮಾರ್ ಸೇರಿದಂತೆ 9 ಮಂದಿ ವಿರುದ್ಧ ದೆಹಲಿ ಕೋರ್ಟ್ ಜಾಮೀನು ರಹಿತ ವಾರೆಂಟ್ ನೀಡಿದೆ. 23 ವರ್ಷದ ಮಾಜಿ ಜೂನಿಯರ್ ರಾಷ್ಟ್ರೀಯ ಚಾಂಪಿಯನ್ ಸಾಗರ್ ರಾಣಾ ಕೊಲೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಸುಶೀಲ್ ಕುಮಾರ್ ಹಾಗೂ ಸ್ನೇಹಿತರ ವಿರುದ್ಧ ಪ್ರಕರಣ ದಾಖಲಾಗಿದೆ. ಇದಕ್ಕೂ ಮೊದಲು ದೆಹಲಿ ಪೊಲೀಸರು ಲುಕ್ ಔಟ್ ನೋಟಿಸ್ ಜಾರಿಮಾಡಿದ್ದು, ಸುಶೀಲ್ ಕುಮಾರ್ ಸುಳಿವು ನೀಡುವವರಿಗೆ ಬಹುಮಾನವನ್ನು ಘೋಷಿಸಿದ್ದಾರೆ. ಎಫ್ಐಆರ್ ದಾಖಲಾದ ಬಳಿಕ ಸುಶೀಲ್ ಕುಮಾರ್ ನಾಪತ್ತೆಯಾಗಿದ್ದು, ಮೊಬೈಲ್ ಫೋನ್ ಅನ್ನು ಸ್ವಿಚ್ ಆಫ್ ಮಾಡಿದ್ದಾರೆ. ಈಗಾಗಲೇ ಹಲವು ಸ್ನೇಹಿತರ ಮನೆಗಳ ಶೋಧ ಕಾರ್ಯ ಮಾಡಿದ್ದರೂ ಸುಶೀಲ್ ಕುಮಾರ್ ಪತ್ತೆಯಾಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

    ಇದನ್ನೂ ಓದಿ: ಸನ್​ರೈಸರ್ಸ್ ತಂಡದ ನಾಯಕತ್ವ ತ್ಯಜಿಸುವಾಗ ಡೇವಿಡ್​ ವಾರ್ನರ್​ ಪ್ರತಿಕ್ರಿಯೆ ಹೇಗಿತ್ತು ಗೊತ್ತೇ?, 

    ಇತ್ತೀಚೆಗೆ ನಗರದ ಉತ್ತರ ಭಾಗದಲ್ಲಿರುವ ಚಾಸ್ಟ್ರಾಸಾಲ್ ಸ್ಟೇಡಿಯಂ ಹೊರಗೆ ಕುಸ್ತಿಪಟು ಸಾಗರ್ ರಾಣಾ ಅವರನ್ನು ಕೊಲೆಗೈದು ಹಾಗೂ ಆತನ ಎರಡು ಸ್ನೇಹಿತರ ಮೇಲೆ ಮಾರಣಾಂತಿಕವಾಗಿ ಹಲ್ಲೆ ಮಾಡಲಾಗಿತ್ತು. ಈ ಪ್ರಕರಣಕ್ಕೆ ಸಂಬಂಧಪಟ್ಟಂತೆ ಸುಶೀಲ್ ಹಾಗೂ ಸ್ನೇಹಿತರ ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ. ಸಂತ್ರಸ್ಥರನ್ನು ವಿಚಾರಣೆಗೆ ಒಳಪಡಿಸಿದ್ದು, ಎಲ್ಲರೂ ಸುಶೀಲ್ ಕುಮಾರ್ ಹೆಸರನ್ನು ಹೇಳಿದ್ದಾರೆ. ಇದರಿಂದ ಸುಶೀಲ್ ಕುಮಾರ್ ಆಪ್ತರ ಮನೆ ಮೇಲೆ ದಾಳಿ ಮಾಡುತ್ತಿರುವಾಗಿ ಹೆಚ್ಚುವರಿ ಡಿಸಿಪಿ ಡಾ.ಗುರಿಕ್ಬಾಲ್ ಸಿಂಗ್ ಸಿಂಧು ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts