More

    ಮತ್ತಿನ ಲೋಕದಲ್ಲಿ ಖ್ಯಾತ ಕಂಪನಿಯ ​ಮಹಿಳೆ! ಮಾದಕ ನಂಟಲ್ಲಿ ಕೋಟಿ ಒಡತಿ?

    ಬೆಂಗಳೂರು: ನೈಜೀರಿಯ ಡ್ರಗ್ಸ್ ಪೆಡ್ಲರ್ ಥಾಮಸ್ ಕಾಲು ಜೊತೆ ಸಂಪರ್ಕದಲ್ಲಿದ್ದ ಅಂಜುಂ ರಜಾಕ್ ಜಂಗ್ ಎಂಬಾಕೆಗೆ ಗೋವಿಂದಪುರ ಠಾಣಾ ಪೊಲೀಸರು ಮೂರನೇ ಬಾರಿ ನೋಟಿಸ್​ ನೀಡಲು ಸಿದ್ಧತೆ ನಡೆಸಿದ್ದಾರೆ.

    ಎರಡು ಬಾರಿ ನೋಟಿಸ್ ನೀಡಿದ್ರೂ ಅಂಜುಂ ರಜಾಕ್​ನಿಂದ ಯಾವುದೇ ಪ್ರತಿಕ್ರಿಯೆ ಬಾರದ ಹಿನ್ನೆಲೆಯಲ್ಲಿ ಮೂರನೇ ಬಾರಿ ನೋಟಿಸ್​ ನೀಡಲು ನಿರ್ಧರಿಸಿದ್ದಾರೆ. ನೈಜೀರಿಯ ಡ್ರಗ್ಸ್ ಪೆಡ್ಲರ್ ಥಾಮಸ್ ಕಾಲು ಜತೆ ಸಂಪರ್ಕದಲ್ಲಿರುವುದಾಗಿ ಅಂಜುಂ ರಜಾಕ್​ ಸಂಪರ್ಕದಲ್ಲಿರುವುದು ತಿಳಿದುಬಂದಿದ್ದು, ಸಾಕಷ್ಟು ಬಾರಿ ಡ್ರಗ್ಸ್ ತಗೆದುಕೊಂಡಿರುವ ಬಗ್ಗೆ ಪೊಲೀಸರು ಅನುಮಾನ ವ್ಯಕ್ತಪಡಿಸಿದ್ದಾರೆ.

    ಆರೋಪಿ ಅಂಜುಂ ರಜಾಕ್​, ಪ್ರೆಸ್ಟೀಜ್ ಗ್ರೂಪ್ ಮಾಲೀಕ ಇರ್ಫಾನ್ ಸಹೋದರಿ. ಈಕೆ ಪ್ರೆಸ್ಟೀಜ್ ಗ್ರೂಪ್​ನ ಎಕ್ಸಿಕ್ಯೂಟಿವ್ ಡೈರೆಕ್ಟರ್ ಆಗಿದ್ದಾಳೆ. ಸೆಪ್ಟೆಂಬರ್ 25 ರಂದು ವಿಚಾರಣೆಗೆ ಹಾಜರಾಗಲು ಗೋವಿಂದಪುರ ಠಾಣಾ ಪೊಲೀಸರು ನೊಟೀಸ್ ನೀಡಿದ್ದರು. ಆದ್ರೆ, ನೋಟಿಸ್ ಸ್ವೀಕರಿಸಿದ್ರೂ ಕೂಡ ವಿಚಾರಣೆಗೆ ಹಾಜರಾಗಿರಲಿಲ್ಲ. ನಂತರ ಅಕ್ಟೋಬರ್​ನಲ್ಲಿ ಎರಡನೇ ನೋಟಿಸ್ ನೀಡಿದ್ದರು. ಈಗ ಇಂದು ವಿಚಾರಣೆಗೆ ಹಾಜರಾಗುವಂತೆ ಮತ್ತೊಂದು ನೊಟೀಸ್ ನೀಡಲು ಸಿದ್ಧತೆ ನಡೆಸಿದ್ದಾರೆ.

    ಸೆಪ್ಟೆಂಬರ್​ನಲ್ಲಿ ಸಿಕ್ಕಿಬಿದ್ದಿದ್ದ ನೈಜೀರಿಯ ಪೆಡ್ಲರ್​ನಿಂದ ಲಕ್ಷಾಂತರ ಮೌಲ್ಯದ ಡ್ರಗ್ಸ್ ಅನ್ನು ಸೀಜ್ ಮಾಡಲಾಗಿತ್ತು. ಈ ವೇಳೆ ಆತನ ಮೊಬೈಲ್ ಫೋನ್​​ನಲ್ಲಿ ಸಾಕಷ್ಟು ಮಾಹಿತಿ ಕಲೆಹಾಕಲಾಗಿತ್ತು. ವಾಟ್ಸ್​ಆ್ಯಪ್​ನಲ್ಲಿ ಮೆಸೇಜ್ ಮಾಡಿ ಅಂಜುಂ ರಜಾಕ್​ ಡ್ರಗ್ಸ್ ತರಿಸಿಕೊಂಡಿರೊ‌ ಶಂಕೆ ಇದೆ. ಫ್ರೇಜರ್ ಟೌನ್​ನ ನಂದಿದುರ್ಗ ರಸ್ತೆಯಲ್ಲಿರುವ ಅಂಜುಂ ಮನೆಗೆ ಹಲವು ಬಾರಿ ಡ್ರಗ್ಸ್ ನೀಡಿರುವುದಾಗಿ ಪೆಡ್ಲರ್​ ಥಾಮಸ್ ಕಾಲು ಹೇಳಿಕೆ ನೀಡಿದ್ದಾನೆ. ಇದೇ ಕಾರಣಕ್ಕೆ ಮಾಹಿತಿ‌ ಪಡೆಯಲು ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ನೀಡಲಾಗಿದೆ. (ದಿಗ್ವಿಜಯ ನ್ಯೂಸ್​)

    ಇಂದು, ನಾಳೆ ಬ್ಯಾಂಕ್ ಮುಷ್ಕರ: ಹಲವು ಸೇವೆಗಳಲ್ಲಿ ವ್ಯತ್ಯಯ- ಇಲ್ಲಿದೆ ಸಂಪೂರ್ಣ ವಿವರ…

    ಕಾಂಗ್ರೆಸ್​ ಶಾಸಕ ತುಕಾರಾಂ ಆರೋಪದ ಬೆನ್ನಲ್ಲೇ ಸಂಡೂರು ತಹಸೀಲ್ದಾರ್ ರಶ್ಮಿ ಎತ್ತಂಗಡಿ

    ಇರೋದು ನಾಲ್ಕೇ ವಿದ್ಯಾರ್ಥಿನಿಯರು ಆದ್ರೆ ಲೆಕ್ಕದಲ್ಲಿ 35! ಸಮಾಜ ಕಲ್ಯಾಣ ಇಲಾಖೆ ಹಾಸ್ಟೆಲ್​ನಲ್ಲಿ ಗೋಲ್‌ ಮಾಲ್‌

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts