More

    ಸಮಾಜ ಕಲ್ಯಾಣ ಖಾತೆ ಕಳೆದುಕೊಂಡ ಡಿಸಿಎಂ ಗೋವಿಂದ ಕಾರಜೋಳ ಹೇಳಿದ್ದೇನು?

    ಬೆಂಗಳೂರು: ಸಂಪುಟ ಪುನರ್​ ರಚನೆಗೂ ಮುನ್ನವೇ ಸಿಎಂ ಯಡಿಯೂರಪ್ಪ ಸಂಪುಟದಲ್ಲಿ ದಿಢೀರ್​ ಬದಲಾವಣೆಯಾಗಿದ್ದು, ಶ್ರೀರಾಮುಲು ಕೈಯಲ್ಲಿದ್ದ ಆರೋಗ್ಯ ಖಾತೆಯನ್ನು ಡಾ.ಕೆ.ಸುಧಾಕರ್​ಗೆ ಕೊಡಲಾಗುತ್ತಿದೆ. ಪರಿಣಾಮ ಡಿಸಿಎಂ ಗೋವಿಂದ ಕಾರಜೋಳ ಅವರ ಬಳಿಯಿದ್ದ ​ಸಮಾಜ ಕಲ್ಯಾಣ ಖಾತೆ ಶ್ರೀರಾಮುಲು ಹೆಗಲಿಗೆ ಹೋಗಲಿದೆ.

    ಈ ಮಹತ್ವದ ಬೆಳವಣಿಗೆ ಬಗ್ಗೆ ಶ್ರೀರಾಮುಲು, ‘ದಿಢೀರ್ ಬದಲಾವಣೆ ಮಾಡಿದರೆ ನಾನು ಏನೂ ಕೆಲಸ ಮಾಡಿಲ್ಲ ಎಂಬ ಸಂದೇಶ ಹೋಗುತ್ತದೆ’ ಎಂದು ಅಸಮಾಧಾನ ಹೊರಹಾಕಿದ್ದಾರೆ. ಇದರ ಬೆನ್ನಲ್ಲೇ ಮಾತನಾಡಿರುವ ಗೋವಿಂದ ಕಾರಜೋಳ, ‘ಸಮಾಜ ಕಲ್ಯಾಣ ಇಲಾಖೆ ನನ್ನ ಬಳಿ ಹೆಚ್ಚುವರಿಯಾಗಿತ್ತು. ಅದನ್ನೀಗ ಶ್ರೀರಾಮುಲುಗೆ ಕೊಡಲು ಸಿಎಂ ಉದ್ದೇಶಿಸಿದ್ದಾರೆ. ನನಗೆ ಯಾವುದೇ ಬೇಸರವಿಲ್ಲ. ಆದರೆ, ಕೋವಿಡ್​ ಕಾರಣದಿಂದಾಗಿ ಈ ವರ್ಷ ಬಡವರು, ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಮಕ್ಕಳ ಶಿಕ್ಷಣ ಹಾಳಾಯ್ತು ಅನ್ನೋದೊಂದೇ ನನಗೆ ಬೇಸರ’ ಎಂದಿದ್ದಾರೆ.

    ಸಮಾಜ ಕಲ್ಯಾಣ ಖಾತೆ ಕಳೆದುಕೊಂಡ ಡಿಸಿಎಂ ಗೋವಿಂದ ಕಾರಜೋಳ ಹೇಳಿದ್ದೇನು?‘ಸಮಾಜ ಕಲ್ಯಾಣ ಹಾಗೂ ಹಿಂದುಳಿದ ವರ್ಗಗಳ ಇಲಾಖೆ ಎರಡೂ ಒಂದೇ. ಹಾಗಾಗಿ ಆ ಎರಡೂ ಇಲಾಖೆಗಳನ್ನು ಒಬ್ಬರೇ ನಿರ್ವಹಿಸೋದು ಸೂಕ್ತ ಎಂದು ಶ್ರೀರಾಮುಲುಗೆ ನೀಡಿದ್ದಾರೆ. ಅದೇ ರೀತಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ವೈದ್ಯಕೀಯ ಶಿಕ್ಷಣ ಇಲಾಖೆ ಎರಡೂ ಒಬ್ಬರಲ್ಲೇ ಇರುವುದು ಸೂಕ್ತ. ಆಡಳಿತ ದೃಷ್ಟಿಯಿಂದ ಅನುಕೂಲವಾಗಲಿದೆ. ಹಾಗಾಗಿ ಆ ಎರಡೂ ಖಾತೆಯನ್ನು ಡಾ.ಸುಧಾಕರ್​ಗೆ ನೀಡಲಾಗಿದೆ’ ಎಂದು ಡಿಸಿಎಂ ಕಾರಜೋಳ ಹೇಳಿದರು.

    ‘ಸಮಾಜ ಕಲ್ಯಾಣ ಇಲಾಖೆಯ ಹಾಸ್ಟೆಲ್ ಹಾಗೂ ವಸತಿ ಶಾಲೆಗಳಲ್ಲಿ ಸಾವಿರಾರು ಮಕ್ಕಳಿಗೆ ಶಿಕ್ಷಣ, ಊಟ, ವಸತಿ ಸಿಗುತ್ತಿತ್ತು. ಈ ವರ್ಷ ಕರೊನಾದಿಂದಾಗಿ ಅದಕ್ಕೆ ಕಲ್ಲು ಬಿತ್ತು’ ಎಂದು ಬೇಸರಿಸಿದರು.

    ರಾಜ್ಯಪಾಲರ ಅಂಕಿತಕ್ಕೆ ಪಟ್ಟಿ ರವಾನೆ: ಡಾ‌.ಸುಧಾಕರ್​ಗೆ ವೈದ್ಯಕೀಯ ಶಿಕ್ಷಣದ ಜತೆಗೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಖಾತೆ, ಶ್ರೀರಾಮುಲುಗೆ ಹಿಂದುಳಿದ ವರ್ಗಗಳ ಇಲಾಖೆ ಜತೆಗೆ ಸಮಾಜ ಕಲ್ಯಾಣ ಖಾತೆ ನಿಗದಿ ಮಾಡಿ ಶಿಫಾರಸು ಪಟ್ಟಿಯನ್ನು ಮುಖ್ಯಮಂತ್ರಿ ಕಚೇರಿಯಿಂದ ರಾಜಭವನಕ್ಕೆ ಕಳುಹಿಸಲಾಗಿದೆ. ಡಿಸಿಎಂ ಗೋವಿಂದ ಕಾರಜೋಳಗೆ ಹಾಲಿ ಇರುವ ಲೋಕೋಪಯೋಗಿ ಖಾತೆ ಉಳಿಯಲಿದೆ. ಇಂದು ಮಧ್ಯಾಹ್ನದೊಳಗೆ ಖಾತೆ ಬದಲಾವಣೆಗೆ ರಾಜ್ಯಪಾಲರಿಂದ ಅಧಿಕೃತ ಅಂಕಿತ ಬೀಳುವ ಸಾಧ್ಯತೆ ಇದೆ.

    ಖಾತೆ ಬದಲಾವಣೆ: ಸ್ಫೋಟಗೊಂಡ ಶ್ರೀರಾಮುಲು ಅಸಮಾಧಾನ

    ಬಿಜೆಪಿಗೆ ಬಹುಮತ ಇಲ್ಲದಿದ್ದರೂ ಪದೇಪದೆ ಈ ಗುಲಾಬಿಯೇ ಅಧ್ಯಕ್ಷೆ!

    ಆರೋಗ್ಯ ಇಲಾಖೆಯಲ್ಲಿ ಭ್ರಷ್ಟಾಚಾರ ಆಗಿಲ್ಲ: ಆದಿಚುಂಚನಗಿರಿ ಶ್ರೀಗಳ ಭೇಟಿ ಬಳಿಕ ಡಾ. ಸುಧಾಕರ್ ಹೇಳಿಕೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts