More

    ‘ತೊಗಲಾಗಿನ ಬಲ್ಲ ತಿಮ್ಮಣ್ಣ’ ಅಂತೆ ಡಿಸಿಎಂ ಕಾರಜೋಳ! ಉದ್ಯೋಗದ ಬಗ್ಗೆ ಏನೂ ಗೊತ್ತಿಲ್ಲ…

    ಬಾಗಲಕೋಟೆ: ನನಗೆ ಉದ್ಯೋಗದ ಬಗ್ಗೆ ನಾಲೇಡ್ಜ್​ ಇಲ್ಲ. “ತೊಗಲಾಗಿನ ಬಲ್ಲ ತಿಮ್ಮಣ್ಣ” ಇದ್ದಂಗೆ ನಾನು. ವ್ಯಾಪಾರ, ಉದ್ಯೋಗ, ವಹಿವಾಟಿನ ಬಗ್ಗೆ ಐಡಿಯಾ ಇಲ್ಲ… ಎಂದು ರಾಜ್ಯದ ಉಪ ಮುಖ್ಯಮಂತ್ರಿ ಡಿಸಿಎಂ ಗೋವಿಂದ ಕಾರಜೋಳ ಹೇಳಿದರು.

    ಪಾಂಡವಪುರ ಸಕ್ಕರೆ ಕಾರ್ಖಾನೆಯನ್ನು ಮುರುಗೇಶ್ ನಿರಾಣಿ ಅವರು ಗುತ್ತಿಗೆ ಪಡೆದ ವಿಚಾರವಾಗಿ ಮಂಗಳವಾರ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಡಿಸಿಎಂ, ದಯವಿಟ್ಟು ಆ ವ್ಯಾಪಾರಕ್ಕೂ ನನಗೂ ಸಂಬಂಧ ಇಲ್ಲದ ವಿಷಯ. “ತೊಗಲಾಗಿನ ಬಲ್ಲ ತಿಮ್ಮಣ್ಣ” ಅಂತಾರಲ್ಲ ಹಳ್ಳಿಯಲ್ಲಿ ಹಾಗೆ ನಾನು. ಅವರ ವ್ಯಾಪಾರ ಉದ್ಯೋಗದ ಬಗ್ಗೆ ನನಗೇನೂ ಗೊತ್ತಿಲ್ಲ ಎಂದು ಹಾರಿಕೆ ಉತ್ತರ ನೀಡಿದರು.

    ಇದನ್ನೂ ಓದಿರಿ ರಕ್ತಸ್ರಾವದಿಂದ ಕರೊನಾ ಸೋಂಕಿತ ಗರ್ಭಿಣಿ ನರಳಾಡಿದರೂ ಚಿಕಿತ್ಸೆ ವಿಳಂಬ… ಮಗು ಬದುಕಲಿಲ್ಲ!

    ನಿರಾಣಿ ಅವರ ವ್ಯಾಪಾರ ಉದ್ಯೋಗದ ಬಗ್ಗೆ ನನಗೇನು ಗೊತ್ತು? ಎಂದ ಕಾರಜೋಳ, ಆಡಳಿತ ವ್ಯವಸ್ಥೆಯಲ್ಲಿ ಯಾರು ಹೆಚ್ಚು ಬಿಡ್ ಮಾಡ್ತಾರೋ ಅವರಿಗೆ ಕೊಡ್ತಾರೆ. ಇವತ್ತು ದೇಶದಲ್ಲಿ ಉದ್ಯಮ ಅನ್ನೋದು ತೊಂದರೆಯಲ್ಲಿದೆ. ಹಾಗೆಯೇ ಸಕ್ಕರೆ ಉದ್ಯಮವೂ ತೊಂದರೆಯಲ್ಲಿದೆ ಎಂದು ಸಮರ್ಥಿಸಿಕೊಂಡರು.

    ಇದನ್ನೂ ಓದಿರಿ ಮುಂದುವರೆದಿದೆ ಆನ್​ಲೈನ್​ ತರಗತಿ ಅನಾಹುತ: ಸ್ಮಾರ್ಟ್​ಫೋನ್​ ಇಲ್ಲವೆಂದು ವಿದ್ಯಾರ್ಥಿನಿ ಆತ್ಮಹತ್ಯೆ!

    ಈ ಪದದ ಅರ್ಥ: ಗ್ರಾಮೀಣ ಭಾಗದಲ್ಲಿ ನಾಣ್ನುಡಿಯಂತೆ ಬಳಕೆಯಲ್ಲಿರುವ ಪದ ‘ತೊಗಲಾಗಿನ ಬಲ್ಲ ತಿಮ್ಮಣ್ಣ’. ತೊಗಲಿನ ಹದ (ಚರ್ಮಗಾರಿಕೆ) ಚರ್ಮೋದ್ಯಮದಲ್ಲಿ ಇರುವವರಿಗೆ ಮಾತ್ರ ಗೊತ್ತಿರುತ್ತದೆಯೇ ವಿನಃ ಅನಾಮಿಕ ತಿಮ್ಮಣ್ಣನಿಗೆ ಗೊತ್ತಿರೋದಿಲ್ಲ ಅಂತ ಇದರ ಅರ್ಥ. ಏನೂ ಅರಿಯದವ, ಆ ಬಗ್ಗೆ ತಿಳಿಕೆ ಇಲ್ಲದವ, ಮುಗ್ಧ… ಎಂಬ ಸಂದರ್ಭಕ್ಕೆ ತಕ್ಕಂತೆ ಈ ನಾಣ್ನುಡಿಯನ್ನು ಬಳಸುತ್ತಾರೆ.

    ಅಂದಹಾಗೇ ಡಿಸಿಎಂ ಗೋವಿಂದ​ ಕಾರಜೋಳ ಅವರ ಮಾತಿನಲ್ಲೇ ‘.. ನನಗೆ ಯಾವ ಉದ್ಯೋಗದ ಬಗ್ಗೆಯೂ ನಾಲೆಡ್ಜ್​ ಇಲ್ಲ..!’ ಎಂಬುದನ್ನು ಕೇಳಲು ಈ ವಿಡಿಯೋ ಲಿಂಕ್​ನ್ನು ಕ್ಲಿಕ್​ ಮಾಡಿ.

    ವಿಡಿಯೋ ನೋಡಿ 

    ಅಯ್ಯೋ.. ನಮ್​ ಡಿಸಿಎಂಗೆ ಉದ್ಯೋಗದ ಬಗ್ಗೆ ಏನೂ ಗೊತ್ತಿಲ್ವಂತೆ!

    ಅಯ್ಯೋ.. ನಮ್​ ಡಿಸಿಎಂಗೆ ಉದ್ಯೋಗದ ಬಗ್ಗೆ ಏನೂ ಗೊತ್ತಿಲ್ವಂತೆ!ರಾಜ್ಯದ ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ ಅವರಿಗೆ ಯಾವುದೇ ಉದ್ಯೋಗದ ಬಗ್ಗೆ ಏನೂ ಗೊತ್ತಿಲ್ವಂತೆ. ಸ್ವತಃ ಅವರೇ ಈ ಬಗ್ಗೆ ಮಾಧ್ಯಮಗಳ ಎದುರು "ನಾನು ತೊಗಲಾಗಿನ ಬಲ್ಲ ತಿಮ್ಮಣ್ಣ ಇದ್ದಂಗೆ" ಎಂದು ಹೇಳಿಕೊಂಡಿದ್ದಾರೆ. ಆ ವಿಡಿಯೋ ಇಲ್ಲಿದೆ ನೋಡಿ. #Pandavapura #SugarFactory #MurugeshNirani #Bagalakote #GovindKarajola #Employment

    Vijayavani ಅವರಿಂದ ಈ ದಿನದಂದು ಪೋಸ್ಟ್ ಮಾಡಲಾಗಿದೆ ಮಂಗಳವಾರ, ಜೂನ್ 9, 2020

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts