More

    ಸಂಚಾರಿ ವಿಜಯ್‌ರ ಸಂಪೂರ್ಣ ಚಿಕಿತ್ಸಾ ವೆಚ್ಚ ನಾನೇ ಭರಿಸುವೆ: ಆಸ್ಪತ್ರೆಗೆ ಕರೆ ಮಾಡಿದ ಡಿಸಿಎಂ ‌ಅಶ್ವತ್ಥನಾರಾಯಣ

    ಬೆಂಗಳೂರು: ಶನಿವಾರ ರಾತ್ರಿ ಸಂಭವಿಸಿದ ಬೈಕ್ ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡು ಆಸ್ಪತ್ರೆಯಲ್ಲಿರುವ ಸ್ಯಾಂಡಲ್‌ವುಡ್ ನಟ ಸಂಚಾರಿ ವಿಜಯ್​ರ ಸಂಪೂರ್ಣ ಚಿಕಿತ್ಸಾ ವೆಚ್ಚ ಭರಿಸಲು ಉಪ ಮುಖ್ಯಮಂತ್ರಿ ಡಾ.ಸಿ.ಎನ್.‌ಅಶ್ವತ್ಥನಾರಾಯಣ ಮುಂದೆ ಬಂದಿದ್ದಾರೆ.

    ಸಂಚಾರಿ ವಿಜಯ್‌ ಚಿಕಿತ್ಸೆ ಪಡೆಯುತ್ತಿರುವ ಅಪೋಲೋ ಆಸ್ಪತ್ರೆಯ ಆಡಳಿತ ವರ್ಗದ ಮುಖ್ಯಸ್ಥರಿಗೆ ಇಂದು(ಸೋಮವಾರ) ಬೆಳಗ್ಗೆ ಖುದ್ದು ಡಿಸಿಎಂ ಅವರೇ ಕರೆ ಮಾಡಿ ವಿಜಯ್‌ ಅವರ ಯೋಗ-ಕ್ಷೇಮ ವಿಚಾರಿಸಿದರು. ಅಲ್ಲದೆ ಅವರ ಚಿಕಿತ್ಸೆಯ ಸಂಪೂರ್ಣ ವೆಚ್ಚವನ್ನು ಡಾ. ಸಿ.ಎನ್.ಅಶ್ವತ್ಥನಾರಾಯಣ ಫೌಂಡೇಶನ್‌ ಭರಿಸುತ್ತದೆ ಎಂದು ಭರವಸೆ ನೀಡಿದರು.

    ಸಂಚಾರಿ ವಿಜಯ್​ರ ಚಿಕಿತ್ಸೆಗೆ ಸಂಬಂಧಿಸಿದಂತೆ ಅವರ ಸಂಬಂಧಿಗಳಿಂದಾಗಲೀ ಅಥವಾ ಬೇರೆ ಯಾರಿಂದಲೂ ಹಣ ಪಾವತಿಸಿಕೊಳ್ಳದಂತೆ ಅಶ್ವತ್ಥನಾರಾಯಣ ಅವರು ಆಸ್ಪತ್ರೆ ಆಡಳಿತ ವರ್ಗಕ್ಕೆ ಸೂಚಿಸಿದ್ದಾರೆ.

    ಅಪಘಾತದಲ್ಲಿ ಸಂಚಾರಿ ವಿಜಯ್​ರ ಮೆದುಳಿಗೆ ತೀವ್ರಪೆಟ್ಟಾಗಿದ್ದು, ವೈದ್ಯರು ಶಸ್ತ್ರಚಿಕಿತ್ಸೆ ಮಾಡಿದ್ದಾರೆ. ಸದ್ಯ ಪ್ರಜ್ಞಾಹೀನ ಸ್ಥಿತಿಯಲ್ಲಿ ಇದ್ದಾರೆ.

    ಅಪಘಾತಕ್ಕೀಡಾದ ನಟ ಸಂಚಾರಿ ವಿಜಯ್ ಸ್ಥಿತಿ ಹೇಗಿದೆ?: ಹೆಲ್ತ್ ಬುಲೆಟಿನ್ ಬಿಡುಗಡೆ ಮಾಡಿದ ಆಸ್ಪತ್ರೆ

    ಯಾರಿಗೂ ತಿಳಿಯದಂತೆ ಪ್ರೇಯಸಿಯನ್ನ ಮನೆಯಲ್ಲೇ 10 ವರ್ಷ ಅಡಗಿಸಿಟ್ಟಿದ್ದ ಪ್ರಿಯಕರ! ಆ ಕೋಣೆಯ ರಹಸ್ಯ ಬಯಲಾಗಿದ್ದೇ ರೋಚಕ

    ನನ್ನ ಮೇಲೆ ಅತ್ಯಾಚಾರ-ಕೊಲೆ ಯತ್ನ ನಡೆದಿದೆ, ಯಾರೊಬ್ಬರೂ ನೋವು ಆಲಿಸುತ್ತಿಲ್ಲ… ಎಂದು ಕಣ್ಣೀರಿಟ್ಟ ನಟಿ

    38 ಹೆಂಡ್ತಿಯರ ಮುದ್ದಿನ ಗಂಡ, 89 ಮಕ್ಕಳ ತಂದೆ ಇನ್ನಿಲ್ಲ! ಇವರ ವೈವಾಹಿಕ ಬದುಕೇ ಕುತೂಹಲ

    ದಾರಿ ತಪ್ಪಿದ ಮಗ, ಬಬ್ರುವಾಹನ, ಸಾರಥಿ.. ಸಿನಿಮಾ ನಿರ್ಮಾಪಕ ಕೆಸಿಎನ್​ ಚಂದ್ರಶೇಖರ್​ ನಿಧನ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts