More

    ಕೋವಿಡ್​ಗೆ ಔಷಧ ಇದೆ, ಆತಂಕ ಪಡಬೇಡಿ: ಡಿಸಿಎಂ ಅಶ್ವಥನಾರಾಯಣ

    ಮಂಡ್ಯ: ಕೋವಿಡ್ ಸೋಂಕಿತರನ್ನು ಗುಣಪಡಿಸಲು ಸಾಕಷ್ಟು ಔಷಧಗಳು ಲಭ್ಯ ಇವೆ. ಯಾರೊಬ್ಬರೂ ಆತಂಕ ಪಡುವ ಅವಶ್ಯಕತೆ ಇಲ್ಲ ಎಂದು ರಾಜ್ಯದ ಜನತೆಗೆ ಉಪ ಮುಖ್ಯಮಂತ್ರಿ ಸಿ.ಎನ್​. ಅಶ್ವಥ ನಾರಾಯಣ ಅಭಯ ನೀಡಿದ್ದಾರೆ.

    ಸೋಂಕಿತರಲ್ಲಿ ಶೆ.90ರಷ್ಟು ಜನ ಆರಾಮಾಗಿ ಇರುತ್ತಾರೆ. ಶೇ. 5-6 ಮಂದಿ ಮಾತ್ರವೇ ಆಸ್ಪತ್ರೆಗೆ ಬರುವ ಅವಶ್ಯಕತೆ ಇರುತ್ತದೆ. ಯಾರೊಬ್ಬರೂ ಆತಂಕ ಪಡಬಾರದು. ಎಲ್ಲ ಮೂಲಸೌಕರ್ಯ ವ್ಯವಸ್ಥೆಗಳನ್ನ ಸರ್ಕಾರ ಮಾಡಿದೆ. ಸರ್ಕಾರಕ್ಕೆ ಹಣದ ಕೊರತೆ ಇಲ್ಲ. ಬೆಂಗಳೂರಲ್ಲಿ ಒಂದೆರಡು ದಿನ ಬೆಡ್​ಗಳ ಸಮಸ್ಯೆಯಾಗಿದ್ದು ನಿಜ. ಒಂದೇ ಬಾರಿಗೆ ಸೋಂಕಿತರ ಸಂಖ್ಯೆ ಹೆಚ್ಚಾಗಿದ್ದರಿಂದ ಸಮಸ್ಯೆಯಾಗಿತ್ತು. ಈಗ ಸಮಸ್ಯೆ ಇಲ್ಲ. 15 ಸಾವಿರ ಬೆಡ್​ ವ್ಯವಸ್ಥೆ ಮಾಡಲಾಗಿದೆ. ಸಾಕಷ್ಟು ಆಂಬುಲೆನ್ಸ್​ಗಳಿವೆ ಎಂದರು. ಇದನ್ನೂ ಓದಿರಿ ಕುಣಿಗಲ್​ ಶಾಸಕ ಡಾ.ರಂಗನಾಥ್​ಗೆ ಕರೊನಾ, ರಾಜ್ಯ-ರಾಷ್ಟ್ರಮಟ್ಟದ ಕಾಂಗ್ರೆಸ್​ ನಾಯಕರಲ್ಲೂ ಸೋಂಕಿನ ಭೀತಿ

    ಕರೊನಾ ಕಾಣಿಸಿಕೊಂಡ ಆರಂಭದಲ್ಲಿ ಲಾಕ್‌ಡೌನ್ ಬೇಕಿತ್ತು. ಈಗಾಗಲೇ ಸಾಕಷ್ಟು ದಿನ ಲಾಕ್‌ಡೌನ್ ಮಾಡಲಾಗಿದೆ. ಮತ್ತೆ ಲಾಕ್‌ಡೌನ್ ಮಾಡುವ ಮೂಲಕ ಮತ್ತಷ್ಟು ದಿನಗಳನ್ನ ದೂಡಬಹುದು. ಜನರು ಜೀವನ ಕಟ್ಟಿಕೊಳ್ಳುತ್ತಿದ್ದಾರೆ. ಹೀಗಿರುವಾಗ ಮತ್ತೆ ಗೊಂದಲ ಉಂಟು ಮಾಡುವುದು ಬೇಡ. ಕರೊನಾ ಜತೆಜತೆಯಲ್ಲೇ ನಿರ್ವಹಣೆ ಮಾಡುವುದು ಬೇಕಿದೆ ಎಂದು ಡಿಸಿಎಂ ಅಭಿಪ್ರಾಯಪಟ್ಟರು.

    ಡುಡಿದು ಬದುಕುವವರಿಗೆ ಲಾಕ್‌ಡೌನ್ ಸಮಸ್ಯೆಯನ್ನು ಉಂಟು ಮಾಡುತ್ತೆ. ಕರೊನಾ ನಿಯಂತ್ರಣ ಮಾಡುವ ಕೆಲಸವನ್ನ ಸರ್ಕಾರ ಮಾಡುತ್ತಿದೆ. ಇದಕ್ಕೆ ಲಾಕ್‌ಡೌನ್ ಪರಿಹಾರವಲ್ಲ, ಅದರ ಅವಶ್ಯಕತೆಯೂ ಇಲ್ಲ ಎಂದರು.

    ಇದನ್ನೂ ಓದಿರಿ ನನ್ನ ಪತ್ನಿ ಮನೆಯಲ್ಲೇ ಇರಿ ಅಂದ್ರೂ ಪ್ರವಾಸಕ್ಕೆ ಹೋದೆ… ಜಗದೀಶ್ವರನನ್ನು ಮೆಚ್ಚಿಸಬಹುದು, ಜಗ ಮೆಚ್ಚಿಸುವುದು ಕಷ್ಟ: ಸಿ.ಟಿ.ರವಿ

    ಚುನಾವಣೆ ಇನ್ನೂ ದೂರ ಇದೆ. ಅವರಿಗೆ ಲೆಕ್ಕ ಕೇಳಲು ಟೈಂ ಇದೆ. ಇದು ಸರ್ಕಾರದ ದುಡ್ಡು, ಜನರ ದುಡ್ಡು. ಯಾರೂ ತಪ್ಪಿಸಿಕೊಳ್ಳಲು ಆಗಲ್ಲ. ಲೆಕ್ಕ ಕೇಳಲಿಕ್ಕೆ ಸದನ‌ ಇದೆ. ಜನ ಈಗಲೇ ಸಾಕಷ್ಟು ನೊಂದಿದ್ದಾರೆ. ಈಗ ಜನರಲ್ಲಿ ಗೊಂದಲ ಉಂಟು ಮಾಡದೆ, ಜನರ ಜತೆ ನಿಂತು ಕೆಲಸ‌ ಮಾಡಲಿ ಎಂದು ಮಾಜಿ ಸಿಎಂ ಸಿದ್ದರಾಮಯ್ಯಗೆ ಅಶ್ವಥನಾರಾಯಣ ತಿರುಗೇಟು ನೀಡಿದರು.

    ರಾಜ್ಯದಲ್ಲಿ ಕರೊನಾ ಸೋಂಕು ಸಮುದಾಯಕ್ಕೆ ಹರಡಿಲ್ಲ. ನಮ್ಮಲ್ಲಿ ಇನ್ನೂ 20 ಸಾವಿರದಷ್ಟಿದ್ದೇವೆ. ಬೇರೆ ರಾಜ್ಯದಲ್ಲೇ ಸಮುದಾಯಕ್ಕೆ ಹರಡಿಲ್ಲ ಎಂದರು.

    ಬಸ್​ ನಿಲ್ದಾಣದಲ್ಲೇ ಕರೊನಾ ಶಂಕಿತನ ಶವ ಬಿಟ್ಟು ಹೋದರು!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts