More

    ನೂರು ಕೋಟಿ ಸಾಲ ನೀಡಲು ಬದ್ಧ: ಕಾರ್ಯಾಗಾರದಲ್ಲಿ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಬ್ಯಾಲಹಳ್ಳಿ ಗೋವಿಂದಗೌಡ ಭರವಸೆ

    ಕೆಜಿಎಫ್: ಹೊಸದಾಗಿ ರಚನೆಗೊಂಡಿರುವ ಕೆಜಿಎಫ್ ತಾಲೂಕಿನಲ್ಲಿ ರೈತರು ಮತ್ತು ಮಹಿಳೆಯರ ಆರ್ಥಿಕ ಸ್ವಾವಲಂಬನೆಗಾಗಿ ಡಿಸಿಸಿ ಬ್ಯಾಂಕಿನಿಂದ 100 ಕೋಟಿ ರೂ. ಶೂನ್ಯಬಡ್ಡಿ ದರದಲ್ಲಿ ಸಾಲ ನೀಡಲು ಬದ್ಧ ಎಂದು ಕೋಲಾರ-ಚಿಕ್ಕಬಳ್ಳಾಪುರ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್ ಅಧ್ಯಕ್ಷ ಬ್ಯಾಲಹಳ್ಳಿ ಗೋವಿಂದಗೌಡ ಹೇಳಿದರು.

    ತಾಲೂಕಿನ ಪಾರಂಡಹಳ್ಳಿಯಲ್ಲಿ ಬುಧವಾರ ಬ್ಯಾಂಕಿನಿಂದ ಶೂನ್ಯಬಡ್ಡಿ ದರದಲ್ಲಿ ಸಾಲ ಪಡೆಯುವ ಅನುಸರಿಸಬೇಕಾದ ಕ್ರಮಗಳ ಕುರಿತು ರೈತರು ಮತ್ತು ಮಹಿಳೆಯರಿಗೆ ಹಮ್ಮಿಕೊಂಡಿದ್ದ ಒಂದು ದಿನದ ಕಾರ್ಯಾಗಾರದಲ್ಲಿ ಮಾತನಾಡಿ, ಬ್ಯಾಂಕಿನಿಂದ ಕಳೆದ 7 ವರ್ಷಗಳಿಂದ ಜಾತಿ, ಧರ್ಮ, ಪಕ್ಷಭೇದವಿಲ್ಲದೆ ಸಾಲ ಸೌಲಭ್ಯ ಕಲ್ಪಿಸಲಾಗುತ್ತಿದೆ. ಬ್ಯಾಂಕಿಗೆ ಬಡವರು ಕಲ್ಪವೃಕ್ಷವಿದ್ದಂತೆ. ನಾವು ಎಂದಿಗೂ ಬಡವರಿಗೆ ದ್ರೋಹ ಬಗೆಯುವ ಕೆಲಸ ಮಾಡಿಲ್ಲ, ಮುಂದೆಯೂ ಪಾರದರ್ಶಕ ಹಾಗೂ ಪ್ರಾಮಾಣಿಕವಾಗಿ ಆಡಳಿತ ನಡೆಸುತ್ತೇವೆ ಎಂದರು.

    ನನ್ನ ಬಗ್ಗೆ ಯಾರಾದರು ಆರೋಪ ಮಾಡಿದರೆ ತಲೆಕೆಡಿಸಿಕೊಳ್ಳುವುದಿಲ್ಲ, ಆದರೆ ಬಡವರನ್ನು ಆರ್ಥಿಕವಾಗಿ ಸದೃಢಗೊಳಿಸಲು ಶ್ರಮಿಸುತ್ತಿರುವ ಬ್ಯಾಂಕಿನ ಬಗ್ಗೆ ಇಲ್ಲ ಸಲ್ಲದ ಆರೋಪ, ಅಪಪ್ರಚಾರ ಮಾಡಿದರೆ ದೇವರು ಕ್ಷಮಿಸಲ್ಲ ಎಂದು ಎಚ್ಚರಿಸಿದರು.

    ಕೆಲವರು ಶೂನ್ಯಬಡ್ಡಿ ದರಕ್ಕೆ ಸಾಲವೆಂದರೆ ಪಡೆದ ಹಣ ವಾಪಸ್ ಕೊಡಬೇಕಾಗಿರುವುದಿಲ್ಲವೆಂದು ತಪ್ಪಾಗಿ ಅರ್ಥೈಯಿಸಿಕೊಂಡಿದ್ದಾರೆ. ರೈತರು ಮತ್ತು ಮಹಿಳೆಯರಿಗೆ ಸರ್ಕಾರದ ಮಾರ್ಗಸೂಚಿಯನ್ವಯ ಸಾಲ ನೀಡಲಾಗುತ್ತದೆ. ಗ್ರಾಮದ ಮುಖಂಡರು ರೈತರ ಮನೆ ಮನೆಗೆ ಭೇಟಿ ನೀಡಿ ಅರ್ಹರ ಪಟ್ಟಿ ಸಿದ್ಧಪಡಿಸಿಕೊಟ್ಟಲ್ಲಿ ಸಾಲ ನೀಡಲಾಗುತ್ತದೆ. ಪಿ-ನಂಬರ್ ಹೊಂದಿರುವ ಜಮೀನುಗಳಿಗೂ ಸಾಲ ನೀಡಲಾಗುವುದು. ಆದರೆ ನಿಮ್ಮ ಆಧಾರ್ ಕಾರ್ಡ್ ಇತರ ಬ್ಯಾಂಕ್‌ಗಳಲ್ಲಿ ಜೊಡಣೆಯಾಗಿರಬಾರದು. ಇದಲ್ಲದೆ ಕೋಳಿಫಾರಂ ಮಾಡಲು, ಕುರಿ ಸಾಕಾಣಿಕೆ ಸೇರಿ ವಿವಿಧ ಕಸುಬುಗಳಿಗೆ ಸಾಲ ನೀಡಲಾಗುವುದು ಎಂದರು.

    ಬ್ಯಾಂಕ್ ಉತ್ತಮ ಸೇವೆ ಮಾಡುತ್ತಿರುವ ಹಿನ್ನೆಲೆಯಲ್ಲಿ ನಬಾರ್ಡ್ ಹಾಗೂ ಅಪೆಕ್ಸ್ ಬ್ಯಾಂಕ್ ಪ್ರಶಸ್ತಿ ನೀಡಿ ಬೆನ್ನುತಟ್ಟಿದೆ. ಡಿಸಿಸಿ ಬ್ಯಾಂಕ್ ಉಳಿದರೆ ಮಾತ್ರ ಬಡವರ ಕಷ್ಟ ತೀರುತ್ತದೆ ಎಂದು ಶಾಸಕ ರೂಪಕಲಾ ಹೇಳಿದರು.

    ಪಿಎಲ್‌ಡಿ ಬ್ಯಾಂಕ್ ಮಾಜಿ ಅಧ್ಯಕ್ಷ, ಹಿರಿಯ ಕಾಂಗ್ರೆಸ್ ಮುಖಂಡ ವೆಂಕಟಕೃಷ್ಣರೆಡ್ಡಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಾಧಾಕೃಷ್ಣರೆಡ್ಡಿ, ಘಟ್ಟಮಾದಮಂಗಲ ಗ್ರಾಪಂ ಅಧ್ಯಕ್ಷ ಹರಿಕೃಷ್ಣ, ತಾಪಂ ಮಾಜಿ ಅಧ್ಯಕ್ಷ ರಾಮಕೃಷ್ಣರೆಡ್ಡಿ, ಜಿಪಂ ಮಾಜಿ ಸದಸ್ಯ ಅಪ್ಪಿ ವೆಂಕಟರಾಮರೆಡ್ಡಿ, ಎಪಿಎಂಸಿ ಅಧ್ಯಕ್ಷ ವಿಜಯರಾಘವರೆಡ್ಡಿ, ಗ್ರಾಪಂ ಅಧ್ಯಕ್ಷ ಚಂದ್ರಪ್ಪ, ಕಮ್ಮಸಂದ್ರ ಗ್ರಾಪಂ ಮಾಜಿ ಅಧ್ಯಕ್ಷ ನಾಗರಾಜ್, ಮುಖಂಡರಾದ ಆನಂದಮೂರ್ತಿ, ಬಾಲಕೃಷ್ಣ, ಪಾರಂಡಹಳ್ಳಿ ಗ್ರಾಪಂ ಮಾಜಿ ಅಧ್ಯಕ್ಷ ಸುಬ್ಬಾರೆಡ್ಡಿ ಇತರರಿದ್ದರು.

    ಡಿಸಿಸಿ ಬ್ಯಾಂಕ್ ಬಡವರ ಪಾಲಿಗೆ ಅಪತ್ಫಾಂದವನಂತೆ. ಉತ್ತಮ ಸೇವೆ ನೀಡುತ್ತಿದೆ. ದೇಶದಲ್ಲಿ ಹಲವು ರಾಷ್ಟ್ರೀಕೃತ ಬ್ಯಾಂಕ್‌ಗಳು ಕಾರ‌್ಯ ನಿರ್ವಹಿಸುತ್ತಿವೆಯಾದರೂ ಡಿಸಿಸಿ ಬ್ಯಾಂಕ್ ಸಹಕಾರ ಕ್ಷೇತ್ರದಲ್ಲಿ ಇತಿಹಾಸ ಸೃಷ್ಟಿಸಿದೆ.
    ಎಂ.ರೂಪಕಲಾ, ಶಾಸಕಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts