More

    ಬಡತನದ ಪಾತ್ರಗಳನ್ನು ಕಾಜೋಲ್ ರಿಜೆಕ್ಟ್​ ಮಾಡೋದ್ಯಾಕೆ?

    ಮುಂಬೈ: ಈ ವರ್ಷದ ಆರಂಭದಲ್ಲಿ ಬಿಡುಗಡೆಯಾದ ‘ತ್ರಿಭಂಗ’ ಚಿತ್ರದಲ್ಲಿ ನಟಿಸಿದ್ದೇ ಕೊನೆ. ಆ ನಂತರ ಕಾಜೋಲ್​ ಅಭಿನಯದ ಯಾವ ಚಿತ್ರವೂ ಬಿಡುಗಡೆಯಾಗಿಲ್ಲ. ಸದ್ಯ ಕಾಜೋಲ್​ ಯಾವೊಂದು ಚಿತ್ರವನ್ನೂ ಒಪ್ಪಿಕೊಂಡಿರದ ಕಾರಣ, ಇನ್ನೊಂದು ವರ್ಷ ಆಕೆಯ ಯಾವ ಚಿತ್ರವೂ ಬಿಡುಗಡೆಯಾಗುವುದಿಲ್ಲ.

    ಇದನ್ನೂ ಓದಿ: ಹೈದರಾಬಾದ್​ ಬಿಟ್ಟು ಗೋವಾ ಸೇರಿದರಂತೆ ರಾಮ್​ಗೋಪಾಲ್​ ವರ್ಮಾ …

    ಕಾಜೋಲ್​ ಮೊದಲಿನಿಂದಲೂ ಚೂಸಿ. ಹಾಗೆಲ್ಲ ಬಂದ ಅವಕಾಶಗಳನ್ನೆಲ್ಲ ತಾನು ಒಪ್ಪಿಕೊಂಡಿಲ್ಲ, ಒಪ್ಪಿಕೊಳ್ಳುವುದೂ ಇಲ್ಲ ಎಂದು ಇತ್ತೀಚೆಗಿನ ಸಂದರ್ಶನವೊಂದರಲ್ಲಿ ಅವರು ಹೇಳಿಕೊಂಡಿದ್ದಾರೆ. ಹಾಗೆ ನೋಡಿದರೆ, ಅವರು ಚಿತ್ರರಂಗಕ್ಕೆ ಬಂದ ಆರಂಭದಲ್ಲೇ ಒಂದು ನಿರ್ಧಾರ ತೆಗೆದುಕೊಂಡಿದ್ದರಂತೆ ಮತ್ತು ಆ ನಿರ್ಧಾರ ಪ್ರಕಾರವೇ ಇಷ್ಟು ವರ್ಷ ಸಾಗಿಬಂದಿದ್ದಾಗಿ ಹೇಳಿಕೊಂಡಿದ್ದಾರೆ.

    ಇದನ್ನೂ ಓದಿ: ರಜನಿಕಾಂತ್​, ವಿಕ್ರಮ್​, ವಿಜಯ್​ಗೆ ನಾಯಕಿಯಾಗಿದ್ದ ಈ ಹುಡುಗಿ ಯಾರು ಗೊತ್ತಾ?

    ಇಷ್ಟಕ್ಕೂ ಆ ತೀರ್ಮಾನವನೇನು? ‘ಪ್ರಯೋಗಾತ್ಮಕ ಪಾತ್ರಗಳಲ್ಲಿ ಕಾಣಿಸಿಕೊಳ್ಳಬಾರದು ಮತ್ತು ನನಗೆ ಕಂಫರ್ಟ್​ ಎಂದನಿಸಿದರೆ ಮಾತ್ರ ಚಿತ್ರ ಮಾಡಬೇಕು ಎಂದು ನಾನು ಮೊದಲೇ ತೀರ್ಮಾನಿಸಿದ್ದೆ. ಅದರಲ್ಲೂ ಬಡತನದ ಪಾತ್ರಗಳಲ್ಲಿ ಕಾಣಿಸಿಕೊಳ್ಳುವುದಕ್ಕೆ ನನಗೆ ಇಷ್ಟವಿಲ್ಲ. ಏಕೆಂದರೆ, ನಾನು ಬಡವಳಂತೆ ಕಾಣುವುದಿಲ್ಲ. ಹಾಗಾಗಿ, ಇಷ್ಟು ವರ್ಷಗಳ ಕಾಲ ಶ್ರೀಮಂತಿಕೆಯ ಹಿನ್ನೆಲೆ ಇರುವ ಪಾತ್ರಗಳಲ್ಲೇ ಹೆಚ್ಚು ಕಾಣಿಸಿಕೊಂಡಿದ್ದೇನೆ’ ಎಂದು ಕಾಜೋಲ್​ ಹೇಳಿದ್ದಾರೆ.

    ಇನ್ನು ಮುಂದೆ ಶಾಲೆಗೆ ಹೋಗಲ್ಲ ಎಂದು ಸೋನಾಕ್ಷಿ ಹಠ ಹಿಡಿದಿದ್ದು ಯಾಕೆ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts