More

    ಕುಡಿದು ಬಾರ್‌ನಲ್ಲಿ ಗಲಾಟೆ ಮಾಡಿಕೊಂಡ ಡೇವಿಡ್ ವಾರ್ನರ್ ಹಾಗೂ ಮೈಕೆಲ್ ಸ್ಲೇಟರ್..!

    ಮಾಲೆ (ಮಾಲ್ಡೀವ್ಸ್): ಸ್ಟಾರ್ ಆರಂಭಿಕ ಡೇವಿಡ್ ವಾರ್ನರ್ ಹಾಗೂ ವೀಕ್ಷಕ ವಿವರಣೆಗಾರ ಮೈಕೆಲ್ ಸ್ಲೇಟರ್ ಮಾಲ್ಡೀವ್ಸ್ ಬಾರ್‌ನಲ್ಲಿ ಕುಡಿದು ಗಲಾಟೆ ಮಾಡಿಕೊಂಡಿದ್ದಾರೆ ಎಂದು ವರದಿಯಾಗಿದೆ. ಐಪಿಎಲ್‌ನಿಂದ ನಿರ್ಗಮಿಸಿದ ಆಸ್ಟ್ರೇಲಿಯಾ ಆಟಗಾರರು ಕ್ವಾರಂಟೈನ್‌ನಲ್ಲಿರುವ ತಾಜ್ ಕೊರಲ್ ರೆಸಾರ್ಟ್‌ನಲ್ಲಿ ಇವರಿಬ್ಬರ ನಡುವೆ ಗಲಾಟೆ ನಡೆದಿದೆ ಎಂದು ಡೈಲಿ ಟೆಲಿಗ್ರಾಫ್ ವರದಿ ಮಾಡಿದೆ. ಆದರೆ, ಆಸ್ಟ್ರೇಲಿಯಾದ ಕ್ರಿಕೆಟಿಗರು ಈ ವರದಿಯನ್ನು ತಳ್ಳಿಹಾಕಿದ್ದಾರೆ.

    ಇದನ್ನೂ ಓದಿ: ಐಪಿಎಲ್​ ಟೂರ್ನಿಯ ಉಳಿದ ಭಾಗ ಭಾರತದಲ್ಲಿ ನಡೆಯಲ್ಲ ಎಂದ ಗಂಗೂಲಿ #ipl2021 

    ‘ನಮ್ಮಿಬ್ಬರ ನಡುವೆ ಯಾವುದೇ ರೀತಿಯ ಗಲಾಟೆ ನಡೆದಿಲ್ಲ. ನಾನು ಹಾಗೂ ಡೇವಿಡ್ ಉತ್ತಮ ಸ್ನೇಹಿತರು’ ಎಂದು ಮಾಜಿ ಕ್ರಿಕೆಟಿಗರೂ ಆಗಿರುವ ಸ್ಲೇಟರ್ ವೆಬ್‌ಸೈಟ್‌ವೊಂದಕ್ಕೆ ತಿಳಿಸಿದ್ದಾರೆ. ‘ಇಂಥ ಘಟನೆಗಳು ನಡೆದಿಲ್ಲ. ಯಾರು ಇಂಥ ಸುಳ್ಳು ಸುದ್ದಿಗಳನ್ನು ಹಬ್ಬಿಸುತ್ತಾರೆ ಎಂದು ತಿಳಿಯುತ್ತಿಲ್ಲ’ ಎಂದು ವಾರ್ನರ್ ಸ್ಪಷ್ಟಪಡಿಸಿದ್ದಾರೆ.

    ಇದನ್ನೂ ಓದಿ: ಪೃಥ್ವಿ ಷಾ ಟೀಮ್​ ಇಂಡಿಯಾಗೆ ಮರಳಬೇಕಾದರೆ ಈ ಷರತ್ತು ಪೂರೈಸಬೇಕಂತೆ!

    ಕ್ರಿಕೆಟಿಗರು, ವೀಕ್ಷಕ ವಿವರಣೆಗಾರರು, ಸಹಾಯಕ ಸಿಬ್ಬಂದಿ ಒಳಗೊಂಡಂತೆ ಆಸ್ಟ್ರೇಲಿಯಾದ 39 ಮಂದಿ ಐಪಿಎಲ್‌ನಲ್ಲಿ ಪಾಲ್ಗೊಂಡಿದ್ದರು. ಐಪಿಎಲ್ ಮುಂದೂಡಿಕೆಯಾದ ಬಳಿಕ ಬಿಸಿಸಿಐ ಆಸ್ಟ್ರೇಲಿಯಾದವರನ್ನು ವಿಶೇಷ ವಿಮಾನದ ಮೂಲಕ ಮಾಲ್ಡೀವ್ಸ್‌ಗೆ ಕಳುಹಿಸಿಕೊಟ್ಟಿತ್ತು. ಮಾಲ್ಡೀವ್ಸ್‌ನಲ್ಲಿ ಕ್ವಾರಂಟೈನ್ ಮುಗಿದ ಬಳಿಕ ಅವರು ತವರು ಆಸ್ಟ್ರೇಲಿಯಾಗೆ ಪ್ರಯಾಣ ಬೆಳೆಸಲಿದ್ದಾರೆ. ಮೇ 15 ರವರೆಗೂ ಆಸ್ಟ್ರೇಲಿಯಾದಲ್ಲಿ ಭಾರತದ ವಿಮಾನಗಳಿಗೆ ನಿಷೇಧವಿರುವುದರಿಂದ ಬಿಸಿಸಿಐ ಮಾಲ್ಡೀವ್ಸ್ ಮಾರ್ಗವಾಗಿ ಕಳುಹಿಸಿಕೊಟ್ಟಿದೆ. ಭಾರತದ ವಿಮಾನಗಳಿಗೆ ನಿಷೇಧ ಹೇರಿದ್ದ ಆಸೀಸ್ ಪ್ರಧಾನಿ ವಿರುದ್ಧ ಮೈಕೆಲ್ ಸ್ಲೇಟರ್ ಕಿಡಿಕಾರಿದ್ದರು.

    ಐಪಿಎಲ್​ ಆಯೋಜನೆಗೆ ಶ್ರೀಲಂಕಾದಿಂದಲೂ ಬಿಸಿಸಿಐಗೆ ಆಹ್ವಾನ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts