More

    ಆಸ್ಟ್ರೇಲಿಯಾ ತಂಡಕ್ಕೆ ಡೇವಿಡ್ ವಾರ್ನರ್ ವಾಪಸ್

    ಮೆಲ್ಬೋರ್ನ್: ಗಾಯದ ಸಮಸ್ಯೆಯಿಂದ ಚೇತರಿಸಿಕೊಂಡಿರುವ ಡೇವಿಡ್ ವಾರ್ನರ್ ಹಾಗೂ ವಿಲ್ ಪುಕೊವಸ್ಕಿ ಆಸ್ಟ್ರೇಲಿಯಾ ತಂಡಕ್ಕೆ ವಾಪಸಾಗಿದ್ದಾರೆ. ಭಾರತ ವಿರುದ್ಧದ ಉಳಿದ ಎರಡು ಟೆಸ್ಟ್ ಪಂದ್ಯಗಳಿಗೆ ಬುಧವಾರ ಆಸ್ಟ್ರೇಲಿಯಾ ತಂಡ ಪ್ರಕಟಿಸಲಾಯಿತು. ಮೊದಲ ಎರಡು ಪಂದ್ಯಗಳಲ್ಲಿ ನಿರೀಕ್ಷಿತ ನಿರ್ವಹಣೆ ತೋರಲು ವಿಫಲವಾಗಿದ್ದ ಜೋ ಬರ್ನ್ಸ್ ಅವರನ್ನು ತಂಡದಿಂದ ಕೈಬಿಡಲಾಗಿದೆ. ನಾಲ್ಕು ಇನಿಂಗ್ಸ್‌ಗಳಿಂದ ಬರ್ನ್ಸ್ ಏಕೈಕ ಅರ್ಧಶತಕ ಸಿಡಿಸಲಷ್ಟೇ ಶಕ್ತರಾಗಿದ್ದರು.

    ಇದನ್ನೂ ಓದಿ: ಪಾಕಿಸ್ತಾನ ವಿರುದ್ಧ ನ್ಯೂಜಿಲೆಂಡ್ ತಂಡಕ್ಕೆ 101 ರನ್ ಜಯ,

    ತೋಡೆ ಸಂಧು ನೋವಿನಿಂದಾಗಿ ಡೇವಿಡ್ ವಾರ್ನರ್ ಆರಂಭಿಕ ಎರಡು ಪಂದ್ಯಗಳಿಂದ ಹೊರಗುಳಿದಿದ್ದರು. ‘ವಾರ್ನರ್, ಪುಕೊವಸ್ಕಿ ಹಾಗೂ ಸೀನ್ ಅಬೋಟ್ ಸಿಡ್ನಿ ಟೆಸ್ಟ್ ಸಿದ್ಧತೆಗಾಗಿ ಗುರುವಾರ ಸಂಜೆ ವೇಳೆಗೆ ಮೆಲ್ಬೋರ್ನ್‌ನಲ್ಲಿ ತಂಡ ಕೂಡಿಕೊಳ್ಳಲಿದ್ದಾರೆ’ ಎಂದು ರಾಷ್ಟ್ರೀಯ ಆಯ್ಕೆ ಸಮಿತಿ ಸದಸ್ಯ ಟ್ರೇವೊರ್ ಹೊನ್ಸ್ ತಿಳಿಸಿದ್ದಾರೆ. ಡೇವಿಡ್ ವಾರ್ನರ್ ಅವರನ್ನು ಹನ್ನೊಂದರ ಬಳಗದಲ್ಲಿ ಆಡಿಸಬೇಕು ಎಂಬುದೇ ತಂಡದ ಅಭಿಲಾಷೆ. 3ನೇ ಟೆಸ್ಟ್‌ಗೆ ಇನ್ನು 7 ದಿನಗಳ ಬಾಕಿಯಿದ್ದು, ಪಂದ್ಯದ ವೇಳೆ ಸಂಪೂರ್ಣ ಸನ್ನದ್ಧರಾಗಲಿದ್ದಾರೆ. ಸೀನ್ ಅಬೋಟ್ ಪೂರ್ಣ ಪ್ರಮಾಣದಲ್ಲಿ ಫಿಟ್ ಆಗಿದ್ದಾರೆ ಎಂದು ಟ್ರೇವೊರ್ ಹೇಳಿದ್ದಾರೆ.

    ಇದನ್ನೂ ಓದಿ: ಎಂಎಸ್ ಧೋನಿ, ವಿರಾಟ್ ಕೊಹ್ಲಿ ಸಾಲಿಗೆ ಸೇರ್ಪಡೆಗೊಂಡ ರವೀಂದ್ರ ಜಡೇಜಾ, 

    ಭಾರತ ಹಾಗೂ ಆಸ್ಟ್ರೇಲಿಯಾ ನಡುವಿನ 3 ಪಂದ್ಯಗಳ ಏಕದಿನ ಸರಣಿಯ 2ನೇ ಪಂದ್ಯದ ವೇಳೆ ಡೇವಿಡ್ ವಾರ್ನರ್ ಗಾಯದ ಸಮಸ್ಯೆಗೆ ತುತ್ತಾಗಿದ್ದರು. ಇದರಿಂದಾಗಿ ಕಡೇ ಏಕದಿನ ಹಾಗೂ 3 ಟಿ20 ಪಂದ್ಯಗಳ ಸರಣಿಯಿಂದ ಹೊರಗುಳಿದಿದ್ದರು. ಜತೆಗೆ ಆರಂಭಿಕ ಎರಡು ಟೆಸ್ಟ್ ಪಂದ್ಯಗಳಿಗೂ ಅಲಭ್ಯರಾಗಿದ್ದರು. ಉಭಯ ತಂಡಗಳ 4 ಪಂದ್ಯಗಳ ಸರಣಿ 2 ಪಂದ್ಯಗಳ ಅಂತ್ಯಕ್ಕೆ 1-1 ರಿಂದ ಸಮಬಲ ಬಲಗೊಂಡಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts