More

    ಕಾಂತಿಯುತ ತ್ವಚೆ ಪಡೆಯುವ ಆಸೆಯೇ? ಹಾಗಿದ್ದರೆ ಮನೆಯಲ್ಲೇ ಸಿಗುವ ಈ ಫೇಸ್​​ಪ್ಯಾಕ್​ಗಳನ್ನು ಬಳಸಿ!

    ಸಾಮಾನ್ಯವಾಗಿ ಹೆಣ್ಣು ಮಕ್ಕಳಿಗೆ ತಮ್ಮ ತ್ವಚೆಯ ಮೇಲೆ ಕಾಳಜಿ ಹೆಚ್ಚು. ಹೀಗಾಗಿ ಪುರುಷರಿಗಿಂತ ಹೆಚ್ಚು ಮಹಿಳೆಯರು ಸೌಂದರ್ಯವರ್ಧಕಗಳನ್ನು ತಮ್ಮ ದಿನನಿತ್ಯದ ಜೀವನದಲ್ಲಿ ಬಳಕೆ ಮಾಡುತ್ತಾರೆ. ಮುಖದ ಕಾಂತಿ ಹೆಚ್ಚಿಸುವ ಸಲುವಾಗಿ ಅನೇಕ ದುಬಾರಿಯ ಔಷಧಗಳ ಮೊರೆ ಹೋಗುವವರೂ ಇದ್ದಾರೆ. ಇನ್ನೂ ಕೆಲವರಿಗೆ ತಮ್ಮ ತ್ವಚೆಯ ಮೇಲೆ ಅತಿಯಾದ ಕಾಳಜಿ. ಸಣ್ಣ ಪುಟ್ಟ ಮೊಡವೆಗಳಿಗೆಲ್ಲ ವೈದ್ಯರ ಬಳಿ ಹೋಗಿ ಔಷಧಗಳನ್ನು ಪಡೆಯುತ್ತಾರೆ. ಆದರೆ ಹೊಳಪಿನ ತ್ವಚೆಯ ರಹಸ್ಯ ಅಡಗಿರುವುದು ನಮ್ಮ ಮುತ್ತಲಲ್ಲಿ ದೊರಕುವ ಗಿಡಮೂಲಿಕೆಗಳು, ತರಕಾರಿ, ಹಣ್ಣುಗಳ ಪೇಸ್ಟ್​ ಬಳಸುವ ಮೂಲಕ ಮುಖದ ಕಾಂತಿ ಹೆಚ್ಚಿಸಬಹುದು. ನೈಸರ್ಗಿಕವಾಗಿ ಮುಖದ ಕಾಂತಿ ಹೆಚ್ಚಿಸಲು ಸರಳ ಮನೆ ಮದ್ದುಗಳು ಇಲ್ಲಿವೆ.

    ಕಡ್ಲೆಹಿಟ್ಟಿನ ಫೇಸ್​​ಪ್ಯಾಕ್​
    ಕಡ್ಲೆಹಿಟ್ಟಿನ ಫೇಸ್​ಪ್ಯಾಕ್​ ವಾರಕ್ಕೆ 3 ಬಾರಿಯಂತೆ ಮುಖಕ್ಕೆ ಹಚ್ಚುವ ಮೂಲಕ ಮುಖದ ಕಾಂತಿಯನ್ನು ಹೆಚ್ಚಿಸಬಹುದು. ಮೊದಲಿಗೆ 2 ಟೇಬಲ್​ ಸ್ಪೂನ್​ ಕಡ್ಲೆಹಿಟ್ಟನ್ನು ಹಾಲಿನೊಂದಿಗೆ ಅಥವಾ ನೀರಿನ ಜತೆ ಬೆರೆಸಿ ಕಲಸಿಡಬೇಕು. ಮುಖವನ್ನು ತೊಳೆದು ಒಣಗಿದ ಬಟ್ಟೆಯಲ್ಲಿ ಒರೆಸಿದ ನಂತರ ಫೇಸ್​​ಪ್ಯಾಕ್​ ಹಚ್ಚಿ 5-10 ನಿಮಿಷಗಳ ಕಾಲ ಬಿಟ್ಟು ತದನಂತರ ತೊಳೆಯಬೇಕು. ಹೀಗೆ ಮಾಡಿದರೆ ಕೇವಲ 3 ತಿಂಗಳೊಳಗೆ ಉತ್ತಮ ತ್ವಚೆಯನ್ನು ಪಡೆಯಲು ಸಾಧ್ಯ.

    ಆಲೂಗಡ್ಡೆ ಪೇಸ್ಟ್​
    ಮುಖದ ಮೇಲಿನ ಮೊಡವೆ ಕಲೆಗಳನ್ನು ತೆಗೆಯುವುದರಲ್ಲಿ ಆಲೂಗಡ್ಡೆ ಫೇಸ್​​ಪ್ಯಾಕ್​ ರಾಮಬಾಣ ಎಂದರೆ ತಪ್ಪಾಗಲ್ಲ. ಮೊದಲಿಗೆ ಆಲೂಗಡ್ಡೆಯನ್ನು ಚೆನ್ನಾಗಿ ನೀರಿನಲ್ಲಿ ತೊಳೆದು ತೆಗೆದಿಟ್ಟುಕೊಳ್ಳಬೇಕು. ನಂತರ ಅದರ ಸಿಪ್ಪೆಯನ್ನು ತೆಗೆದು ಪೇಸ್ಟ್​ ಮಾಡಿಕೊಳ್ಳಬೇಕು. ಈ ರೀತಿ ಮಾಡಿಕೊಂಡ ಕೂಡಲೇ ಅದನ್ನು ಮುಖಕ್ಕೆ ಹಚ್ಚಿ ಒಣಗಿದ ನಂತರ ತೊಳೆದರೆ ಮುಖದ ಹೊಳಪು ಹೆಚ್ಚುವ ಜತೆಗೆ ಮೊಡವೆ ಕಲೆಗಳು, ಕಪ್ಪು ಕಲೆಗಳು, ಕ್ರಮೇಣ ಗಾಯದ ಕಲೆಗಳೂ ಮಾಯವಾಗುತ್ತವೆ.

    ಇದನ್ನೂ ಓದಿ: ಗಂಡ ಹೆಂಡತಿಯರು ತಿಳಿದುಕೊಳ್ಳಲೇಬೇಕಾದ ಸುಖ ದಾಂಪತ್ಯ ಜೀವನದ 9 ರಹಸ್ಯಗಳು!

    ಹಾಲಿನ ಕೆನೆ
    ಮನೆಯಲ್ಲೇ ಸುಲಭವಾಗಿ ಸಿಗುವ ಹಾಲಿನ ಕೆನೆಯಿಂದ ಕಡಿಮೆ ಸಮಯದಲ್ಲಿಯೇ ಫೇಸ್​ಪ್ಯಾಕ್​ ಮಾಡಿಕೊಳ್ಳಬಹುದು. ಹಾಲನ್ನು ಕಾಯಿಸಿ ಆರಿಸಿದ ನಂತರ ಅದರಲ್ಲಿ ಸಿಗುವ ಕೆನೆಯನ್ನು ತೆಗೆಯಬೇಕು. ನಂತರ ಅದನ್ನು ಒಂದು ಬಟ್ಟಲಿನಲ್ಲಿ ಇಟ್ಟುಕೊಳ್ಳಬೇಕು. ಅದಕ್ಕೆ ಅರ್ಧ ಚಮಚ ಅರಿಶಿನ ಬೆರೆಸಿ ಕಲಸಿ ಮುಖಕ್ಕೆ ಹಚ್ಚಿದರೆ ಮುಖದ ಕಾಂತಿ ಹೆಚ್ಚುತ್ತದೆ. ಹಾಲಿನ ಕೆನೆಯ ಫೇಸ್​ಪ್ಯಾಕನ್ನು ಪ್ರತಿನಿತ್ಯ ಬಳಸಬಹುದು.

    ತ್ವಚೆಯ ಆರೋಗ್ಯದ ಜತೆಗೆ ದೈಹಿಕ ಆರೋಗ್ಯವೂ ಮುಖ್ಯ. ಕೇವಲ ಮುಖಕ್ಕೆ ಇವುಗಳನ್ನು ಹಚ್ಚಿ ದೇಹದ ಸರಿಯಾದ ಪೋಷ್ಟಿಕಾಂಶ ಸಿಗದಿದ್ದರೆ ಈ ಮನೆಮದ್ದು ಫಲಕಾರಿಯಾಗುವುದಿಲ್ಲ. ಇದರ ಜತೆಗೆ ನಿತ್ಯ ಸರಿಯಾದ ಪ್ರಮಾಣದಲ್ಲಿ ನೀರು ಕುಡಿಯುವುದು, ನಿದ್ದೆ ಸರಿಯಾಗಿ ಮಾಡುವುದು, ಯೋಗ-ವ್ಯಾಯಾಮ ಮಾಡುವುದು, ಹಣ್ಣು, ಸೊಪ್ಪು, ತರಕಾರಿಗಳನ್ನು ತಿಂದರೆ ದೈಹಿಕ ಆರೋಗ್ಯವೂ ಸುಧಾರಿಸಿ ಶೀಘ್ರದಲ್ಲೇ ಹೊಳಪಿನ ತ್ವಚೆ ಪಡೆಯಲು ಸಾಧ್ಯ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts