More

    ದಾವೂದ್ ಭಂಟ ದಾನಿಶ್​ ಚಿಕ್ನಾ ಬಂಧನ

    ಕೋಟಾ: ಮುಂಬೈನಲ್ಲಿ ದಾವೂದ್ ಇಬ್ರಾಹಿಂನ ಡ್ರಗ್ಸ್​ ದಂಧೆ ನೋಡಿಕೊಳ್ಳುವ ದಾನಿಶ್ ಮರ್ಚೆಂಟ್ ಅಲಿಯಾಸ್ ದಾನಿಶ್ ಚಿಕ್ನಾ ಪೊಲೀಸರ ವಶವಾಗಿದ್ದಾನೆ. ಎನ್​​ಸಿಬಿ ಮತ್ತು ರಾಜಸ್ತಾನದ ಕೋಟ ಪೊಲೀಸರ ಜಂಟಿ ಕಾರ್ಯಾಚರಣೆಯಲ್ಲಿ ದಾನಿಶ್​ನನ್ನು ಕೋಟ ಪಟ್ಟಣದಿಂದ ನಿನ್ನೆ ರಾತ್ರಿ ಬಂಧಿಸಲಾಗಿದೆ.

    ಇತ್ತೀಚೆಗೆ ಮಹಾರಾಷ್ಟ್ರದ ಡೊಂಗ್ರಿಯಲ್ಲಿ ಡ್ರಗ್ ಫ್ಯಾಕ್ಟರಿ ನಡೆಸುವ ಚಿಕ್ನಾನ ಪತ್ತೆ ಕಾರ್ಯದ ಅಂಗವಾಗಿ ಎನ್​ಸಿಬಿ ಡೊಂಗ್ರಿಯಲ್ಲಿ ದಾಳಿ ನಡೆಸಿತ್ತು. ಆತನ ಗ್ಯಾಂಗ್​ನ ಪ್ರಮುಖ ಸದಸ್ಯನೊಬ್ಬನನ್ನು ಬಂಧಿಸಿ, ಭಾರೀ ಪ್ರಮಾಣದ ಕೋಡೀನ್ ಆಧರಿತ ಕಾಫ್​ ಸಿರಪ್​ಅನ್ನು ಜಪ್ತಿ ಮಾಡಿತ್ತು.

    ಇದನ್ನೂ ಓದಿ: ನಾನು ಕೂಲಿಯವ, ನನ್ನಲ್ಲಿ ಆಸ್ತಿ ಇಲ್ಲ: ಹೆಂಡ್ತಿಗೆ ಡಿವೋರ್ಸ್​ ಕೊಟ್ರೆ ಹಿರಿಯರ ಆಸ್ತಿಯಲ್ಲಿ ಪಾಲು ಕೊಡಬೇಕೆ?

    ಕಳೆದ ರಾತ್ರಿ ಎನ್​ಸಿಬಿ ನೀಡಿದ ಮಾಹಿತಿಯ ಮೇರೆಗೆ ಕೋಟಾ ಪೊಲೀಸರು ಚಿಕ್ನಾನನ್ನು ಬಂಧಿಸಿದ್ದಾರೆ. ಆತನ ವಾಹನದಲ್ಲಿದ್ದ ಡ್ರಗ್ಸ್ ಕೂಡ ವಶಪಡಿಸಿಕೊಳ್ಳಲಾಗಿದೆ. ಚಿಕ್ನಾ ವಿರುದ್ಧ ಕೊಲೆಯ ಪ್ರಕರಣವೂ ಸೇರಿದಂತೆ 6 ಮೊಕದ್ದಮೆಗಳನ್ನು ದಾಖಲಿಸಲಾಗಿದೆ. (ಏಜೆನ್ಸೀಸ್)

    “ಡೊನಾಲ್ಡ್ ಟ್ರಂಪ್ ರೀತಿಯಲ್ಲಿ ವರ್ತಿಸುತ್ತಿರುವ ಮಮತಾ”

    ಈ ಅಪರೂಪದ ತರಕಾರಿಯ ಬೆಲೆ ಕೇಳಿದರೆ ತಲೆ ಸುತ್ತುವುದು ಗ್ಯಾರಂಟಿ!

    ತಿರುಪತಿ ತಿಮ್ಮಪ್ಪನಿಗೆ ಮುಡಿ ಕೊಟ್ಟು ಮನೆಗೆ ಬಂದ ಚಾಲಕನಿಗೆ ಕಾದಿತ್ತು ಶಾಕ್​: ಇನ್ನೂ ಬಗೆಹರಿಯದ ಸಮಸ್ಯೆ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts