More

    ಡೇವಿಡ್​ ವಾರ್ನರ್​ ಶಾಕಿಂಗ್​ ನಿರ್ಧಾರ: ಪ್ರಖ್ಯಾತ ಟಿ20 ಲೀಗ್​ಗೆ ಗುಡ್​ ಬೈ!

    ನವದೆಹಲಿ: ಮಹಾಮಾರಿ ಕರೊನಾ ವೈರಸ್​ ಸಂಕಷ್ಟದ ನಡುವೆಯೇ ಆಸ್ಟ್ರೇಲಿಯಾದ ದಿಗ್ಗಜ ಆಟಗಾರ ಡೇವಿಡ್​ ವಾರ್ನರ್​ ಬಹುದೊಡ್ಡ ನಿರ್ಧಾರವನ್ನು ತೆಗೆದುಕೊಂಡಿದ್ದು, ಪ್ರಸಿದ್ಧ ಟಿ20 ಲೀಗ್​ನಿಂದ ಹೊರಗುಳಿಯುವುದಾಗಿ ಹೇಳಿದ್ದಾರೆ.

    ಹೌದು, ಐಪಿಎಲ್​ನಲ್ಲಿ ಮಿಂಚು ಹರಿಸಿರುವ ವಾರ್ನರ್​ ಒಂದು ನಿರ್ಧಾರಕ್ಕೆ ಬಂದಿದ್ದು, ಅಂತಾರಾಷ್ಟ್ರೀಯ ವೃತ್ತಿಜೀವನದ ಸಮಯದಲ್ಲಿ ಬಿಗ್​ ಬ್ಯಾಷ್​ ಲೀಗ್​ನಲ್ಲಿ ಪಾಲ್ಗೊಳ್ಳದಿರುವುದಾಗಿ ಹೇಳಿದ್ದಾರೆ. ಬಿಗ್​ ಬ್ಯಾಷ್​ ಲೀಗ್​ ಆಸ್ಟ್ರೇಲಿಯಾದ ಅತಿ ದೊಡ್ಡ ಟಿ20 ಲೀಗ್​ ಆಗಿದ್ದು, ಇದು ಆರಂಭವಾದಾಗ ಡೇವಿಡ್​ ವಾರ್ನರ್​ ಬಿಗ್ಗೆಸ್ಟ್​ ಆಟಗಾರನಾಗಿ ಹೊರ ಹೊಮ್ಮಿದ್ದರು.

    ಇದನ್ನೂ ಓದಿ: ಕೀರ್ತಿ ಸುರೇಶ್​ ಮೊದಲ ತೆಲುಗು ಚಿತ್ರಕ್ಕೆ ಕೊನೆಗೂ ಸಿಕ್ತು ಬಿಡುಗಡೆ ಭಾಗ್ಯ

    ಅಂತಾರಾಷ್ಟ್ರೀಯ ವೃತ್ತಿ ಜೀವನ ಆರಂಭಿಸಿದ ನಂತರ ಕಳೆದ 7 ವರ್ಷಗಳಿಂದ ಲೀಗ್​ನಲ್ಲಿ ವಾರ್ನರ್​ ಭಾಗವಹಿಸಿಲ್ಲ. ಆಸ್ಟ್ರೇಲಿಯಾ ತಂಡಕ್ಕಾಗಿ ಆಡುವಾಗ ಬಿಗ್​ಬ್ಯಾಷ್​ ಲೀಗ್​ನಲ್ಲಿ ಪಾಲ್ಗೊಳ್ಳಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.

    ಕೋವಿಡ್​ ಸಮಯದಲ್ಲಿ ಕ್ರಿಕೆಟ್​ ಲೋಕದಲ್ಲಿ ಬದಲಾಗಿರುವ ನಿಯಮಗಳ ಬಗ್ಗೆಯೂ ಮಾತನಾಡಿರುವ ವಾರ್ನರ್​, ಯಾವುದೇ ಆಟಗಾರನು 12 ತಿಂಗಳು ಕ್ವಾರಂಟೈನ್​ ಮತ್ತು ಬಯೋ ಬಬಲ್‌ನಲ್ಲಿ ಉಳಿಯುವುದು ತುಂಬಾ ಕಷ್ಟವೆಂದಿದ್ದಾರೆ.

    ಬಯೋ ಬಬಲ್​ ಮುಂದುವರಿಸುವುದು ಸುಲಭವಲ್ಲ. ಹೆಚ್ಚು ಹೊತ್ತು ಬಬಲ್​ ಒಳಗೆ ಉಳಿಯುವುದು ಸವಾಲಿನ ಕೆಲಸ ಎಂದು ವಾರ್ನರ್ ಹೇಳಿದ್ದಾರೆ. ಕ್ವಾರಂಟೈನ್​ ಅವಧಿಯು ಸಹ ತುಂಬಾ ಕಠಿಣ ಎಂದಿದ್ದಾರೆ. (ಏಜೆನ್ಸೀಸ್​)

    ಆಲ್ ಇಂಡಿಯಾ ರೇಡಿಯೋದಲ್ಲಿ ಪ್ರಸಾರವಾಗಲಿದೆ ಭಾರತ-ಆಸೀಸ್ ಕ್ರಿಕೆಟ್​ ಸರಣಿಯ ಕಾಮೆಂಟರಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts