More

    ವಿತರಣೆ ನಾಲೆ ಬಳಿ ರೈತರ ಪ್ರತಿಭಟನೆ

    ದಾವಣಗೆರೆ : ಭದ್ರಾ ನಾಲೆಯಿಂದ ಹರಿಯುವ ನೀರು ಕೊನೆ ಭಾಗದ ರೈತರಿಗೆ ತಲುಪುತ್ತಿಲ್ಲ ಎಂದು ರೈತರು ತಾಲೂಕಿನ ಬೆಳ್ಳಿಗನೂಡು ವಿತರಣೆ ನಾಲೆ ಬಳಿ ಗುರುವಾರ ಪ್ರತಿಭಟನೆ ಮಾಡಿದರು.
     ಈ ಸಂದರ್ಭದಲ್ಲಿ ರೈತ ಮುಖಂಡ ಬಿ.ಎಂ. ಸತೀಶ್ ಕೊಳೇನಹಳ್ಳಿ ಮಾತನಾಡಿ, 2ನೇ ನಾಲಾ ಉಪವಿಭಾಗದ, ತ್ಯಾವಣಗಿ ಉಪ ವಿಭಾಗದ ವ್ಯಾಪ್ತಿಯಲ್ಲಿ ಬರುವ ಕಂದಗಲ್, ಶಾಗಲೆ, ಹೂವಿನಮಡು, ಮತ್ತಿ, ಗೋಣಿವಾಡ, ಹೊನ್ನಮರಡಿ, ಕುಕ್ಕುವಾಡ, ಕೊಳೇನಹಳ್ಳಿ, ನಾಗರಸನಹಳ್ಳಿ ಭಾಗಕ್ಕೆ ನೀರು ಈವರೆಗೂ ತಲುಪಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
     ದಾವಣಗೆರೆ ಮತ್ತು ಮಲೆಬೆನ್ನೂರು ವಿಭಾಗಕ್ಕೆ ಹರಿಸಬೇಕಾದ ಪ್ರಮಾಣದಲ್ಲಿ ಮುಖ್ಯನಾಲೆಯಲ್ಲಿ  11 ಅಡಿ ನೀರು ಬರುವ ಬದಲು ಕೇವಲ 8 ಅಡಿ ನೀರು ಹರಿಯುತ್ತಿದೆ. 12 ದಿನ ನೀರು ಹರಿಸುವ ಐಸಿಸಿಯ ತೀರ್ಮಾನ ಅವೈಜ್ಞಾನಿಕವಾಗಿದ್ದು, ಇಂದಿಗೆೆ ನೀರು ಹರಿಸಿ 12 ದಿನಗಳಾದವು. ಆದ್ದರಿಂದ ನೀರು ಹರಿಸುವುದನ್ನು ನಿಲ್ಲಿಸದೇ 20 ದಿನಗಳವರೆಗೆ ನೀರು ಹರಿಸುವುದನ್ನು ಮುಂದುವರೆಸಬೇಕು ಎಂದು ಒತ್ತಾಯಿಸಿದರು.
     ರೈತರ ಒತ್ತಡಕ್ಕೆ ಮಣಿದು ಪ್ರತಿಭಟನೆ ಸ್ಥಳಕ್ಕೆ ಆಗಮಿಸಿದ ಎಕ್ಸಿಕ್ಯುಟೀವ್ ಇಂಜಿನಿಯರ್ ಆರ್.ಬಿ. ಮಂಜುನಾಥ್ ಮತ್ತು ಸಹಾಯಕ ಇಂಜಿನಿಯರ್ ತಿಪ್ಪೇಸ್ವಾಮಿ ರವರು 2ನೇ ನಾಲಾ ಉಪವಿಭಾಗದ ಕಾಲುವೆಗೆ ಗೇಟು ಎತ್ತಿಸಿ ಹೆಚ್ಚಿನ ನೀರು ಹರಿಯುವಂತೆ ಮಾಡಿದರು.
     ನಂತರ ಮಾತನಾಡಿದ ನೀರಾವರಿ ನಿಗಮದ ದಾವಣಗೆರೆ ವಿಭಾಗದ ಎಕ್ಸಿಕ್ಯುಟೀವ್ ಇಂಜಿನಿಯರ್ ಆರ್.ಬಿ. ಮಂಜುನಾಥ, ಜಲಾಶಯದಲ್ಲಿ ನೀರಿನ ಮಟ್ಟ ಕಡಿಮೆ ಇರುವುದರಿಂದ ರೈತರಿಗೆ ಅನನುಕೂಲ ಆಗುತ್ತಿದೆ. ವೇಳಾಪಟ್ಟಿಯಂತೆ ಕೊನೆ ಭಾಗಕ್ಕೆ ನೀರು ತಲುಪಿಸಲು ಸಾಧ್ಯವಾಗುತ್ತಿಲ್ಲವೆಂದು ಹೇಳಿದರು.
     ಗೋಣಿವಾಡ ಎನ್.ಎಂ. ಮಂಜುನಾಥ, ಎನ್.ಡಿ. ಮುರಿಗೇಶಪ್ಪ, ಪಿ.ಎ. ನಾಗರಾಜಪ್ಪ, ಎಸ್.ಕೆ. ನಾಗರಾಜಪ್ಪ, ಹೂವಿನಮಡು ಶಶಿ ಒಬಳೇಶ್, ರವಿ, ಶಾಗಲೆ ಕ್ಯಾಂಪ್ ಬೋಗೇಶ್ವರರಾವ್, ಸಿ.ಎಚ್. ಸತೀಶ್, ಕೊಳೇನಹಳ್ಳಿ ಶರಣಪ್ಪ, ಸಿದ್ದಪ್ಪ, ಇಂಜಿನಿಯರ್ ತಿಪ್ಪೇಸ್ವಾಮಿ, ಮಧು  ಇತರರು ಇದ್ದರು.
     

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts