More

    ಅಹಮದಾಬಾದ್ ಸರಣಿ ಬಾಂಬ್​ ಸ್ಫೋಟ ಪ್ರಕರಣ: 49ರಲ್ಲಿ 38 ಅಪರಾಧಿಗಳಿಗೆ ಮರಣದಂಡನೆ ಶಿಕ್ಷೆ

    ಅಹಮದಾಬಾದ್​: ಗುಜರಾತ್​ನ ಅಹಮದಾಬಾದ್​ನಲ್ಲಿ 2008ರಲ್ಲಿ ನಡೆದ ಸರಣಿ ಬಾಂಬ್​ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಅಹಮದಾಬಾದ್​ನ ವಿಶೇಷ ನ್ಯಾಯಾಲಯ ಶುಕ್ರವಾರ (ಫೆ.18)ಐತಿಹಾಸಿಕ ತೀರ್ಪು ನೀಡಿದ್ದು, 49 ಅಪರಾಧಿಗಳಲ್ಲಿ 38 ಮಂದಿಗೆ ಮರಣದಂಡನೆ ಶಿಕ್ಷೆ ವಿಧಿಸಿದೆ.

    ಈ ಸರಣಿ ಬಾಂಬ್​ ಸ್ಫೋಟದಲ್ಲಿ 56 ಮಂದಿ ದುರಂತ ಸಾವಿಗೀಡಾಗಿದ್ದರು. ಸುಮಾರು 200ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿದ ಸುಮಾರು 80 ಆರೋಪಿಗಳನ್ನು ವಿಚಾರಣೆ ನಡೆಸಲಾಗಿತ್ತು.

    ಫೆ. 8ರಂದು 49 ಆರೋಪಿಗಳನ್ನು ಅಪರಾಧಿಗಳೆಂದು ತೀರ್ಪು ನೀಡಿದ್ದ ವಿಶೇಷ ನ್ಯಾಯಾಲಯ 28 ಆರೋಪಿಗಳನ್ನು ಪ್ರಕರಣದಿಂದ ಖುಲಾಸೆಗೊಳಿಸಿತ್ತು. ಇದೀಗ 49 ಅಪರಾಧಿಗಳಲ್ಲಿ 38 ಮಂದಿಗೆ ಮರಣದಂಡನೆ ವಿಧಿಸುವ ಮೂಲಕ 13 ವರ್ಷಗಳ ಹಳೆಯ ಪ್ರಕರಣಕ್ಕೆ ಅಂತ್ಯ ಹೇಳಿದೆ.

    2008ರ ಜುಲೈ 26ರಂದು ಕೇವಲ 70 ನಿಮಿಷಗಳ ಅಂತರದಲ್ಲಿ ಅಹಮದಾಬಾದ್​ ನಗರದಲ್ಲಿ 21 ಬಾರಿ ಸರಣಿ ಬಾಂಬ್​ ಸ್ಫೋಟ ನಡೆದಿತ್ತು. ಈ ಭೀಕರ ಸ್ಫೋಟದಲ್ಲಿ 56 ಮಂದಿ ಅಮಾಯಕರು ದುರಂತ ಸಾವಿಗೀಡಾದರೆ, 200ಕ್ಕೂ ಹೆಚ್ಚು ಮಂದಿ ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಯಲ್ಲಿ ಸಾವು-ಬದುಕಿನ ನಡುವೆ ಹೋರಾಡಿ ಜೀವ ಉಳಿಸಿಕೊಂಡಿದ್ದರು.

    ಇಂಡಿಯನ್​ ಮುಜಾಹಿದ್ದೀನ್​ (ಐಎಂ) ಉಗ್ರ ಸಂಘಟನೆ ಜತೆ ಸಂಪರ್ಕ ಹೊಂದಿದ್ದ ವ್ಯಕ್ತಿಗಳಿಂದಲೇ ಈ ದುಷ್ಕೃತ್ಯ ಜರುಗಿದೆ ಎಂದು ಪೊಲೀಸರು ವರದಿ ನೀಡಿದ್ದರು. ಇಸ್ಲಾಮಿಕ್​ ಮೂವ್ಮೆಂಟ್​ ಆಫ್​ ಇಂಡಿಯಾ ಬಣದ ನಿಷೇಧಿತ ವಿದ್ಯಾರ್ಥಿಗಳು ಕೂಡ ಇದರಲ್ಲಿ ಭಾಗಿಯಾಗಿದ್ದರು. 2002ರಲ್ಲಿ ಗುಜರಾತಿನಲ್ಲಿ ನಡೆದ ಗೋಧ್ರಾ ಗಲಭೆಗೆ ಸೇಡಾಗಿ ಇಂಡಿಯನ್​ ಮುಜಾಹಿದ್ದೀನ್​ ಉಗ್ರ ಸಂಘಟನೆ ಈ ಕೃತ್ಯವನ್ನು ಎಸಗಿತ್ತು ಎಂದು ಹೇಳಲಾಗಿದೆ.

    ಅಹಮದಾಬಾದ್​ ವಿಶೇಷ ನ್ಯಾಯಾಲಯವು ಎಲ್ಲಾ 35 ಎಫ್​ಐಆರ್​ಗಳನ್ನು ವಿಲೀನಗೊಳಿಸಿದ ನಂತರ ಇಂಡಿಯನ್ ಮುಜಾಹಿದ್ದೀನ್‌ನೊಂದಿಗೆ ಸಂಪರ್ಕ ಹೊಂದಿದ 78 ಜನರ ವಿರುದ್ಧ ಡಿಸೆಂಬರ್ 2009 ರಲ್ಲಿ ಪ್ರಕರಣದ ವಿಚಾರಣೆ ಪ್ರಾರಂಭಿಸಿತು. ಇದೀಗ 49 ಅಪರಾಧಿಗಳಿಗಲ್ಲಿ 39 ಮಂದಿಗೆ ಗಲ್ಲುಶಿಕ್ಷೆ ಮತ್ತು ಉಳಿದ ಅಪರಾಧಿಗೆ ಇತರೆ ಶಿಕ್ಷೆ ವಿಧಿಸುವ ಮೂಲಕ ನ್ಯಾಯಾಲಯ ಐತಿಹಾಸಿಕ ತೀರ್ಪು ಪ್ರಕಟಿಸಿದೆ. (ಏಜೆನ್ಸೀಸ್​)

    ಅಪಘಾತದಲ್ಲಿ ದೀಪ್​ ಸಿಧು ದುರ್ಮರಣ: ಕಣ್ಣೀರಿಟ್ಟ ಬೆನ್ನಲ್ಲೇ ಸಂಶಯ ಮೂಡಿಸಿದ ಗರ್ಲ್​ಫ್ರೆಂಡ್​ ರೀನಾ ನಡೆ

    VIDEO: ಅಂಬೆಗಾಲಿಡುತ್ತಾ ಬಂದ ಕಂದಮ್ಮನ ಎದುರಿಗೆ ಬಂದು ದಾಳಿಗೆ ಸಜ್ಜಾದ ಚಿರತೆ! ಮುಂದೇನಾಯ್ತು ನೋಡಿ…

    ‘ಓದಿಗಿಂತ ಮೊದ್ಲು ಹಿಜಾಬ್‌ ಬೇಕಿದ್ರೆ ಅಜ್ಜಂದಿರು ಭಾರತದ ಬದ್ಲು ಪಾಕಿಸ್ತಾನವನ್ನೇ ಆಯ್ಕೆ ಮಾಡಿಕೊಳ್ಬೋದಿತ್ತಲ್ಲ!’

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts