More

    ಸನ್​ರೈಸರ್ಸ್ ತಂಡದ ನಾಯಕತ್ವ ತ್ಯಜಿಸುವಾಗ ಡೇವಿಡ್​ ವಾರ್ನರ್​ ಪ್ರತಿಕ್ರಿಯೆ ಹೇಗಿತ್ತು ಗೊತ್ತೇ?

    ನವದೆಹಲಿ: ಡೇವಿಡ್​ ವಾರ್ನರ್​, ಐಪಿಎಲ್​ ಇತಿಹಾಸದಲ್ಲೇ ಶ್ರೇಷ್ಠ ಆಟಗಾರರಲ್ಲಿ ಒಬ್ಬರು ಎನಿಸಿಕೊಂಡಿದ್ದಾರೆ. ಆರಂಭಿಕನಾಗಿ ಉತ್ತಮ ಹೆಸರು ಮಾಡಿರುವ ವಾರ್ನರ್​ಗೆ ಈ ಬಾರಿಯ ಐಪಿಎಲ್​ನಲ್ಲಿ ಅದೃಷ್ಟ ಕೈಹಿಡಿಯಲಿಲ್ಲ. 2016ರಲ್ಲಿ ಸನ್​ರೈಸರ್ಸ್​ ಹೈದರಾಬಾದ್​ ತಂಡ ಚಾಂಪಿಯನ್​ಪಟ್ಟ ಅಲಂಕರಿಸುವಲ್ಲಿ ಪ್ರಮುಖ ಪಾತ್ರವಹಿಸಿದ್ದರು. ಆದರೆ, ಈ ಬಾರಿ ಸನ್​ರೈಸರ್ಸ್​ ತಂಡ ಸತತ ಸೋಲುಗಳಿಂದ ಕಂಗೆಟ್ಟರೆ, ವಾರ್ನರ್​ ವೈಯಕ್ತಿಕವಾಗಿಯೂ ಹಿನ್ನಡೆ ಅನುಭವಿಸಿದರು. ಇದರಿಂದ ತಂಡದ ಆಡಳಿತ ಮಂಡಳಿ ವಾರ್ನರ್​ ಅವರನ್ನು ನಾಯಕತ್ವದಿಂದ ಕೆಳಗಿಸಿತು. ಇದಾದ ಬಳಿಕ ಕೋವಿಡ್​-19 ಪ್ರಕರಣಗಳು ಕಂಡುಬಂದ ಹಿನ್ನೆಲೆಯಲ್ಲಿ ಅನಿದಿರ್ಷ್ಟಾವಧಿವರೆಗೆ ಲೀಗ್​ ಮುಂದೂಡಲಾಗಿದೆ. ಆದರೆ, ನಾಯಕತ್ವ ತಲೆದಂಡವಾಗಿದ್ದೆ ಪ್ರಮುಖ ಚರ್ಚೆಗೆ ಗ್ರಾಸವಾಯಿತು.

    ಇದನ್ನೂ ಓದಿ: ನಾನಿನ್ನು ಕ್ವಾರಂಟೈನ್​ನಲ್ಲಿರುವೆ, ದಯವಿಟ್ಟು ಯಾರು ಸುಳ್ಳು ಸುದ್ದಿ ಹಬ್ಬಿಸಬೇಡಿ ಎಂದು ಸಾಹ ಅಭಿಮಾನಿಗಳಲ್ಲಿ ಮನವಿ ಮಾಡಿದ್ಯಾಕೆ?

    ತಂಡದ ಆಡಳಿತ ಮಂಡಲಿ ನಾಯಕತ್ವ ಕಸಿದ ಬಳಿಕ ವಾರ್ನರ್​ ತೋರಿದ ಪ್ರತಿಕ್ರಿಯೆಗೆ ಸನ್​ರೈಸರ್ಸ್​ ತಂಡದ ಸಹಾಯಕ ಕೋಚ್​ ಬ್ರಾಡ್​ ಹ್ಯಾಡಿನ್​ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ತಂಡದ ಆಡಳಿತ ಮಂಡಳಿ ವಾರ್ನರ್​ ಅವರನ್ನು ನಾಯಕತ್ವದಿಂದ ಸಭೆಯಲ್ಲಿ ಪ್ರಕಟಿಸಿದ ಬಳಿಕ ವಾರ್ನರ್​, ಮುಗ್ದ ನಗೆ ಬೀರಿ, ಮರು ಮಾತನಾಡದೆ ಸುಮ್ಮನಾದರು ಎಂದು ಹ್ಯಾಡಿನ್​ ವಿವರಿಸಿದ್ದಾರೆ. ವಾರ್ನರ್​ ಸಾರಥ್ಯದಲ್ಲಿ ಸನ್​ರೈಸರ್ಸ್​ 14ನೇ ಐಪಿಎಲ್​ನಲ್ಲಿ ಇದುವರೆಗೂ ಆಡಿದ 6 ಪಂದ್ಯಗಳಲ್ಲಿ ಏಕೈಕ ಗೆಲುವು ದಾಖಲಿಸಲಷ್ಟೇ ಶಕ್ತವಾಯಿತು. ವಾರ್ನರ್​ ನಾಯಕತ್ವದ ಜತೆಗೆ ಹನ್ನೊಂದರ ಬಳಗದಿಂದಲೂ ಸ್ಥಾನ ಪಡೆಯಲು ವಿಫಲರಾಗಿದ್ದರು.

    ಇದನ್ನೂ ಓದಿ: ಗೋವಾಗೆ ತೆರಳುತ್ತಿದ್ದ ಪೃಥ್ವಿ ಷಾ ಮತ್ತು ಸ್ನೇಹಿತರನ್ನು ತಡೆದ ಪೊಲೀಸರು..!,

    ಲೀಗ್​ನಲ್ಲಿ ಸ್ಥಿರ ನಿರ್ವಹಣೆ ತೋರುತ್ತಿರುವ ವಿದೇಶಿ ಬ್ಯಾಟ್ಸ್​ಮನ್​ ಎನಿಸಿಕೊಂಡಿರುವ ವಾರ್ನರ್​, ಸ್ಫೋಟಕ ಬ್ಯಾಟಿಂಗ್​ಗೆ ಹೆಸರುವಾಸಿಯಾಗಿದ್ದಾರೆ. ಇವರ ಸಾರಥ್ಯದಲ್ಲಿ ಸನ್​ರೈಸರ್ಸ್​ ಆಡಿರುವ 67 ಪಂದ್ಯಗಳಲ್ಲಿ 35 ಜಯ ದಾಖಲಿಸಿದೆ.

    ತುಗೂಯ್ಯಾಲೆಯಲ್ಲಿ ಟೋಕಿಯೊ ಒಲಿಂಪಿಕ್ಸ್​ ಭವಿಷ್ಯ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts