More

    ಇಂದು ಡೆಲ್ಲಿ ಕ್ಯಾಪಿಟಲ್ಸ್-ರಾಜಸ್ಥಾನ ರಾಯಲ್ಸ್ ಮುಖಾಮುಖಿ

    ಅಬುಧಾಬಿ: ಯುವ ವೇಗಿ ಕಾರ್ತಿಕ್ ತ್ಯಾಗಿ ಕಡೇ ಓವರ್‌ನಲ್ಲಿ ಮಾಡಿದ ಮ್ಯಾಜಿಕ್‌ನಿಂದ ಪಂಜಾಬ್ ಕಿಂಗ್ಸ್ ಎದುರು ರೋಚಕ ಜಯ ದಾಖಲಿಸಿದ ವಿಶ್ವಾಸದಲ್ಲಿರುವ ರಾಜಸ್ಥಾನ ರಾಯಲ್ಸ್ ತಂಡ ಐಪಿಎಲ್-14ರ ಎರಡನೇ ಭಾಗದ ಹಣಾಹಣಿಯಲ್ಲಿ ಪ್ಲೇಆಫ್ ಸನಿಹದಲ್ಲಿರುವ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ಶನಿವಾರ ಎದುರಿಸಲಿದೆ. ಪ್ಲೇಆಫ್ ಹಂತಕ್ಕೇರಲು ಅವಕಾಶ ಹೊಂದಿರುವ ರಾಜಸ್ಥಾನ ರಾಯಲ್ಸ್ ತಂಡ ಗೆಲ್ಲಲೇಬೇಕಾದ ಒತ್ತಡದಲ್ಲಿದೆ. ಮತ್ತೊಂದೆಡೆ, ಮುಂಬೈನಲ್ಲಿ ನಡೆದ ಮೊದಲ ಪಂದ್ಯದಲ್ಲಿ ರಾಜಸ್ಥಾನಕ್ಕೆ ಶರಣಾಗಿದ್ದ ಡೆಲ್ಲಿ ತಂಡ ಸೇಡು ತೀರಿಸಿಕೊಳ್ಳುವ ತವಕದಲ್ಲಿದೆ. ರಿಷಭ್ ಪಂತ್ ಬಳಗ ಜಯ ದಾಖಲಿಸಿದರೆ ಮೊದಲ ತಂಡವಾಗಿ ಪ್ಲೇಆಫ್ ಹಂತಕ್ಕೆ ಪ್ರವೇಶಿಸಲಿದೆ.
    ಆತ್ಮವಿಶ್ವಾಸದಲ್ಲಿ ರಾಜಸ್ಥಾನ: ಮೊದಲ ಚರಣದ ಪಂದ್ಯದಲ್ಲಿ ಪರದಾಡುತ್ತಿದ್ದ ರಾಜಸ್ಥಾನ ತಂಡ ಎರಡನೇ ಭಾಗದಲ್ಲಿ ಪಂಜಾಬ್ ತಂಡವನ್ನು ಮಣಿಸಿ ಶುಭಾರಂಭ ಕಂಡಿದೆ. ಯಶಸ್ವಿ ಜೈಸ್ವಾಲ್, ಮಹಿಪಾಲ್ ಲೊಮ್ರರ್‌ರಂಥ ಯುವ ಬ್ಯಾಟ್ಸ್‌ಮನ್‌ಗಳು ಸ್ಫೋಟಿಸುತ್ತಿದ್ದರೆ, ನಾಯಕ ಸಂಜು ಸ್ಯಾಮ್ಸನ್ ಬ್ಯಾಟಿಂಗ್‌ನಲ್ಲಿ ವಿಫಲರಾಗುತ್ತಿದ್ದಾರೆ. ವೇಗದ ಬೌಲರ್‌ಗಳ ಪೈಕಿ ಕಾರ್ತಿಕ್ ತ್ಯಾಗಿ, ಮುಸ್ತಾಫಿಜುರ್ ಹಿಂದಿನ ಪಂದ್ಯದಲ್ಲಿ ಉತ್ತಮ ನಿರ್ವಹಣೆ ತೋರಿದ್ದರು.

    ಡೆಲ್ಲಿ ಗೆದ್ದರೆ ಪ್ಲೇಆಫ್ ಖಾತ್ರಿ
    ಹಿಂದಿನ ಪಂದ್ಯದಲ್ಲಿ ಸನ್‌ರೈಸರ್ಸ್‌ ಎದುರು ಸುಲಭ ಜಯ ದಾಖಲಿಸಿರುವ ಡೆಲ್ಲಿ ತಂಡಕ್ಕೆ ಆರಂಭಿಕರಾದ ಶಿಖರ್ ಧವನ್ ಹಾಗೂ ಪೃಥ್ವಿ ಷಾ ಉತ್ತಮ ಆರಂಭ ನೀಡುತ್ತಿದ್ದಾರೆ. ಶ್ರೇಯಸ್ ಅಯ್ಯರ್, ಸ್ಟೀವನ್ ಸ್ಮಿತ್, ಶಿಮ್ರೋನ್ ಹೆಟ್ಮೆಯರ್ ಒಳಗೊಂಡ ಬ್ಯಾಟಿಂಗ್ ಪಡೆ ಬಲಿಷ್ಠವಾಗಿದೆ. ವೇಗಿ ಆವೇಶ್ ಖಾನ್, ದ.ಆಫ್ರಿಕಾದ ವೇಗಿ ಕಗಿಸೊ ರಬಾಡ, ಅನ್ರಿಚ್ ನೋಕಿಯ ಒಳಗೊಂಡ ಬೌಲಿಂಗ್ ಪಡೆ ಬಲಿಷ್ಠವಾಗಿದೆ. ಇದುವರೆಗೆ ಆಡಿರುವ 9 ಪಂದ್ಯಗಳಲ್ಲಿ 7ರಲ್ಲಿ ಗೆದ್ದು, 2 ಪಂದ್ಯಗಳಲ್ಲಿ ಸೋಲನುಭವಿಸಿರುವ ಡೆಲ್ಲಿ ತಂಡ ಪ್ಲೇಆಫ್ ಸನಿಹದಲ್ಲಿದೆ.

    *ಟೀಮ್ ನ್ಯೂಸ್:
    ಡೆಲ್ಲಿ: ಗಾಯಾಳು ಮಾರ್ಕಸ್ ಸ್ಟೋಯಿನಿಸ್ ಬದಲಿಗೆ ಸ್ಟೀವನ್ ಸ್ಮಿತ್ ಕಣಕ್ಕಿಳಿಯುವ ಸಾಧ್ಯತೆಗಳಿವೆ. ಉಳಿದಂತೆ ಬದಲಾವಣೆ ನಿರೀಕ್ಷಿಸುವಂತಿಲ್ಲ.
    ರಾಜಸ್ಥಾನ: ಹಿಂದಿನ ಪಂದ್ಯದಲ್ಲಿ ಆಡಿದ ತಂಡವೇ ಬಹುತೇಕ ಕಣಕ್ಕಿಳಿಯಲಿದೆ.

    ಮುಖಾಮುಖಿ: 23, ರಾಜಸ್ಥಾನ : 12, ಡೆಲ್ಲಿ: 11
    ಮೊದಲ ಮುಖಾಮುಖಿ: ರಾಜಸ್ಥಾನ ರಾಯಲ್ಸ್‌ಗೆ 3 ವಿಕೆಟ್ ಜಯ
    ಪಂದ್ಯ ಆರಂಭ: ಮಧ್ಯಾಹ್ನ 3.30ಕ್ಕೆ
    ನೇರಪ್ರಸಾರ: ಸ್ಟಾರ್ ಸ್ಪೋರ್ಟ್ಸ್ ನೆಟ್‌ವರ್ಕ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts