More

    ಯೋಗ್ಯ ದರದಲ್ಲಿ ಬೀಜ ವಿತರಿಸಿ

    ಮೂಡಲಗಿ: ಮುಂಗಾರು ಹಂಗಾಮು ಶುರುವಾಗಲಿದ್ದು, ಕೃಷಿ ಪರಿಕರ ಮಾರಾಟಗಾರರು ಬೀಜ, ರಸಗೊಬ್ಬರ ಹಾಗೂ ಕೀಟನಾಶಕಗಳನ್ನು ಸಮರ್ಪಕವಾಗಿ ದಾಸ್ತಾನು ಮಾಡಿಕೊಂಡು ರೈತರಿಗೆ ನಿಗದಿತ ದರದಲ್ಲಿ ನೀಡಬೇಕು ಎಂದು ಚಿಕ್ಕೋಡಿ ವಿಭಾಗದ ಕೃಷಿ ಇಲಾಖೆ ಉಪ ನಿರ್ದೇಶಕ ಎಲ್.ಐ.ರೂಡಗಿ ಸೂಚಿಸಿದರು.

    ಶನಿವಾರ ಘಟಪ್ರಭಾ, ರಾಜಾಪುರ, ನಾಗನೂರ ಹಾಗೂ ಮೂಡಲಗಿ ಪಟ್ಟಣದ ಕೃಷಿ ಪರಿಕರ ಮಾರಾಟ ಮಳಿಗೆಗಳಿಗೆ ಭೇಟಿ ನೀಡಿ ಮಾತನಾಡಿದರು. ಕಳಪೆ ಬೀಜ, ರಸಗೊಬ್ಬರ ಕೊರತೆ ಬಗ್ಗೆ ದೂರು ಬಂದಲ್ಲಿ ತಮ್ಮನ್ನೇ ಹೊಣೆಗಾರರನ್ನಾಗಿ ಮಾಡಲಾಗುವುದು ಎಂದು ಕೃಷಿ ಪರಿಕರ ಮಾರಾಟಗಾರರಿಗೆ ಎಚ್ಚರಿಕೆ ನೀಡಿದರು.

    ರಾಜಾಪುರ ಹಾಗೂ ನಾಗನೂರ ರೈತ ಉತ್ಪಾದಕ ಸಂಸ್ಥೆಗಳಿಗೆ ಭೇಟಿ ನೀಡಿದರು. ಸಹಾಯಕ ಕೃಷಿ ನಿರ್ದೇಶಕ ಎಂ.ಎಂ.ನದಾಫ್, ಸಂಪರ್ಕ ಕೇಂದ್ರದ ಕೃಷಿ ಅಧಿಕಾರಿಗಳಾದ ಶಂಕರ ಹಳ್ಳದಮನಿ, ಪರಸಪ್ಪ ಹುಲಗಬಾಳಿ, ಸಹಾಯಕ ಕೃಷಿ ಅಧಿಕಾರಿ ವಿ.ಬಿ.ಬೀರಾಜ, ವಿ.ಜಿ.ಮೇತ್ರಿ, ವಿ.ಟಿ.ಸನದಿ ಹಾಗೂ ಆತ್ಮಾ ಸಿಬ್ಬಂದಿ ಪೂರ್ಣಿಮಾ ಒಡ್ರಾಳೆ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts