More

    2022ಕ್ಕೆ ಎಚ್‌ಎಎಲ್ ಘಟಕ ಕಾರ್ಯಾರಂಭ ನಿರೀಕ್ಷೆ ;  ಸಂಸದ ಜಿ.ಎಸ್.ಬಸವರಾಜು ಹೇಳಿಕೆ

    ಗುಬ್ಬಿ : ಕೇಂದ್ರ ಸರ್ಕಾರ ಯಾವಾಗ ಹಸಿರು ನಿಶಾನೆ ನೀಡುತ್ತದೆಯೋ ಅಂದು ಗುಬ್ಬಿ ಎಚ್‌ಎಎಲ್ ಘಟಕ ಕಾರ್ಯಾರಂಭ ಮಾಡಲಿದೆ ಎಂದು ಸಂಸದ ಜಿ.ಎಸ್.ಬಸವರಾಜು ಹೇಳಿದರು.

    ಬಿದರೆಹಳ್ಳ ಕಾವಲ್‌ನ ಎಚ್‌ಎಎಲ್ ಘಟಕಕ್ಕೆ ಸೋಮವಾರ ರಾಜ್ಯ ಸರ್ಕಾರದ ಮೂಲಸೌಕರ್ಯ ಅಪರ ಮುಖ್ಯಕಾರ್ಯದರ್ಶಿ ಕಪಿಲ್ ಮೋಹನ್ ಅವರೊಂದಿಗೆ ಭೇಟಿ ನೀಟಿ ಪ್ರಗತಿ ಪರಿಶೀಲಿಸಿದ ಜಿಎಸ್ಬಿ, ದೇಶದ ಸ್ವಾತಂತ್ರ್ಯ ಅಮೃತ ಮಹೋತ್ಸಹವದ ಅಂಗವಾಗಿ 2022ರ ಆಗಸ್ಟ್ 15 ರಂದು ಸುಮಾರು 75 ಬೃಹತ್ ಯೋಜನೆಗಳನ್ನು ಲೋಕಾರ್ಪಣೆ ಮಾಡಲು ಪ್ರಧಾನಿ ಮೋದಿ ನರೇಂದ್ರ ಮೋದಿ ಸಿದ್ಧತೆ ನಡೆಸಿದ್ದಾರೆ. ಅದರಲ್ಲಿ ಎಚ್‌ಎಎಲ್ ಘಟಕವೂ ಇದೆ ಎಂದರು.

    ಕರೊನಾ ನಡುವೆಯೂ ಕಾಮಗಾರಿ ವೇಗದಲ್ಲಿ ನಡೆದಿದೆ. ನ್ಯಾಯಾಲಯದ ಕೇಸುಗಳಿಂದ ಆರಂಭದಲ್ಲಿ ವಿಳಂಬವಾಯಿತು. ಇನ್ನೂ ಒಂದು ಮೊಕದ್ದಮೆ ಬಗೆಹರಿಯಬೇಕಿದೆ. ರಕ್ಷಣಾ ಸಚಿವ ರಾಜನಾಥ ಸಿಂಗ್ ಜತೆಯೂ ಈಗಾಗಲೇ ಮಾತುಕತೆ ನಡೆಸಲಾಗಿದೆ. ಘಟಕವನ್ನು ವಿಸ್ತರಿಸಲು ಕೇಂದ್ರ ಸರ್ಕಾರ ಚಿಂತನೆ ನಡೆಸುತ್ತಿದೆ. ಭವಿಷ್ಯದಲ್ಲಿ ಯುದ್ಧ ವಿಮಾನಗಳ ಉತ್ಪಾದನೆ ಘಟಕ ಆರಂಭಿಸುವ ಉದ್ದೇಶವೂ ಇದೆ ಎಂದು ತಿಳಿಸಿದರು.

    ಹೊಸ ನಿಯಮದ ಪ್ರಕಾರ ಶೇ.80 ರೈತರು ಒಪ್ಪಿಗೆ ನೀಡದಿದ್ದರೆ ಭೂ ಸ್ವಾಧೀನ ಮಾಡುವ ಆಗಿಲ್ಲ. ಘಟಕ ವಿಸ್ತರಣೆಗೆ ಯಾವ ಜಮೀನನ್ನು ಪಡೆಯಬೇಕು ಎಂಬ ಚಿಂತನೆ ಆರಂಭವಾಗಿದೆ. ಬಿದರೆಹಳ್ಳ ಕಾವಲ್ ಬದಲು ಬೇರೆಡೆ ಕೆಲವು ರೈತರು ಜಮೀನು ಕೊಡುವುದಾಗಿ ಹೇಳುತ್ತಿದ್ದಾರೆ. ಈ ಎಲ್ಲ ಅಂಶಗಳನ್ನು ಪರಿಗಣಿಸಿದ ನಂತರ ಜಿಲ್ಲಾಡಳಿತ ಮುಂದಿನ ನಿರ್ಧಾರ ಕೈಗೊಳ್ಳಲಿದೆ ಎಂದರು.
    ಉಪವಿಭಾಗಾಧಿಕಾರಿ ವಿ.ಅಜಯ್, ಎಚ್‌ಎಎಲ್ ಅಧಿಕಾರಿಗಳು ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಭಾಗವಹಿಸಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts