More

    ದೀಪಾವಳಿ ಖರೀದಿಗೆ ಮುಗಿಬಿದ್ದ ಜನ

    ಉಡುಪಿ: ಕರೊನಾ ಸಂಕಷ್ಟದ ಮಧ್ಯೆಯೂ ದೀಪಾವಳಿಗೆ ಜಿಲ್ಲೆಯಲ್ಲಿ ಭರದ ಸಿದ್ಧತೆ ನಡೆಯುತ್ತಿದ್ದು, ಕಳೆದ 2-3 ದಿನಗಳಿಂದಲೂ ನಗರದ ವಿವಿಧ ಶಾಪಿಂಗ್ ಮಾಲ್, ಮಾರುಕಟ್ಟೆ, ರಥಬೀದಿಯಲ್ಲಿ ಸಂದಣಿ ಹೆಚ್ಚಾಗಿದ್ದು, ಜನರು ಹಬ್ಬದ ಖರೀದಿಯಲ್ಲಿ ತೊಡಗಿದ್ದರು.

    ಶುಕ್ರವಾರದಿಂದ ನಗರದ ಹಲವೆಡೆ ಹಸಿರು ಪಟಾಕಿ ಮಳಿಗೆಗಳನ್ನು ತೆರೆಯಲಾಗಿದೆ. ಸಾಯಂಕಾಲ 5 ಗಂಟೆಯಿಂದಲೇ ನಗರದ ವಿಧದೆಡೆ ಟ್ರಾಫಿಕ್ ಜಾಮ್ ಉಂಟಾಗಿದ್ದು, ಪ್ರಮುಖ ಸ್ಥಳಗಳಲ್ಲಿ ನಿಯೋಜಿತರಾಗಿದ್ದ ಪೊಲೀಸರು ವಾಹನ ಸುಗಮ ಸಂಚಾರಗೊಳಿಸಲು ಹರಸಾಹ ಪಡುತ್ತಿದ್ದರು.

    ಕಾಗದದ ಗೂಡುದೀಪಕ್ಕೆ ಬೇಡಿಕೆ: ಈ ಬಾರಿ ದೀಪಾವಳಿಗೆ ಬಣ್ಣ ಬಣ್ಣ ಗೂಡು ದೀಪಗಳು ಲಗ್ಗೆ ಇಟ್ಟಿದ್ದರೂ ಜನರು ಹೆಚ್ಚಾಗಿ ಪ್ಲಾಸ್ಟಿಕ್ ರಹಿತ ಗೂಡುದೀಪಗಳನ್ನು ಆಯ್ಕೆ ಮಾಡಿಕೊಳ್ಳುತ್ತಿದ್ದರು. ಪ್ಲಾಸ್ಟಿಕ್ ಕಾಗದ ರಹಿತ ಗೂಡು ದೀಪ 300 ರೂಪಾಯಿಯಿಂದ 500 ರೂ. ವರೆಗಿನ ಮಾರಾಟವಾಗಿವೆ. ಆವೆ ಮಣ್ಣಿನಿಂದ ತಯಾರಿಸಿದ ಹಣತೆಗೆ ಹೆಚ್ಚಿನ ಬೇಡಿಕೆ ಇತ್ತು. 1 ರೂಪಾಯಿಯಿಂದ 5 ರೂ.ವರೆಗಿನ ಹಣತೆಗಳು ಮಾರುಕಟ್ಟೆಯಲ್ಲಿವೆ. ಪಿಂಗಾಣಿ ಹಣತೆಗೆ 5 ರಿಂದ 20ರೂ. ತನಕ ದರ ನಿಗದಿಯಾಗಿದೆ.

    ತರಕಾರಿ ದರ ಯಥಾಸ್ಥಿತಿ
    ರಾಜ್ಯ ಹಾಗೂ ಹೊರ ರಾಜ್ಯದಿಂದ ಮಾರುಕಟ್ಟೆಗೆ ತರಕಾರಿ ಪೂರೈಕೆ ಹೆಚ್ಚಳವಾಗುತ್ತಿರುವುದರಿಂದ ಬೆಲೆ ಯಥಾಸ್ಥಿತಿಯಲ್ಲಿದೆ. ಆದರೆ ಹಣ್ಣುಗಳ ಬೆಲೆಯಲ್ಲಿ ಸ್ವಲ್ಪ ಏರಿಕೆಯಾಗಿದೆ. ಬೀನ್ಸ್ 40, ಕ್ಯಾರೆಟ್ 70, ಬೀಟ್ರೋಟ್ 40, ಬೆಂಡೆ 40, ಟೊಮೇಟೋ 30 , ಬಟಾಟೆ 50, ಈರುಳ್ಳಿ 70, ಸೌತೆ 20, ಪೆರಂಪಳ್ಳಿ ಗುಳ್ಳ 60, ಅಲಸಂಡೆ 40, ಅರಿಸಿನ ಎಲೆ 40 (ಕಟ್ಟಿಗೆ). ಮೂಸಂಬಿ 100 (80), ದಾಳಿಂಬೆ 140 (120), ಸೇಬು (130) 120, ಕಿತ್ತಳೆ 50, ದ್ರಾಕ್ಷಿ 70, 80 ಚುಕ್ಕು 60, ಬಾಳೆಹಣ್ಣು 80 (70).

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts