More

    ಐವರು ಅಧಿಕಾರಿಗಳಿಂದ ಐದು ತಾಸು ವಿಚಾರಣೆ; ಸತ್ಯ ಒಪ್ಪಿಕೊಂಡ ನಟಿ ದೀಪಿಕಾ ಪಡುಕೋಣೆ

    ಮುಂಬೈ: ಡ್ರಗ್ಸ್​ ಕೇಸ್​​ಗೆ ಸಂಬಂಧಪಟ್ಟಂತೆ ಇಂದು ಬಾಲಿವುಡ್​ ನಟಿ ದೀಪಿಕಾ ಪಡುಕೋಣೆ ಅವರನ್ನು ಎನ್​ಸಿಬಿ ಅಧಿಕಾರಿಗಳು ಇಂದು ವಿಚಾರಣೆ ನಡೆಸಿದ್ದಾರೆ.

    ದೀಪಿಕಾ ತಮ್ಮ ಮ್ಯಾನೇಜರ್​ ಕರಿಷ್ಮಾ ಪ್ರಕಾಶ್​ ಜತೆಗೆ ಡ್ರಗ್ಸ್​ ಬಗ್ಗೆ ನಡೆಸಿದ ವಾಟ್ಸ್​​ಆ್ಯಪ್​ ಚಾಟ್​ ಫೋಟೋ ವೈರಲ್​ ಆಗಿತ್ತು. ಅದೇ ಬೆನ್ನಲ್ಲೇ ದೀಪಿಕಾ ಪಡುಕೋಣೆಗೆ ಎನ್​ಸಿಬಿ ಸಮನ್ಸ್​ ನೀಡಿತ್ತು. ಈಗಾಗಲೇ ಅಧಿಕಾರಿಗಳಿಂದ ವಿಚಾರಣೆಗೆ ಒಳಪಟ್ಟಿರುವ ಕರಿಷ್ಮಾ, ಡ್ರಗ್ಸ್ ಕುರಿತು ಚಾಟ್​ ನಡೆದಿರುವ ವಾಟ್ಸ್​​ಆ್ಯಪ್​ ಗ್ರೂಪ್​ಗೆ ದೀಪಿಕಾ ಅವರೇ ಅಡ್ಮಿನ್​ ಆಗಿದ್ದರು ಎಂಬ ವಿಷಯವನ್ನು ಬಾಯ್ಬಿಟ್ಟಿದ್ದಾರೆ ಎನ್ನಲಾಗಿದೆ. ಇದನ್ನೂ ಓದಿ: ಸುಶಾಂತ್​ ಜತೆ ಪಾರ್ಟಿ ಮಾಡಿದ್ದು ಹೌದು … ಒಪ್ಪಿಕೊಂಡ ಶ್ರದ್ಧಾ ಕಪೂರ್​

    ಹಾಗೇ ಇಂದು ದೀಪಿಕಾ ಪಡುಕೋಣೆಯವರೂ ಕೂಡ ತಾವು ಡ್ರಗ್ಸ್​ಗೆ ಸಂಬಂಧಪಟ್ಟಂತೆ 2017ರಲ್ಲಿ ಕರಿಷ್ಮಾ ಜತೆಗೆ ಚಾಟ್​ ಮಾಡಿರುವುದು ಸತ್ಯ ಎಂದು ಎನ್​ಸಿಬಿ ಎದುರು ಒಪ್ಪಿಕೊಂಡಿದ್ದಾರೆ ಎಂದು ಉನ್ನತ ಮೂಲಗಳು ತಿಳಿಸಿವೆ.
    ಆದರೆ ದೀಪಿಕಾ ತಾವು ಡ್ರಗ್ಸ್​ ಸೇವನೆ ಮಾಡುತ್ತಿದ್ದರೋ..ಬೇರೆಯವರಿಗಾಗಿ ಈ ಚಾಟ್​ ನಡೆದಿತ್ತೋ ಎಂಬ ಬಗ್ಗೆ ಇನ್ನೂ ಯಾವುದೇ ವಿಚಾರ ಹೊರಬಿದ್ದಿಲ್ಲ.

    ಇಂದು ಬೆಳಗ್ಗೆ ದಕ್ಷಿಣ ಮುಂಬೈನಲ್ಲಿ ಇರುವ ಎನ್​ಸಿಬಿ ಕಚೇರಿಗೆ ಹಾಜರಾದ ದೀಪಿಕಾ ಪಡುಕೋಣೆಯವರನ್ನು ತನಿಖಾದಳದ ನಿರ್ದೇಶಕ ಕೆಪಿಎಸ್​ ಮಲ್ಹೋತ್ರಾ ನೇತೃತ್ವದ ಐವರು ಅಧಿಕಾರಿಗಳ ತಂಡ ಸುಮಾರು 5 ತಾಸುಗಳ ಕಾಲ ವಿಚಾರಣೆ ನಡೆಸಿದೆ. (ಏಜೆನ್ಸೀಸ್​)

    ಎನ್​ಸಿಬಿ ಕಚೇರಿ ತಲುಪಿದ್ರು ದೀಪಿಕಾ ಪಡುಕೋಣೆ

    VIDEO| ಮರ್ಸಿಡಿಸ್ ಬೆಂಜ್​ನಿಂದ ಭಾರತದಲ್ಲಿ ‘ಎಎಂಜಿ ಜಿಎಲ್​ಇ 53 4ಮ್ಯಾಟಿಕ್​ ಪ್ಲಸ್​ ಕೂಪೆ’ ಕಾರು ಬಿಡುಗಡೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts