More

    ಜ್ಯೂಸ್​ ಎಂದು ತಿಳಿದು ಕ್ರಿಮಿನಾಶಕ ಸೇವಿಸಿ ಇಬ್ಬರು ಮಕ್ಕಳ ಸಾವು: ಆತ್ಮಹತ್ಯೆಗೆ ಯತ್ನಿಸಿದ ತಾಯಿ

    ಯಾದಗಿರಿ: ಮನೆಯಲ್ಲಿಟ್ಟಿದ್ದ ಕ್ರಿಮಿನಾಶಕವನ್ನು ಜ್ಯೂಸ್​ ಎಂದು ತಿಳಿದು ಕುಡಿದಿರುವುದರಿಂದಾಗಿ ಎರಡು ಮಕ್ಕಳು ಮೃತರಾಗಿರುವ ಘಟನೆ ಯಾದಗಿರಿಯ ಕೊಡಾಲ್​ ಗ್ರಾಮದಲ್ಲಿ ನಡೆದಿದೆ.

    ಖೈರನ್​ ಬಿ(2) ಮತ್ತು ಅಫ್ಸಾನಾ (4 ತಿಂಗಳು) ಮನೆಯಲ್ಲಿ ಆಟವಾಡುತ್ತಿದ್ದರು. ಈ ವೇಳೆ ಖೈರನ್​ಗೆ ಕ್ರಿಮಿನಾಶಕ ಕಂಡಿದೆ. ಅದನ್ನು ಜ್ಯೂಸ್​ ಎಂದು ತಿಳಿದ ಖೈರನ್​ ವಿಷವನ್ನು ಕುಡಿದು ತನ್ನ ತಂಗಿ ಅಫ್ಸಾನ್​ಗೂ ಕುಡಿಸಿದ್ದಾಳೆ.

    ಘಟನೆಯಿಂದಾಗಿ ಮಕ್ಕಳು ಅಸ್ವಸ್ಥರಾಗಿದ್ದು ಕೂಡಲೇ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ಆದರೆ ಅಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಅಫ್ಸಾನಾ ಮೃತಪಟ್ಟಿದ್ದಾಳೆ. ತೀವ್ರವಾಗಿ ಅಸ್ವಸ್ಥಗೊಂಡಿದ್ದ ಖೈರನ್​ಳನ್ನು ರಾಯಚೂರು ಜಿಲ್ಲಾ ಆಸ್ಪತ್ರೆಗೆ ಕರೆದೊಯ್ಯಲಾಗಿದೆಯಾದರೂ ಅಲ್ಲಿಯೂ ಸಹ ಚಿಕಿತ್ಸೆ ಫಲಕಾರಿಯಾಗದ ಹಿನ್ನೆಲೆ ಆಕೆಯೂ ಮೃತಪಟ್ಟದಿದ್ದಾಳೆ.

    ಮಕ್ಕಳು ವಿಷ ಸೇವಿಸಿದ್ದಾರೆ ಎನ್ನುವುದು ತಿಳಿದಾಕ್ಷಣ ತಾಯಿ ಶಹಜಹಾನ್​ ಆತ್ಮಹತ್ಯೆಗೆ ಪ್ರಯತ್ನ ಪಟ್ಟಿದ್ದಾಳೆ. ಸದ್ಯ ಯಾದಗಿರಿ ಖಾಸಗಿ ಆಸ್ಪತ್ರೆಯಲ್ಲಿ ಶಹಜಾನ್​ಗೆ ಚಿಕಿತ್ಸೆ ನೀಡಲಾಗುತ್ತಿದೆ. ಪ್ರಕರಣವು ವಡಗೇರಾ ಠಾಣೆಯಲ್ಲಿ ದಾಖಲಾಗಿದೆ. (ದಿಗ್ವಿಜಯ ನ್ಯೂಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts