More

    ಎಸಿಬಿಯಿಂದ ತಪ್ಪಿಸಿಕೊಳ್ಳಲು ಪಿಎಸ್‌ಐ ನಾಗಾಲೋಟ: ಬೆನ್ನಟ್ಟಿ ಹಿಡಿದ ಪೊಲೀಸರು

    ಗುಬ್ಬಿ: ಪೊಲೀಸರ ವಶದಲ್ಲಿದ್ದ ಕಾರು ಬಿಡಲು ಲಂಚ ಪಡೆಯುತ್ತಿದ್ದ ವೇಳೆ ಪಿಎಸ್‌ಐ ಹಾಗೂ ಮುಖ್ಯಪೇದೆ ಎಸಿಬಿ ಪೊಲೀಸರ ಬಲೆಗೆ ಬಿದ್ದಿದ್ದಾರೆ.

    ವಿಚಾರಣೆ ವೇಳೆ ಠಾಣೆಯಿಂದ ತಪ್ಪಿಸಿಕೊಂಡು ಓಡಿಹೋದ ಪಿಎಸ್ಸೈ ಸೋಮಶೇಖರ್ ಹಾಗೂ ಮುಖ್ಯಪೇದೆ ನಯಾಜ್ ಅವರನ್ನು ಸಿನೀಮಿಯ ರೀತಿಯಲ್ಲಿ ಬೆನ್ನಟ್ಟಿದ ಎಸಿಬಿ ತಂಡ ಕೊನೆಗೂ ಬಂಧಿಸಿದೆ.
    28 ಸಾವಿರ ರೂ.ಲಂಚಕ್ಕೆ ಬೇಡಿಕೆ ಇಟ್ಟು 12 ಸಾವಿರ ರೂ.ಪಡೆದು ಉಳಿದ 16 ಸಾವಿರ ಲಂಚ ಸ್ವೀಕರಿಸುವಾಗ ಸಿ.ಎಸ್.ಪುರ ಪಿಎಸ್ಸೈ ಸೋಮಶೇಖರ್ ಬುಧವಾರ ಸಿಕ್ಕಿ ಬಿದ್ದಿದ್ದು ಮಧ್ಯಾಹ್ನ ಠಾಣೆಯಲ್ಲಿ ವಿಚಾರಣೆ ನಡೆಸಲಾಗುತ್ತಿತ್ತು. ಈ ಸಂದರ್ಭದಲ್ಲಿ ಪಿಎಸ್ಸೈ, ಪೇದೆ ಇಬ್ಬರೂ ತಪ್ಪಿಸಿಕೊಳ್ಳಲು ಓಡಿ ಹೋಗಿದ್ದು ಎಸಿಬಿ ಅಧಿಕಾರಿಗಳು ಬೆನ್ನತ್ತಿದ್ದಾರೆ. ಅಲ್ಲದೇ, ಸಾರ್ವಜನಿಕರೂ ಪಿಎಸೈ ಬೆನ್ನತ್ತಿ ಹಿಡಿಯಲು ಮುಂದಾಗಿದ್ದು ಇಡೀ ಪೊಲೀಸ್ ಇಲಾಖೆ ತಲೆ ತಗ್ಗಿಸುವಂತೆ ಮಾಡಿದೆ.
    ಕೊನೆಗೆ ಠಾಣೆಯಿಂದ ಸ್ವಲ್ಪ ದೂರದ ತೋಟದಲ್ಲಿ ಓಡಿಹೋಗುತ್ತಿದ್ದ ಆರೋಪಿಗಳಿಬ್ಬರನ್ನು ಎಸಿಬಿ ಅಧಿಕಾರಿಗಳು ವಶಕ್ಕೆ ಪಡೆದಿದ್ದು ಮಹಜರು ಪೂರ್ಣಗೊಳಿಸಿದ್ದಾರೆ.

    ಪ್ರಕರಣ: ಕೌಟುಂಬಿಕ ಕಲಹದ ವಿಚಾರವಾಗಿ ಸಿ.ಎಸ್.ಪುರ ಠಾಣೆಯಲ್ಲಿ ಚಂದ್ರಣ್ಣ ಎಂಬುವವರ ಮೇಲೆ ಅ.22 ರಂದು ದೂರು ದಾಖಲಾಗಿತ್ತು. ನ್ಯಾಯಾಲಯದಲ್ಲಿ ಜಾಮೀನು ಪಡೆದ ಚಂದ್ರಣ್ಣ ತನ್ನ ಕಾರು ಬಿಡಿಸಿಕೊಳ್ಳಲು ಬಂದಾಗ 28 ಸಾವಿರ ರೂಪಾಯಿ ಬೇಡಿಕೆ ಇಟ್ಟಿದ್ದರು. ಈ ಬಗ್ಗೆ ಎಸಿಬಿಗೆ ದೂರು ನೀಡಿದ್ದ ಚಂದ್ರಣ್ಣ, 12 ಸಾವಿರ ಲಂಚ ನೀಡಿದ್ದ ಬಗ್ಗೆ ತಿಳಿಸಿ ಉಳಿದ 16 ಸಾವಿರ ರೂಪಾಯಿಯನ್ನು ಹೆಡ್‌ಕಾನ್‌ಸ್ಟೆಬಲ್ ನಯಾಜ್ ಅಹಮದ್ ಮೂಲಕ ನೀಡುವಾಗ ಎಸಿಬಿ ಡಿವೈಎಸ್ಪಿ ಮಲ್ಲಿಕಾರ್ಜುನ್ ಚುಕ್ಕಿ ನೇತೃತ್ವದ ಇನ್‌ಸ್ಪೆಕ್ಟರ್ ವಿಜಯಲಕ್ಷ್ಮೀ, ವಿರೇಂದ್ರ ತಂಡ ಪಿಎಸೈ ಸೋಮಶೇಖರ್ ಮತ್ತು ನಯಾಜ್ ಅವರನ್ನು ವಶಕ್ಕೆ ಪಡೆಯಿತು.

    ತನಿಖೆ ಆರಂಭಿಸಿದ ಸಂದರ್ಭದಲ್ಲಿ ಠಾಣೆಯ ಎಲ್ಲ ಸಿಬ್ಬಂದಿಯ ಮೊಬೈಲ್ ಪಡೆದು ವಿಚಾರಣೆ ನಡೆಸಲಾಯಿತು. ಮಧ್ಯಾಹ್ನ ಊಟದ ಸಮಯದಲ್ಲಿ ಪಿಎಸೈ ಸೋಮಶೇಖರ್ ತಪ್ಪಿಸಿಕೊಳ್ಳಲು ಓಟ ಕಿತ್ತಿದ್ದು ಎಲ್ಲರಿಗೂ ಅಚ್ಚರಿ ತಂದಿದೆ. ಆದರೆ, ಠಾಣೆ ಸಿಬ್ಬಂದಿ ಮುಂದೆ ನಡೆದ ಈ ಪಲಾಯನ ಇಲಾಖೆಗೆ ಮುಜುಗರ ತಂದಿದೆ. ಇಡೀ ಪ್ರಕರಣ ಮತ್ತು ಎಸ್ಕೇಪ್ ಹೈಡ್ರಾಮಾಗೆ ಠಾಣೆಯ ಚಾಲಕನ ಹೆಸರು ಸಾರ್ವಜನಿಕರ ವಲಯದಲ್ಲಿ ಚರ್ಚೆಗೆ ಬಂದಿದೆ. ರಾತ್ರಿವರೆಗೂ ಸಿಬ್ಬಂದಿ ವಿಚಾರಣೆ ಮುಂದುವರಿದಿತ್ತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts