More

    ಇದೆಂಥ ಬದುಕು? ಮನೆಯಲ್ಲೇ ತಂದೆಯ ಶವವಿಟ್ಟುಕೊಂಡು ದಿನದೂಡಿದ ಮಹಿಳೆ…

    ಕೋಲ್ಕತ: ಮಹಿಳೆಯೋರ್ವಳು ತನ್ನ 86 ವರ್ಷದ ತಂದೆಯ ಶವವನ್ನು ದಹನ ಮಾಡದೇ ಮನೆಯಲ್ಲಿಟ್ಟುಕೊಂಡೇ ಇಟ್ಟುಕೊಂಡಿರುವುದು ಕಂಡುಬಂದಿದೆ.
    ಶವ ಕೊಳೆತು, ದುರ್ವಾಸನೆ ಬಂದಾಗ ಅಲ್ಲಿನ ಸುತ್ತಮುತ್ತಲ ಜನರು ಪೊಲೀಸರಿಗೆ ಮಾಹಿತಿ ನೀಡಿದಾಗ ಈ ಆಘಾತಕಾರಿ ಅಂಶ ಬೆಳಕಿಗೆ ಬಂದಿದೆ.
    ಕೋಲ್ಕತದ ಬೆಹಲಾದ ಸರ್ಸುನಾ ಪ್ರದೇಶದಲ್ಲಿ ಇದು ಘಟನೆ ನಡೆದಿದ್ದು,
    51 ವರ್ಷದ ಮಹಿಳೆ ನೀಲಂಜನಾ ಚಟರ್ಜಿ ತನ್ನ 86 ವರ್ಷದ ತಂದೆ ರವೀಂದ್ರನಾಥ್ ಅವರ ಕೊಳೆತ ದೇಹದೊಂದಿಗೆ ರಾಖಲ್ ಮುಖರ್ಜಿ ರಸ್ತೆಯ ಫ್ಲ್ಯಾಟ್‌ನಲ್ಲಿ ವಾಸಿಸುತ್ತಿದ್ದಳು.

    ಇದನ್ನೂ ಓದಿ: ತಂದೆಯಂತೆಯೇ ಕುಖ್ಯಾತನಾಗಬೇಕೆಂದು ಬಯಸಿದ್ದ ಆಶೀಶ್ ಬಕ್ಕರ್​ವಾಲಾ ಎನ್​ಕೌಂಟರ್​​ನಲ್ಲಿ ಅರೆಸ್ಟ್..

    ಆಕೆ ಕುಟುಂಬ ಸದಸ್ಯರ ಶವದೊಂದಿಗೆ ವಾಸಿಸುತ್ತಿರುವುದು ಇದೇ ಮೊದಲಲ್ಲ. ಇದಕ್ಕೂ ಮೊದಲು ಕಳೆದ ಒಂದು ವರ್ಷದಲ್ಲಿ ನೀಲಂಜನ ತನ್ನ ತಾಯಿ ಮತ್ತು ಸಹೋದರನ ಶವವನ್ನು ಅದೇ ರೀತಿ ಮಾಡಿದ್ದಾಳೆ. ಆಕೆಯ ಸಹೋದರ ಕಳೆದ ವರ್ಷ ಫೆಬ್ರವರಿಯಲ್ಲಿ ಸಾವನ್ನಪ್ಪಿದ್ದರೆ, ತಾಯಿ ಐದು ತಿಂಗಳ ನಂತರ ನಿಧನರಾದರು. ನೀಲಂಜನ ಪೊಲೀಸರಿಗೆ ಮಾಹಿತಿ ನೀಡಲಿಲ್ಲ ಅಥವಾ ಅವರ ಶವಗಳನ್ನು ದಹನ ಮಾಡಲಿಲ್ಲ ಮತ್ತು ಶವದೊಂದಿಗೆ ವಾಸಿಸುತ್ತಲೇ ಇದ್ದಳು.
    ಆಕೆ ತನ್ನ ತಂದೆ ಮತ್ತು ತಾಯಿ ಜೊತೆಗೆ ತನ್ನ ಸಹೋದರನ ಶವದೊಂದಿಗೆ ಎರಡು ದಿನಗಳನ್ನು ಕಳೆದಿದ್ದಾಳೆ ಮತ್ತು ಅವಳ ತಾಯಿ ತೀರಿಕೊಂಡಾಗ, ಶವದೊಂದಿಗೆ ಅವಳು ತಂದೆ ಜತೆಗೆ ಎರಡು ದಿನಗಳ ಇದ್ದಳು ಎನ್ನಲಾಗಿದೆ.

    ಇದನ್ನೂ ಓದಿ:  ಹೈದರಾಬಾದ್​ ಯುವತಿ ಜತೆ ಮದ್ವೆ: ಹನಿಮೂನ್​ ಬೆನ್ನಲ್ಲೇ ಹೊಸ ವರಸೆ ತೆಗೆದ ಬೆಂಗಳೂರು ಟೆಕ್ಕಿ!

    ಫ್ಲ್ಯಾಟ್‌ನಿಂದ ತೀವ್ರ ದುರ್ವಾಸನೆ ಉಂಟಾದ ನಂತರ ಸ್ಥಳೀಯ ನಿವಾಸಿಗಳು ಸರ್ಸುನಾ ಪೊಲೀಸರಿಗೆ ಮಾಹಿತಿ ನೀಡಿದರು. ನಂತರ ಪೊಲೀಸರು ಶವವನ್ನು ವಶಪಡಿಸಿಕೊಂಡು ಪೋಸ್ಟ್‌ಮಾರ್ಟಮ್‌ಗೆ ಕಳುಹಿಸಿದ್ದಾರೆ. “ರವೀಂದ್ರನಾಥ್ ಒಂದೂವರೆ ವರ್ಷದಿಂದ ರೋಗದಿಂದ ಬಳಲುತ್ತಿದ್ದರು ಮತ್ತು ಸ್ಥಳೀಯರು ಅವರಿಗೆ ಆಹಾರ ಧಾನ್ಯ ನೀಡುತ್ತಿದ್ದರು ಎಂದು ತೋರುತ್ತದೆ. ನೀಲಂಜನಳ ಬದುಕನ್ನು ಖಚಿತಪಡಿಸಿಕೊಳ್ಳಲು ಸ್ಥಳೀಯರು ಮತ್ತು ಎನ್​​ಜಿಒಗಳ ಸಹಾಯ ಬೇಕಿದೆ ಎನ್ನುತ್ತಾರೆ ಪೊಲೀಸ್ ಅಧಿಕಾರಿ.
    ನೀಲಾಂಜನ ಅವರ ಕುಟುಂಬ ವಾಸಿಸುತ್ತಿರುವ ಮನೆ ತುಂಬಾ ಕೆಟ್ಟ ಸ್ಥಿತಿಯಲ್ಲಿತ್ತು. ಜಿಲ್ಲಾಧಿಕಾರಿ (ಬೆಹಾಲಾ) ನೀಲಂಜನ್ ಬಿಸ್ವಾಸ್ ಪ್ರಕಾರ, ಅವರ ಕುಟುಂಬವು ಮಾನಸಿಕ ಅಸ್ವಸ್ಥತೆಯಿಂದ ಬಳಲುತ್ತಿರುವಂತೆ ಕಾಣುತ್ತದೆ, ಇದು ಮನೆಯ ಸ್ಥಿತಿಯಿಂದ ಸ್ಪಷ್ಟವಾಗಿದೆ. ಸಾವಿನ ಸಮಯವನ್ನು ಕಂಡುಹಿಡಿಯಲು ಪೊಲೀಸರು ಶವಪರೀಕ್ಷೆ ವರದಿಗಾಗಿ ಕಾಯುತ್ತಿದ್ದಾರೆ.

    ಪ್ರೀತಿಸಿದ ಜೋಡಿಗೆ ವಿವಾಹ ಮಾಡಿಸಿದ ಪೊಲೀಸರು; ಕನ್ಯಾದಾನ ಮಾಡಿದ್ದು ಸಬ್​ ಇನ್ಸ್​​ಪೆಕ್ಟರ್​​

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts