More

    ಖಾಸಗಿ ಸುದ್ದಿ ವಾಹಿನಿಯ ಮಹಿಳಾ ಜರ್ನಲಿಸ್ಟ್​ ಸೇರಿ ಮೂವರಿಗೆ 14 ದಿನಗಳ ನ್ಯಾಯಾಂಗ ಬಂಧನ

    ಲುಧಿಯಾನ​: ವೇಗವಾಗಿ ಕಾರು ಚಲಾಯಿಸಿ ದಲಿತ ಮಹಿಳೆಯೋರ್ವರಿಗೆ ಡಿಕ್ಕಿ ಹೊಡೆದ ಘಟನೆಗೆ ಸಂಬಂಧಿಸಿದಂತೆ ದೆಹಲಿ ಮೂಲದ ಟಿವಿ ಜರ್ನಲಿಸ್ಟ್​​ ಭಾವನಾ ಕಿಶೋರ್​ ಸೇರಿದಂತೆ ಮೂವರನ್ನು ಶುಕ್ರವಾರ (ಮೇ 6) ರಂದು ಲುಧಿಯಾನ ಪೊಲೀಸರು ಬಂಧಿಸಿದ್ದಾರೆ.

    ಬಂಧಿತರು ಖಾಸಗಿ ಸುದ್ದಿ ವಾಹಿನಿಯ ವರದಿಗಾರ್ತಿ ಭಾವನಾ ಕಿಶೋರ್, ಆಕೆಯ ಸಹೋದ್ಯೋಗಿ ಮೃತ್ಯುಂಜಯ್ ಕುಮಾರ್ ಮತ್ತು ವಾಹನ ಚಾಲಕ ಪರ್ಮಿಂದರ್ ಸಿಂಗ್ ಎಂದು ಪೊಲೀಸರು ತಿಳಿಸಿದ್ದಾರೆ.

    ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ಮತ್ತು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ಲುಧಿಯಾನದಲ್ಲಿ ಭಾಗವಹಿಸಿದ್ದ ಆಮ್ ಆದ್ಮಿ ಕ್ಲಿನಿಕ್ (ಮೊಹಲ್ಲಾ ಕ್ಲಿನಿಕ್) ಉದ್ಘಾಟನಾ ಸಮಾರಂಭದಲ್ಲಿ ಪಾಲ್ಗೊಳ್ಳಲು ಗಗನ್ ಎಂಬ ಮಹಿಳೆ ತೆರಳುತ್ತಿದ್ದಾಗ ಈ ಘಟನೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ .

    ಮಹಿಳೆ ಮೊಹಲ್ಲಾ ಕ್ಲಿನಿಕ್ ಉದ್ಘಾಟನೆಗೆ ತೆರಳುತ್ತಿದ್ದಾಗ ಈ ಘಟನೆ ಸಂಭವಿಸಿದ್ದು, ಸಿಎಂ ಭಗವಂತ್ ಮಾನ್ ಮತ್ತು ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಕೂಡ ಉಪಸ್ಥಿತರಿದ್ದರು. ಉದ್ಘಾಟನಾ ಸ್ಥಳಕ್ಕೆ ವೇಗವಾಗಿ ಬರುತ್ತಿದ್ದ ವರದಿಗಾರ್ತಿ ಭಾವನಾ ಇದ್ದ ಇನ್ನೋವಾ ಕಾರು ಮಹಿಳೆಗೆ ಡಿಕ್ಕಿ ಹೊಡೆದ ಪರಿಣಾಮ ಮಹಿಳೆಯ ಬಲಗೈಗೆ ಗಾಯವಾಗಿದ್ದು, ಆಕೆಯ ಫೋನ್ ಕೆಳಗೆ ಬಿದ್ದು ಒಡೆದಿದೆ.

    ಇದನ್ನೂ ಓದಿ: ವಿವಾದಾತ್ಮಕ ಚಿತ್ರ ‘ದಿ ಕೇರಳ ಸ್ಟೋರಿ’ಗೆ ತೆರಿಗೆ ವಿನಾಯಿತಿ!

    ಆದರೆ ಕಾರಿನಿಂದ ಇಳಿದ ಕೂಡಲೇ ಭಾವನಾ ಕಿಶೋರ್​ ಹಾಗೂ ಆಕೆಯ ಜತೆಗಿದ್ದ ಮೂವರು ತನ್ನ ವಿರುದ್ಧ ಜಾತಿನಿಂದನೆ ಹಾಗೂ ಅವಾಚ್ಯ ಶಬ್ಧಗಳಿಂದ ನಿಂದಿಸಿದ್ದಾರೆ ಎಂದು ಮಹಿಳೆ ತಮ್ಮ ದೂರಿನಲ್ಲಿ ದಾಖಲಿಸಿರುವುದಾಗಿ ಲುಧಿಯಾನ ಪೊಲೀಸರು ತಿಳಿಸಿದ್ದಾರೆ.

    ಮಹಿಳೆಯ ದೂರಿನ ಮೇರೆಗೆ ಲೂಧಿಯಾನದ ಸ್ಥಳೀಯ ನ್ಯಾಯಾಲಯವು ಮೂವರು ಆರೋಪಿಗಳನ್ನು 14 ದಿನಗಳ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ಪೊಲೀಸರು ಭಾರತೀಯ ದಂಡ ಸಂಹಿತೆಯ (IPC) ಸೆಕ್ಷನ್ 279, 337 ಮತ್ತು 427 ಮತ್ತು SC/ST ಕಾಯ್ದೆಯ ಸೆಕ್ಷನ್ 3 ಮತ್ತು 4 ರ ಅಡಿಯಲ್ಲಿ ಪ್ರಕರಣವನ್ನು ದಾಖಲಿಸಿದ್ದಾರೆ.

    ಶಿವರಾಜ್​ಕುಮಾರ್​​ ಬಗ್ಗೆ ಅವಹೇಳನಕಾರಿ ಪೋಸ್ಟ್ ಮಾಡಿದ ಪ್ರಶಾಂತ್ ಸಂಬರಗಿ; ಅಭಿಮಾನಿಗಳು ಗರಂ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts