More

    ಯುಗಾದಿ ಚಂದ್ರನ ದರ್ಶನ ಭಾಗ್ಯ

    ದಾವಣಗೆರೆ: ಚಂದ್ರನನ್ನು ನೋಡಿದಿರಾ?, ಅಗೋ ಅಲ್ಲಿ ಕಾಣುತ್ತಿದ್ದಾನೆ. ಆ ಚುಕ್ಕಿಯ ಸಮೀಪದಲ್ಲಿ. ಓ ಹೌದು, ನನಗೂ ಕಾಣಿಸಿದ.

    ಗುರುವಾರ ಸಂಜೆ ಚಂದ್ರ ದರ್ಶನದ ವೇಳೆ ಕೇಳಿಬಂದ ಉದ್ಗಾರಗಳಿವು. ಯುಗಾದಿ ಅಂಗವಾಗಿ ಚಂದ್ರನನ್ನು ನೋಡುವ ಸಂಪ್ರದಾಯವಿದೆ. ಅದರಂತೆ ಕುಟುಂಬದ ಸದಸ್ಯರೆಲ್ಲ ಮನೆಯಿಂದ ಹೊರ ಬಂದು ಆಗಸದತ್ತ ದೃಷ್ಟಿ ಹಾಯಿಸಿದರು.

    ಹೈಸ್ಕೂಲ್ ಮೈದಾನ ಸೇರಿ ನಗರದ ವಿವಿಧೆಡೆ ಜನರು ಗುಂಪು ಗುಂಪಾಗಿ ನಿಂತು ಆಕಾಶದ ಕಡೆಗೆ ಬೆರಳು ತೋರುವ ದೃಶ್ಯ ಸಾಮಾನ್ಯವಾಗಿತ್ತು. ಒಬ್ಬರ ಕಣ್ಣಿಗೆ ಬೀಳುತ್ತಿದ್ದಂತೆ ಅಗೋ ಅಲ್ಲಿ ನೋಡಿ ಎಂದು ಹೇಳುತ್ತಿದ್ದರು. ಮಹಿಳೆಯರು, ಮಕ್ಕಳು, ಹಿರಿಯರು, ಯುವಕರೆನ್ನದೆ ಪ್ರತಿಯೊಬ್ಬರೂ ಚಂದ್ರನನ್ನು ಕಣ್ತುಂಬಿಕೊಂಡರು.

    ಆಕಾಶದತ್ತ ಭಕ್ತಿಯಿಂದ ಕೈಮುಗಿದರು. ಕೆಲವರು ಊದುಬತ್ತಿ ಬೆಳಗಿದರೆ ಮತ್ತೆ ಕೆಲವರು ಕರ್ಪೂರದಾರತಿ ಮಾಡಿದರು. ಮಕ್ಕಳು, ಯುವಕ, ಯುವತಿಯರು ಮೊಬೈಲ್ ಹಿಡಿದು ಸೆಲ್ಫಿ ಪಡೆದುಕೊಂಡರು. ಚಂದ್ರನ ದರ್ಶನವಾಗುತ್ತಿದ್ದಂತೆ ಏನೋ ಧನ್ಯತಾ ಭಾವ. ಈ ವರ್ಷ ಎಲ್ಲವೂ ಒಳಿತಾಗಲಿ ಎನ್ನುವ ಪ್ರಾರ್ಥನೆ ಮಾಡಿದರು.

    ಬುಧವಾರ ಜಿಲ್ಲಾದ್ಯಂತ ಯುಗಾದಿಯ ಸಂಭ್ರಮ. ಮಾವಿನ ತೋರಣ ಕಟ್ಟಿ, ಬೇವು-ಬೆಲ್ಲವನ್ನು ಸವಿದು ಜನರು ಹಬ್ಬ ಆಚರಿಸಿದರು. ಮನೆಯಲ್ಲಿ ಪೂಜೆಯ ಜತೆಗೆ ದೇವಸ್ಥಾನಗಳಿಗೂ ಭೇಟಿ ನೀಡಿ ದರ್ಶನ ಪಡೆದರು. ಪರಸ್ಪರ ಶುಭಾಶಯ ವಿನಿಮಯ ಮಾಡಿಕೊಂಡರು. ಹಬ್ಬದೂಟದಲ್ಲಿ ಹೋಳಿಗೆಯ ಸವಿಯಿತ್ತು. ಸಂಜೆ ಪಂಚಾಂಗ ಶ್ರವಣ ಮಾಡಲಾಯಿತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts