More

    ಸಿಕ್ಕಿದ್ದು 30 ಗ್ರಾಂ ಹೆರಾಯಿನ್​; ಕೊಟ್ಟಿದ್ದು ಮರಣದಂಡನೆ; ಕ್ಯಾಸಿನೋಗಳಷ್ಟೇ ಅಲ್ಲ, ಶ್ರೀಲಂಕಾದಲ್ಲಿದೆ ಕಠಿಣ ಕಾನೂನು

    ಬೆಂಗಳೂರು: ಸದ್ಯ ರಾಜ್ಯದಲ್ಲಿ ಶ್ರೀಲಂಕಾದ ಕ್ಯಾಸಿನೋಗಳ ಬಗ್ಗೆ ಭಾರಿ ಚರ್ಚೆಯಾಗುತ್ತಿದೆ. ಇಲ್ಲಿ ನಡೆಯುವ ಪಾರ್ಟಿಗಳಿಗೆ ದೊಡ್ಡಕುಳಗಳು ತೆರಳುವುದು ಕೂಡ ಅಷ್ಟೇ ಸಾಮಾನ್ಯವಾಗಿದೆ. ಈ ಕ್ಯಾಸಿನೋಗಳಲ್ಲಿ ಜೂಜಾಟದ ಜತೆಗೆ ಮಾದಕಲೋಕವೂ ತೆರೆದುಕೊಳ್ಳುತ್ತದೆ.

    ಶ್ರೀಲಂಕಾದಲ್ಲಿ ಕೃತಕವಾಗಿ ತಯಾರಿಸಲಾಗುವ ಮಾದಕ ವಸ್ತುಗಳ ಹಾವಳಿ ಜೋರಾಗಿದೆ. ಇಲ್ಲಿನ ಅಧಿಕಾರಿಗಳು ಪದೇಪದೆ ದಾಳಿ ನಡೆಸಿ ಅಪಾರ ಪ್ರಮಾಣದಲ್ಲಿ ಮಾದಕ ವಸ್ತುಗಳನ್ನು ವಶಪಡಿಸಿಕೊಳ್ಳುತ್ತಲೇ ಇದ್ದಾರೆ.

    ಇದನ್ನೂ ಓದಿ; ಪಿಎಫ್​ ಗ್ರಾಹಕರಿಗೆ ಸಿಗಲಿದೆ ಏಳು ಲಕ್ಷ ರೂ. ವಿಮಾ ಹಣ..! 

    ಮಾದಕ ವಸ್ತುಗಳ ಹಾವಳಿಯನ್ನು ನಿಯಂತ್ರಿಸಲು ಇಲ್ಲಿ ಅಷ್ಟೇ ಕಠಿಣ ನಿಯಮಗಳನ್ನು ರೂಪಿಸಲಾಗಿದೆ. ಕೇವಲ 30 ಗ್ರಾಂ ಮಾದಕ ವಸ್ತು ಹೊಂದಿದ್ದ ವ್ಯಕ್ತಿಗೆ ಕೊಲಂಬೋ ಹೈಕೋರ್ಟ್​ ಗುರುವಾರ ಮರಣ ದಂಡನೆ ವಿಧಿಸಿದೆ.

    ಕೊಲಂಬೋದ ಮತ್ತಾಕುಲಿಯಾ ಪ್ರದೇಶದ ನಿವಾಸಿ 28 ವರ್ಷದ ನುವಾನ್​ ಸಂಜೀವಾ ಎಂಬಾತನ ಬಳಿ 29.71 ಗ್ರಾಂ ಹೆರಾಯಿನ್​ ಸಿಕ್ಕಿತ್ತು. ಬಂದರು ಭ್ರಷ್ಟಾಚಾರ ನಿಗ್ರಹ ದಳದ ಅಧಿಕಾರಿಗಳು 2018ರ ಏಪ್ರಿಲ್​ 16ರಂದು ನುವಾನ್​ ಬಳಿಯಿಂದ ಇದನ್ನು ವಶಪಡಿಸಿಕೊಂಡಿದ್ದರು. ಡ್ರಗ್ಸ್​ ಹೊಂದಿ ಅದನ್ನು ಪೂರೈಕೆ ಮಾಡುತ್ತಿದ್ದ ಎಂಬುದು ಯಾವುದೇ ಗೊಂದಲಕ್ಕೆ ಎಡೆಯಿಲ್ಲದಂತೆ ಸಾಬೀತಾಗಿರುವುದರಿಂದ ಮರಣದಂಡನೆ ವಿಧಿಸಲಾಗಿದೆ ಎಂದು ಕೋಲಂಬೋ ಹೈಕೋರ್ಟ್​ ತಿಳಿಸಿದೆ.

    ಇದನ್ನೂ ಓದಿ; ಚಿತ್ರ ನಿರ್ಮಾಪಕ ಆನಂದ ಅಪ್ಪುಗೋಳ ಆಸ್ತಿ ಇ.ಡಿ. ವಶಕ್ಕೆ; 31.35 ಕೋಟಿ ರೂ. ಸ್ವತ್ತು ಸ್ವಾಧೀನ 

    ಇಲ್ಲಿನ ಜೈಲುಗಳಲ್ಲಿ ಡ್ರಗ್​ ಪೆಡ್ಲರ್​ಗಳೆ ಹೆಚ್ಚಾಗಿದ್ದಾರೆ. ಸದ್ಯ, ಬೊಸ್ಸಾ ಎಂಬಲ್ಲಿನ ಜೈಲಿನಲ್ಲಿ ಕೈದಿಗಳು ಉಪವಾಸ ಸತ್ಯಾಗ್ರಹ ನಡೆಸಿದ್ದಾರೆ. ಅವರನ್ನು ನೋಡಲು ಬರುವ ಸಂಬಂಧಿಕರು ಹಾಗೂ ಸಂದರ್ಶಕರನ್ನು ಇನ್ನಿಲ್ಲದ ತಪಾಸನೆ ನಡೆಸಲಾಗುತ್ತದೆ ಎಂಬುದು ಅವರ ಆರೋಪ. ಜತೆಗೆ ಹಲವು ನಿರ್ಬಂಧಗಳನ್ನು ವಿಧಿಸಲಾಗುತ್ತಿದೆ ಎಂದು ದೂರಿದ್ದಾರೆ. ಇವರೊಂದಿಗೆ ಮಾತುಕತೆ ನಡೆಸುವ ಪ್ರಶ್ನೆಯೇ ಇಲ್ಲ ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.

    ಅಭ್ಯರ್ಥಿಗಳ ಕ್ರಿಮಿನಲ್​ ಹಿನ್ನೆಲೆಯನ್ನು 3 ಬಾರಿ ಪ್ರಕಟಿಸಬೇಕು; ಪಕ್ಷಗಳಿಗೂ ಹೇಳಿದ್ದೇನು ಚುನಾವಣಾ ಆಯೋಗ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts