More

    ಮರ್ಯಾದಾಗೇಡು ಹತ್ಯೆಯಿಂದ ತಪ್ಪಿಸಿಕೊಳ್ಳಲು ಎರಡು ದಿನ ಫೂಟ್​ಪಾತ್​​ನಲ್ಲೇ ಕಳೆದ ಯುವತಿ

    ನವದೆಹಲಿ: ತಾನಿಷ್ಟಪಟ್ಟ ಹುಡುಗನೊಂದಿಗೆ ವಿವಾಹವಾದ ಯುವತಿ ಕುಟುಂಬದವರ ಕೊಲೆ ಬೆದರಿಕೆಯಿಂದಾಗಿ ಎರಡು ದಿನ ಫೂಟ್​ಪಾತ್​ನಲ್ಲೇ ಕಳೆದ ಆಘಾತಕಾರಿ ಘಟನೆ ನಡೆದಿದೆ.
    ಆದರೆ ಆ ಯುವತಿಯನ್ನು ಮರ್ಯಾದಾಗೇಡು ಹತ್ಯೆಯಿಂದ ರಕ್ಷಿಸುವಲ್ಲಿ ದೆಹಲಿ ಮಹಿಳಾ ಆಯೋಗ ದಿಟ್ಟವಾಗಿ ಕಾರ್ಯನಿರ್ವಹಿಸಿ ಯಶಸ್ವಿಯಾಗಿದೆ.
    ನಡೆದದ್ದೇನು? : ಶ್ರುತಿ (ಹೆಸರು ಬದಲಾಯಿಸಲಾಗಿದೆ). ಎಂಬಾಕೆ ಆಗಸ್ಟ್ 12 ರಂದು ಆ ಯುವತಿ ತಾನು ಇಷ್ಟಪಟ್ಟ ಹುಡುಗನನ್ನು ಮದುವೆಯಾಗಿದ್ದು ಮತ್ತು ಅಂದಿನಿಂದ ಆಕೆಯ ಪೋಷಕರು ಅವಳನ್ನು ಕೊಲ್ಲಲು ಪ್ರಯತ್ನಿಸುತ್ತಿದ್ದಾರೆ. ಎಂದು ತನ್ನ ಸ್ನೇಹಿತೆಯ ಮೊಬೈಲ್ ಮೂಲಕ ಟ್ವಿಟರ್ ನಲ್ಲಿ ಆಯೋಗಕ್ಕೆ ಮಾಹಿತಿ ನೀಡಿದ್ದಾಳೆ.
    ಯುವತಿ ಸಹಾಯಕ್ಕಾಗಿ ಸಂದೇಶ ಯಾಚಿಸಿದ ನಂತರ, ಆಯೋಗದ ತಂಡವು ತಕ್ಷಣವೇ ಆಕೆಯ ಸಂಪರ್ಕ ವಿವರಗಳನ್ನು ಕೇಳಿತು, ಆದರೆ ಆಕೆಯ ತಂದೆ ಮೊಬೈಲ್ ಫೋನ್ ಅನ್ನು ಕಸಿದುಕೊಂಡಿದ್ದು, ತನ್ನ ಕುಟುಂಬದವರಿಗೆ ಕಾಣದಂತೆ ಮರೆಯಾಗಲು ಕಳೆದೆರಡು ದಿನಗಳಿಂದ ಫುಟ್​​ಪಾತ್​​ನಲ್ಲೇ ಇದ್ದುದಾಗಿ ತಿಳಿಸಿದ್ದಾಳೆ.

    ಇದನ್ನೂ ಓದಿ : ಪ್ರೀತಿಸಿದ ಜೋಡಿಗೆ ವಿವಾಹ ಮಾಡಿಸಿದ ಪೊಲೀಸರು; ಕನ್ಯಾದಾನ ಮಾಡಿದ್ದು ಸಬ್​ ಇನ್ಸ್​​ಪೆಕ್ಟರ್​​

    ಆಯೋಗದ ತಂಡವು ಅವಳಿಗೆ ತಕ್ಷಣ ಕಚೇರಿಗೆ ಬರುವಂತೆ ತಿಳಿಸಿತು. ಆಕೆ ಕಚೇರಿಗೆ ಬಂದು ಆಯೋಗದ ಸದಸ್ಯ ಫಿರ್ದೌಸ್ ಖಾನ್ ಅವರನ್ನು ಭೇಟಿಯಾದಳು. ಆಗಸ್ಟ್ 12 ರಂದು ದೇವಾಲಯವೊಂದರಲ್ಲಿ ಹಿಂದೂ ಆಚರಣೆಗಳ ಮೂಲಕ ತಾನು ಇಷ್ಟ ಪಟ್ಟ ಹುಡುಗನನ್ನು ಮದುವೆಯಾಗಿದ್ದು ಆಕೆಯ ಕುಟುಂಬವು ಈ ನಿರ್ಧಾರದಿಂದ ಕೋಪಕೊಂಡಿದ್ದಾಗಿ ತಿಳಿಸಿದಳು.
    ಆಕೆಯ ಕುಟುಂಬವು ಅದರ ಬಗ್ಗೆ ಮಾತನಾಡಲು ಅವಳನ್ನು ಮನೆಗೆ ಕರೆದಿದೆ. ಆದರೆ ಅವಳು ಮನೆಗೆ ತಲುಪಿದಾಗ, ಅವಳನ್ನು ಥಳಿಸಿ ದಾದ್ರಿಗೆ ಕರೆದೊಯ್ಯಲಾಯಿತು. ಆಕೆಯ ಕುಟುಂಬವು ತನ್ನ ಕೊಲೆಗೆ ಸಂಚು ರೂಪಿಸಲಾಗುತ್ತಿದೆ ಎಂಬುದು ಆಕೆಗೆ ಗೊತ್ತಾಯಿತು. ಅವಳು ಹೇಗೋ ತಪ್ಪಿಸಿಕೊಂಡು ದೆಹಲಿಗೆ ಹಿಂತಿರುಗಲು ಯಶಸ್ವಿಯಾದಳು ಆದರೆ ಅವಳ ಪತಿ ನಾಪತ್ತೆಯಾಗಿದ್ದಾನೆ ಎಂದು ತಿಳಿಸಿದ್ದಾಳೆ.
    ನಂತರ ಅವಳು ತನ್ನ ಗೆಳೆತಿಯ ಫೋನ್ ಬಳಸಿ ಮತ್ತು ಸಹಾಯ ಕೋರಿ ಟ್ವಿಟರ್‌ನಲ್ಲಿ ಆಯೋಗಕ್ಕೆ ಸಂದೇಶ ಕಳುಹಿಸಿದ್ದಾಳೆ ಎಂದು ಆಯೋಗ ಹೇಳಿಕೆಯಲ್ಲಿ ತಿಳಿಸಿದೆ.

    ಇದನ್ನೂ ಓದಿ:  ಸ್ಮಾರ್ಟ್‌ಫೋನ್‌ ಉದ್ಯಮದಲ್ಲಿ ವರ್ಷಾಂತ್ಯದಲ್ಲಿ ಭರಪೂರ ಉದ್ಯೋಗ

    ದೆಹಲಿ ಮಹಿಳಾ ಆಯೋಗವು ಯುವತಿಯ ಹೇಳಿಕೆಯನ್ನು ದಾಖಲಿಸಿದ್ದು ನಂತರ ಆಕೆಯನ್ನು ಸುರಕ್ಷಿತವಾಗಿ ಆಶ್ರಯ ಮನೆಗೆ ಕಳುಹಿಸಿದೆ. ಆಯೋಗದ ಸದಸ್ಯ ಫಿರ್ದೋಸ್ ಖಾನ್ ಕೂಡ ಕುಟುಂಬದ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದಾರೆ. ಎಫ್ಐಆರ್ ದಾಖಲಿಸಲಾಗಿದ್ದು. ಸಂತ್ರಸ್ತೆ ಮತ್ತು ಆಕೆಯ ಪತಿಯ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ಆಯೋಗವು ಪೊಲೀಸರಿಗೆ ಪತ್ರ ಬರೆದಿದೆ.  ಈ ವಿಷಯದಲ್ಲಿ ನ್ಯಾಯಾಲಯದಿಂದ ತುರ್ತು ರಕ್ಷಣೆ ಕೋರಿ ದೆಹಲಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿರುವ ಸಂತ್ರಸ್ತೆಗೆ ಆಯೋಗವು ಕಾನೂನು ನೆರವು ನೀಡುತ್ತಿದೆ.
    ಆಯೋಗದ ಮುಖ್ಯಸ್ಥೆ ಸ್ವಾತಿ ಮಾಲಿವಾಲ್ ಮಾತನಾಡಿ, ಮರ್ಯಾದಾಗೇಡು ಹತ್ಯೆಯಂತಹ ಸಾಮಾಜಿಕ ಪಿಡುಗು ನಮ್ಮ ದೇಶದಲ್ಲಿ ಇನ್ನೂ ಅಸ್ತಿತ್ವದಲ್ಲಿದೆ ಎಂಬುದೇ ನಾಚಿಕೆಗೇಡಿನ ಸಂಗತಿಯಾಗಿದೆ. ಪೋಷಕರು ತಮ್ಮ ಮಕ್ಕಳಿಗೆ ಈ ರೀತಿ ಮರ್ಯಾದಾಗೇಡು ಹತ್ಯೆ ಮಾಡಲು ಮನಸ್ಸಾದರೂ ಹೇಗೆ ಬರುತ್ತದೆ ಎಂಬುದನ್ನು ಅರ್ಥಮಾಡಿಕೊಳ್ಳುವುದೇ ಕಷ್ಟ. ಸಾಮಾಜಿಕ ಮಾಧ್ಯಮವು ನಮಗೆ ಜೀವನವನ್ನು ಸುಲಭಗೊಳಿಸಿದೆ ಆ ಹುಡುಗಿಯ ಬಳಿ ಫೋನ್ ಇರಲಿಲ್ಲ, ಅಥವಾ ಅವಳ ಸ್ಥಳದ ವಿವರ ಹಂಚಿಕೊಳ್ಳಲು ಆಕೆಗೆ ಸಾಧ್ಯವಾಗಲಿಲ್ಲ. ಆಯೋಗದ ತಂಡವು ಪರಿಸ್ಥಿತಿಯನ್ನು ಬಹಳ ಶಾಂತವಾಗಿ ನಿಭಾಯಿಸಿತು ಮತ್ತು ಬಾಲಕಿಯನ್ನು ರಕ್ಷಿಸಲು ಸಹಾಯ ಮಾಡಿತು. ಸಹಾಯವಾಣಿ ಮತ್ತು ನೆಟ್​​ವರ್ಕ್ ಮೂಲಕ ಆಯೋಗವು ಜನರಿಗೆ ಕಚೇರಿಗೆ ಬರಲು ಸಹಾಯ ಮಾಡುತ್ತಿದೆ. ನಾವು ಎಲ್ಲರ ಸಾಮಾಜಿಕ ಮಾಧ್ಯಮಗಳ ಮೂಲಕ ಸಕ್ರಿಯವಾಗಿ ಜನರಿಗೆ ಸಹಾಯ ಮಾಡುತ್ತಿದ್ದೇವೆ ಮಹಿಳೆಯರಿಗೆ ದೆಹಲಿಯನ್ನು ಸುರಕ್ಷಿತವಾಗಿಸಲು ಆಯೋಗ ಹಗಲಿರುಳು ಶ್ರಮಿಸುತ್ತಿದೆ ಎಂದು ತಿಳಿಸಿದರು.

    ಇದೆಂಥ ಬದುಕು? ಮನೆಯಲ್ಲೇ ತಂದೆಯ ಶವವಿಟ್ಟುಕೊಂಡು ದಿನದೂಡಿದ ಮಹಿಳೆ…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts