More

    ಟಿ20ಯಲ್ಲಿ ದ್ವಿಶತಕ ಸಿಡಿಸಿದ ದೆಹಲಿ ಬ್ಯಾಟ್ಸ್‌ಮನ್

    ನವದೆಹಲಿ: ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ನಲ್ಲಿ ದ್ವಿಶತಕ ಯಾವಾಗ ದಾಖಲಾಗಲಿದೆ ಎಂಬ ಚರ್ಚೆಗಳು ನಡೆಯುತ್ತಲೇ ಇವೆ. ಕನಿಷ್ಠ ದ್ವಿಶತಕದ ಸನಿಹವೂ ಇದುವರೆಗೂ ಯಾವ ಬ್ಯಾಟ್ಸ್‌ಮನ್ ಕ್ರಮಿಸಿಲ್ಲ. ಟಿ20 ಕ್ರಿಕೆಟ್‌ನಲ್ಲಿ ಯಾರು ಮೊದಲ ಬಾರಿಗೆ ದ್ವಿಶತಕ ಸಿಡಿಸಲಿದ್ದಾರೆ ಎಂಬ ಚರ್ಚೆಗೆ ಭಾರತದ ರೋಹಿತ್ ಶರ್ಮ, ಆಸೀಸ್‌ನ ಆರನ್ ಫಿಂಚ್, ಡೇವಿಡ್ ವಾರ್ನರ್ ಹೆಸರುಗಳು ಮುನ್ನೆಲೆಗೆ ಬರುತ್ತವೆ. ಇದೀಗ ಕ್ಲಬ್ ಮಟ್ಟದ ಟೂರ್ನಿಯೊಂದರಲ್ಲಿ ದ್ವಿಶತಕವೊಂದು ದಾಖಲಾಗಿದೆ. ದೆಹಲಿಯ ಸುಬೋಧ್ ಭಟ್ಟಿ ಟಿ20 ಕ್ರಿಕೆಟ್‌ನಲ್ಲಿ ದ್ವಿಶತಕ ಸಿಡಿಸಿದ ಭಾರತದ ಮೊದಲ ಬ್ಯಾಟ್ಸ್‌ಮನ್ ಎನಿಸಿಕೊಂಡಿದ್ದಾರೆ.

    ಇದನ್ನೂ ಓದಿ: ಶ್ರೀಲಂಕಾಕ್ಕೆ ಡೆಲ್ಟಾ ಪೆಟ್ಟು; ಕೊನೇಕ್ಷಣದಲ್ಲಿ ಭಾರತ ತಂಡದ ಸರಣಿ ವೇಳಾಪಟ್ಟಿ ಬದಲು

    30 ವರ್ಷದ ಸುಬೋಧ್ ಭಟ್ಟಿ ಕೇವಲ 79 ಎಸೆತಗಳಲ್ಲಿ 205 ರನ್ ಸಿಡಿಸಿದರು. ತಲಾ 17 ಸಿಕ್ಸರ್ ಹಾಗೂ ಬೌಂಡರಿಗಳು ಒಳಗೊಂಡಿವೆ. ಬೌಂಡರಿ, ಸಿಕ್ಸರ್‌ಗಳ ಮೂಲಕವೇ ಸುಬೋಧ್ 170 ರನ್ ಕಲೆಹಾಕಿದರು. ಆರಂಭಿಕ 102 ರನ್ ಕೇವಲ 17 ಎಸೆತಗಳಲ್ಲೇ ಬಂದವು. ದೆಹಲಿ ಇಲೆವೆನ್ ಪ್ರತಿನಿಧಿಸುತ್ತಿರುವ ಸುಬೋಧ್, ಸಿಂಬಾ ತಂಡದ ಎದುರು ಈ ಸಾಧನೆ ಮಾಡಿದ್ದಾರೆ. 2022ರ ಐಪಿಎಲ್‌ಗೆ ಮತ್ತೆರಡು ತಂಡಗಳು ಸೇರ್ಪಡೆಗೊಳ್ಳುವ ಸಾಧ್ಯತೆಗಳಿದ್ದು, ಮೆಗಾ ಹರಾಜು ಪ್ರಕ್ರಿಯೆಗೆ ಕೆಲವೇ ದಿನಗಳು ಬಾಕಿ ಇರುವಾಗಲೇ ಸುಬೋಧ್ ದ್ವಿಶತಕ ಸಿಡಿಸಿ ಮಿಂಚಿದ್ದಾರೆ. ದೆಹಲಿ ಪರ 8 ಪ್ರಥಮ ದರ್ಜೆ, 24 ಲಿಸ್ಟ್ ಎ ಹಾಗೂ 39 ಟಿ20 ಪಂದ್ಯಗಳನ್ನಾಡಿದ್ದಾರೆ.

    ಇದನ್ನೂ ಓದಿ: ಮಾಜಿ ಕ್ರಿಕೆಟಿಗ, ಬಿಸಿಸಿಐ ಮಾಜಿ ಮುಖ್ಯಸ್ಥ ಈಗ ಮೋದಿ ಸಂಪುಟದಲ್ಲಿ ಕ್ರೀಡಾ ಸಚಿವ

    ಶ್ರೀಲಂಕಾದ ಧನುಕ ಪತಿರಾಣಾ 2007ರಲ್ಲಿ ಟಿ20 ಕ್ರಿಕೆಟ್‌ನಲ್ಲಿ ದ್ವಿಶತಕ ಸಿಡಿಸಿದ ವಿಶ್ವದ ಮೊದಲ ಬ್ಯಾಟ್ಸ್‌ಮನ್ ಎನಿಸಿಕೊಂಡಿದ್ದರು. ಧನುಕ ಇಂಗ್ಲೆಂಡ್‌ನ ಲೀಗ್‌ವೊಂದರಲ್ಲಿ ಈ ಸಾಧನೆ ಮಾಡಿದ್ದರು. ಕ್ರಿಸ್ ಗೇಲ್ ಐಪಿಎಲ್‌ನಲ್ಲಿ ಅಜೇಯ 175 ರನ್ ಪೇರಿಸಿರುವುದೇ ಇದುವರೆಗಿನ ಅಧಿಕ ಮೊತ್ತವಾಗಿದ್ದರೆ, 2018ರಲ್ಲಿ ಆಸೀಸ್‌ನ ಆರನ್ ಫಿಂಚ್ ಜಿಂಜಾಬ್ವೆ ಎದುರು 172 ರನ್‌ಗಳಿಸಿರುವುದು ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ದಾಖಲಾಗಿರುವ ವೈಯಕ್ತಿಕ ಗರಿಷ್ಠ ಗಳಿಕೆಯಾಗಿದೆ.

    ಮುಂದಿನ ವರ್ಷ ಧೋನಿ ಐಪಿಎಲ್ ಆಡದಿದ್ದರೆ ಸುರೇಶ್ ರೈನಾ ಕೂಡ ಗುಡ್‌ಬೈ..!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts