More

    18 ರಾಷ್ಟ್ರಗಳಲ್ಲಿ ಶಾರುಖ್​- ಕಾಜೋಲ್​ ‘ಡಿಡಿಎಲ್​ಜೆ’ ಸಿನಿಮಾ ಮರು ಬಿಡುಗಡೆ

    ಮುಂಬೈ: ಬಾಲಿವುಡ್​ನ ಅತ್ಯಂತ ಜನಪ್ರಿಯ ಚಿತ್ರಗಳ ಪೈಕಿ ಶಾರುಖ್​ ಖಾನ್​ ಮತ್ತು ಕಾಜೋಲ್​ ಅಭಿನಯದ ‘ದಿಲ್​ವಾಲೇ ದುಲ್ಹನಿಯಾ ಲೇ ಜಾಯೇಂಗೆ’ ಸಹ ಒಂದು. ಈ ಚಿತ್ರ 1995ರ ಅಕ್ಟೋಬರ್​ 20ರಂದು ಬಿಡುಗಡೆಯಾಗಿ ಭರ್ಜರಿ ಯಶಸ್ಸು ಮತ್ತು ಜನಪ್ರಿಯತೆಗಳೆರಡನ್ನೂ ಪಡೆದಿತ್ತು. 4 ಕೋಟಿ ವೆಚ್ಚದಲ್ಲಿ ತಯಾರಾದ ಈ ಸಿನಿಮಾ, ಆಗಿನ ಕಾಲದಲ್ಲಿಯೇ 110 ಕೋಟಿ ಕಲೆಕ್ಷನ್​ ಮಾಡಿತ್ತು. ಇದೀಗ ಇದೇ ಸಿನಿಮಾ ಮತ್ತೆ ಚಿತ್ರಮಂದಿರದಲ್ಲಿ ಮೋಡಿ ಮಾಡಲು ಸಜ್ಜಾಗುತ್ತಿದೆ.

    ಇದನ್ನೂ ಓದಿ:  ಶ್ರೀಲೀಲಾ ಮನೆಯಲ್ಲಿ ನವರಾತ್ರಿ ರಂಗು

    ಅಂದರೆ, 25 ವರ್ಷ ಪೂರೈಸಿದ ಹಿನ್ನೆಲೆಯಲ್ಲಿ 18 ರಾಷ್ಟ್ರಗಳಲ್ಲಿ ಈ ಸಿನಿಮಾ ಮರು ಬಿಡುಗಡೆ ಆಗಲಿದೆ. ಜರ್ಮನಿ, ಅರಬ್​ ರಾಷ್ಟ್ರಗಳು, ಕತಾರ್, ಅಮೆರಿಕಾ, ಇಂಗ್ಲೆಂಡ್​, ಕೆನಡಾ, ಮಾರಿಷಸ್​, ಸೌತ್ ಆಫ್ರಿಕಾ, ಆಸ್ಟ್ರೇಲಿಯಾ, ನ್ಯೂಜಿಲೆಂಡ್​ ಸೇರಿ 18ಕ್ಕೂ ಅಧಿಕ ರಾಷ್ಟ್ರಗಳಲ್ಲಿ ರೀ ರಿಲೀಸ್​ ಆಗುತ್ತಿದೆ ಡಿಡಿಎಲ್​ಜೆ ಸಿನಿಮಾ.

    ಇನ್ನೊಂದು ವಿಶೇಷ ಏನೆಂದರೆ, ಚಿತ್ರ ಬಿಡುಗಡೆಯಾಗಿ 25 ವರ್ಷ ಆಗುತ್ತಿರುವ ಹಿನ್ನೆಲೆಯಲ್ಲಿ, ಲಂಡನ್​ನ ಲೇಸಿಸ್ಟರ್​ ಸ್ಕ್ವೇರ್​ನಲ್ಲಿ ಶಾರೂಖ್​ ಮತ್ತು ಕಾಜೋಲ್​ ಅವರ ಕಂಚಿನ ಪ್ರತಿಮೆಗಳನ್ನು ಪ್ರತಿಷ್ಠಾಪಿಸಲಾಗುತ್ತಿದೆ. ಶಾರೂಖ್​ ಮತ್ತು ಕಾಜೋಲ್​ ಇಬ್ಬರೂ ಈ ಚಿತ್ರದಲ್ಲಿ ರಾಜ್​ ಮತ್ತು ಸಿಮ್ರನ್​ ಎಂಬ ಪಾತ್ರಗಳನ್ನು ಮಾಡಿದ್ದರು. ಈ ಪಾತ್ರಗಳು ಈಗಲೂ ಅದೆಷ್ಟು ಜನಪ್ರಿಯವಾಗಿವೆ ಎಂದರೆ, ಈ ಪಾತ್ರಗಳ ನೆನಪಲ್ಲಿ ಕಂಚಿನ ಪ್ರತಿಮೆಗಳ ನಿರ್ಮಾಣವಾಗುತ್ತಿದ್ದು, ಮುಂದಿನ ವರ್ಷ ಪ್ರತಿಷ್ಠಾಪಿಸಲಾಗುತ್ತಿದೆ.

    ಇದನ್ನೂ ಓದಿ: ಏನಾಗತ್ತೆ 1980ರಲ್ಲಿ?: 40 ವರ್ಷ ಹಿಂದಕ್ಕೆ ಹೋದ ಪ್ರಿಯಾಂಕಾ

    ಭಾರತೀಯ ಚಿತ್ರರಂಗದಲ್ಲೇ ಸುಧೀರ್ಘ ಪ್ರದರ್ಶನ ಕಂಡ ಚಿತ್ರರಂಗ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಈ ಚಿತ್ರವನ್ನು ನಿರ್ದೇಶಿಸಿದವರು ಆದಿತ್ಯ ಚೋಪ್ರಾ. ಯಶ್​ ಚೋಪ್ರಾ ನಿರ್ಮಾಣದ ಈ ಚಿತ್ರದಲ್ಲಿ ಶಾರೂಖ್​, ಕಾಜೋಲ್​, ಅನುಪಮ್​ ಖೇರ್​, ಅಮರೀಶ್​ ಪುರಿ, ಫರೀದಾ ಜಲಾಲ್​, ಮಂದಿರಾ ಬೇಡಿ ಸೇರಿ ಹಲವರು ನಟಿಸಿದ್ದರು.

    ಈ ನಿರ್ದೇಶಕನ ಸಿನಿಮಾದಲ್ಲಿ ಅಪ್ಪ ಮಗನಾಗಿ ಕಾಣಿಸಿಕೊಳ್ಳಲಿದ್ದಾರಂತೆ ಶಾರುಖ್!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts