More

    ವಸತಿ ಶಾಲೆಗಳಲ್ಲಿ ಸ್ಥಳೀಯರಿಗೆ ಆದ್ಯತೆ: ಡಿಸಿಎಂ ಗೋವಿಂದ ಕಾರಜೋಳ

    ಚಿಕ್ಕನಾಯಕನಹಳ್ಳಿ: ರಾಜ್ಯದ ವಸತಿ ಶಾಲೆಗಳಲ್ಲಿ ಸ್ಥಳೀಯ ವಿದ್ಯಾರ್ಥಿಗಳಿಗೆ ಮುಂದಿನ ಶೈಕ್ಷಣಿಕ ವರ್ಷದಿಂದ ಶೇ.25 ಮೀಸಲಾತಿ ಜಾರಿ ಮಾಡಲಾಗುವುದು ಎಂದು ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ ಹೇಳಿದರು.

    ಸರ್ಕಾರಿ ಪ್ರೌಢಶಾಲೆ ಆವರಣದಲ್ಲಿ ಬುಧವಾರ ಸಮಾಜಕಲ್ಯಾಣ ಇಲಾಖೆ, ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ, ಲೋಕೋಪಯೋಗಿ ಇಲಾಖೆ ಹಾಗೂ ಇತರ ಇಲಾಖೆಗಳಿಗೆ ಸಂಬಂಧಿಸಿದ ಕಾಮಗಾರಿಗಳ ಶಂಕುಸ್ಥಾಪನೆ ಹಾಗೂ ಉದ್ಘಾಟನಾ ಸಮಾರಂಭ ಉದ್ಘಾಟಿಸಿ ಮಾತನಾಡಿದರು.

    ರಾಜ್ಯದಲ್ಲಿ ಬಿಜೆಪಿ ಸರ್ಕಾರದಿಂದ ಮಂಜೂರಾದ 8 ವಸತಿ ಶಾಲೆಗಳಲ್ಲಿ, ಚಿಕ್ಕನಾಯಕನಹಳ್ಳಿ ಕ್ಷೇತ್ರದಲ್ಲಿ 3 ವಸತಿ ಶಾಲೆಗಳ ಕಟ್ಟಡಕ್ಕೆ ನೂರು ಕೋಟಿ ರೂಪಾಯಿ ನೀಡಿದ್ದು, ಒಂದೊಂದು ಶಾಲೆಯಲ್ಲೂ 250 ವಿದ್ಯಾರ್ಥಿಗಳು ಓದಬಹುದು ಎಂದರು.

    ವಸತಿ ಶಾಲೆಗಳಲ್ಲಿ ಶಿಕ್ಷಕರ ಕೊರತೆ ನೀಗಿಸಲು ಸರ್ಕಾರ 661 ಶಿಕ್ಷಕರ ನೇಮಕಾತಿ ಆದೇಶ ಹೊರಡಿಸಿದ್ದು, ಮುಂಬರುವ ದಿನಗಳಲ್ಲಿ ಖಾಲಿ ಹುದ್ದೆಗಳನ್ನು ಭರ್ತಿ ಮಾಡಲಾಗುವುದು ಎಂದು ತಿಳಿಸಿದರು. ಎರಡೂವರೆ ಸಾವಿರ ಬೋರ್‌ವೆಲ್‌ಗಳನ್ನು ಗಂಗಾಕಲ್ಯಾಣ ಯೋಜನೆಯಡಿ ಕೊರೆಸಲಾಗಿದ್ದು, ಅದನ್ನು ಹತ್ತು ಸಾವಿರ ವಾಡುವುದಾಗಿ ಗೋವಿಂದ ಕಾರಜೋಳ ತಿಳಿಸಿದರು.

    ಜಿಲ್ಲಾ ಉಸ್ತುವಾರಿ ಸಚಿವ ಜೆ.ಸಿ.ಮಾಧುಸ್ವಾಮಿ ಮಾತನಾಡಿ, ನಾಡಿನಲ್ಲಿ ಎಸ್‌ಸಿ, ಎಸ್‌ಟಿ ಜನಾಂಗದ ಬಡವರು ಸ್ವಾಭಿಮಾನವಾಗಿ ಬದುಕಲು ಅವರಿಗೆ ಗಂಗಾಕಲ್ಯಾಣ ಯೋಜನೆ ಮೂಲಕ 400 ಜನರಿಗೆ ಅನುದಾನ ನೀಡಲಾಗಿದೆ. ರಾಜ್ಯದ ನೀರಿನ ಸಮಸ್ಯೆ ನಿವಾರಿಸಲು ಸಮುದ್ರಕ್ಕೆ ಸೇರುವ ನೀರಿನ ಬಳಕೆ, ಉತ್ತರ ಕರ್ನಾಟಕದಲ್ಲಿ ಪ್ರವಾಹ ಸೃಷ್ಠಿಸುವಂತಹ ನದಿ ನೀರು ಬಳಕೆ, ಬೆಂಗಳೂರಿನ ಸುವಾರು 13 ಟಿಎಂಸಿ ತ್ಯಾಜ್ಯ ನೀರು ಶುದ್ಧೀಕರಿಸಿ ಬಳಕೆಯಾಗುವಂತೆ ಮಾಡುವ ಯೋಜನೆಗಳ ಬಗ್ಗೆ ಪ್ರಧಾನಿ ಜತೆಗೆ ಚರ್ಚಿಸಲಾಗುತ್ತದೆ. ಈ ಯೋಜನೆಗೆ ಕೇಂದ್ರ ಒಂದು ಸಾವಿರ ಕೋಟಿ ಅನುದಾನ ನೀಡುವ ನಿರೀಕ್ಷೆಯಿದೆ ಎಂದರು.

    ಜಿಪಂ ಉಪಾಧ್ಯಕ್ಷೆ ಶಾರದಾ, ಸದಸ್ಯರಾದ ಹುಚ್ಚಯ್ಯ, ಮಂಜುಳಮ್ಮ, ತಾಲೂಕು ಪಂಚಾಯಿತಿ ಅಧ್ಯಕ್ಷೆ ಚೇತನಾಗಂಗಾಧರ್, ಇಒ ನಾರಾಯಣಸ್ವಾಮಿ ಇದ್ದರು.

    ವಾಲ್ಮೀಕಿ, ಅಂಬೇಡ್ಕರ್ ಭವನ ನಿರ್ಮಾಣಕ್ಕೆ 25 ಲಕ್ಷ ರೂಪಾಯಿ: ತಾಲೂಕಿನ 10 ಗ್ರಾಮಗಳಲ್ಲಿ ತಲಾ 25 ಲಕ್ಷ ರೂಪಾಯಿಯಂತೆ ವಾಲ್ಮೀಕಿ ಭವನ ಮತ್ತು ಅಂಬೇಡ್ಕರ್ ಭವನ ನಿರ್ಮಾಣಕ್ಕೆ ಕ್ರಮಕೈಗೊಳ್ಳಲಾಗುತ್ತದೆ. ಪಟ್ಟಣದಲ್ಲಿ 68 ಕೋಟಿ ರೂ. ವೆಚ್ಚದ ಒಳಚರಂಡಿ ವ್ಯವಸ್ಥೆಗೆ ಮುಖ್ಯಮಂತ್ರಿ ಅಂಕಿತ ಹಾಕಿದ್ದಾರೆ ಎಂದು ಹೇಳಿದ ಸಚಿವ ಮಾಧುಸ್ವಾಮಿ, ಬುಕ್ಕಾಪಟ್ಟಣ ಹೋಬಳಿಯ ವಸತಿ ಶಾಲೆಯೊಂದಕ್ಕೆ ಹಣ ಮಂಜೂರು ವಾಡುವಂತೆ ಸಚಿವ ಗೋವಿಂದ ಕಾರಜೋಳ ಅವರಲ್ಲಿ ಮನವಿ ವಾಡಿದರು.

    ಭೂ ಒಡೆತನ ಯೋಜನೆಗೆ 500 ಎಕರೆ ಭೂಮಿ ಖರೀದಿ: ಸರ್ಕಾರ ಶಿಕ್ಷಣಕ್ಕೆ ಒತ್ತು ನೀಡಿದ್ದು, ಎಸ್ಸಿ, ಎಸ್ಟಿ ಸಮುದಾಯದ ಭೂ ರಹಿತರಿಗೆ ಭೂಮಿ ಒದಗಿಸಲು ಭೂ ಒಡೆತನ ಯೋಜನೆಯಲ್ಲಿ 500 ಎಕರೆ ಭೂಮಿ ಖರೀದಿ ವಾಡಲಾಗಿದ್ದು, ವಾರ್ಚ್ ವೇಳೆಗೆ 1500 ಎಕರೆಗಳಷ್ಟು ಭೂಮಿ ಖರೀದಿಸಲಾಗುತ್ತದೆ. ನಿರುದ್ಯೋಗಿಗಳಿಗೆ ಕೌಶಲ ತರಬೇತಿ ನೀಡಿ, ಸ್ವಯಂ ಉದ್ಯೋಗಕ್ಕಾಗಿ ಸಾಲಸೌಲಭ್ಯ ನೀಡಲಾಗುತ್ತದೆ ಎಂದು ಡಿಸಿಎಂ ಗೋವಿಂದ ಕಾರಜೋಳ ತಿಳಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts