More

    ಪರಿಸರ ರಕ್ಷಣೆ ಮೂಲಭೂತ ಕರ್ತವ್ಯವಾಗಲಿ

    ದಾವಣಗೆರೆ : ಸುತ್ತಲಿನ ಪರಿಸರ ಕಾಪಾಡಿಕೊಳ್ಳುವುದು ನಮ್ಮೆಲ್ಲರ ಕರ್ತವ್ಯವಾಗಬೇಕು, ಆಗ ಮಾತ್ರ ಎಲ್ಲರೂ ಆರೋಗ್ಯಕರ ಜೀವನ ನಡೆಸಲು ಸಾಧ್ಯ ಎಂದು ದಾವಣಗೆರೆ ವಿದ್ಯಾನಗರ ಲಯನ್ಸ್ ಕ್ಲಬ್ ಅಧ್ಯಕ್ಷ ಸಿ.ಎಚ್. ದೇವರಾಜ್ ಹೇಳಿದರು.
     ಹೊನ್ನಾಳಿ ತಾಲೂಕಿನ ಯಕ್ಕನಹಳ್ಳಿ ಗ್ರಾಮದಲ್ಲಿ ಸೋಮವಾರ, ದಾವಣಗೆರೆ ವಿದ್ಯಾನಗರ ಲಯನ್ಸ್ ಕ್ಲಬ್ ಹಾಗೂ ಯಕ್ಕನಹಳ್ಳಿಯ ಎಸ್.ಡಿ.ಎಂ.ಸಿ. ವತಿಯಿಂದ ಹಮ್ಮಿಕೊಳ್ಳಲಾಗಿದ್ದ ವನಮಹೋತ್ಸವದಲ್ಲಿ ಮಾತನಾಡಿದರು.
     ಅತಿ ಹೆಚ್ಚು ಅರಣ್ಯ ಪ್ರದೇಶ ಒಳಗೊಂಡ ರಾಷ್ಟ್ರಗಳಲ್ಲಿ ಭಾರತ 10ನೇ ಸ್ಥಾನದಲ್ಲಿದೆ. ದೇಶದಲ್ಲಿರುವ ಅರಣ್ಯ ಪ್ರದೇಶ 8.02 ಲಕ್ಷ ಚದರ ಕಿ.ಮೀ. ಇದು ರಾಷ್ಟ್ರದ ಒಟ್ಟು ಭೂಭಾಗದ ಶೇ. 24 ರಷ್ಟು ಎಂದು ಸರ್ಕಾರದ ಅಂಕಿ ಅಂಶಗಳು ಹೇಳುತ್ತವೆ. ವಾಸ್ತವದಲ್ಲಿ ಇಷ್ಟು ಅರಣ್ಯ ಪ್ರದೇಶವಿಲ್ಲ ಎಂದು ಪರಿಸರ ತಜ್ಞರ ಅಭಿಪ್ರಾಯವಾಗಿದೆ.
     ಭಾರತ ಅಮೆರಿಕಕ್ಕಿಂತ ಮೂರು ಪಟ್ಟು ಸಣ್ಣದಾದರೂ, ಆ ದೇಶಕ್ಕಿಂತ 4 ಪಟ್ಟು ಹೆಚ್ಚು ಜನರಿದ್ದಾರೆ, ಆದರೆ ಅರಣ್ಯ ಪ್ರದೇಶ ಕಡಿಮೆಯಿದೆ. ಅತಿ ಹೆಚ್ಚು ಕಾಡು ಹೊಂದಿರುವ ದೇಶಗಳ ಸಾಲಿನಲ್ಲಿ ರಷ್ಯಾ ಮೊದಲ ಸ್ಥಾನದಲ್ಲಿದೆ ಎಂದರು.
     ಗಿಡಗಳನ್ನು ಬೆಳೆಸುವುದು ಸರ್ಕಾರದ ಕೆಲಸ ಮಾತ್ರವಲ್ಲ, ಸಾರ್ವಜನಿಕರ, ಸಂಘ ಸಂಸ್ಥೆಗಳ ಸಹಭಾಗಿತ್ವವೂ ಪ್ರಮುಖವಾಗಿದೆ. ಗಿಡ ನೆಟ್ಟ ನಂತರ ನಿರ್ವಹಣೆ ಮಾಡುವುದು ಗ್ರಾಮಸ್ಥರ ಜವಾಬ್ದಾರಿಯಾಗಿದೆ. ಇರುವ ಕಾಡನ್ನು ಯಥಾಸ್ಥಿತಿಯಲ್ಲಿ ಉಳಿಸಿಕೊಳ್ಳುವಲ್ಲಿಯೂ ನಾವು ಎಡವುತ್ತಿದ್ದೇವೆ. ಕಾಡನ್ನು ನಾಶ ಮಾಡುತ್ತಿರುವುದರಿಂದ ವನ್ಯ ಮೃಗಗಳು ಹಳ್ಳಿಗಳತ್ತ ನುಗ್ಗುತ್ತಿವೆ. ಇದರ ಬಗ್ಗೆ ಜಾಗೃತಿ ಮೂಡಬೇಕಿದೆ ಎಂದರು.
     ಇದೇ ಸಂದರ್ಭದಲ್ಲಿ ಯಕ್ಕನಹಳ್ಳಿಯ ಗುಡ್ದದ ರಸ್ತೆ ಹಾಗೂ ಹೊಸದಾಗಿ ನಿರ್ಮಾಣಗೊಂಡಿರುವ ಕೆರೆ ಏರಿಯ ಮೇಲೆ 150ಕ್ಕೂ ಹೆಚ್ಚು ಸಸಿಗಳನ್ನು, ಸರ್ಕಾರಿ ಶಾಲಾ ಆವರಣದಲ್ಲಿ ಉತ್ತಮ ತಳಿಯ 50ಕ್ಕೂ ಹೆಚ್ಚು ಹೂವು ಹಾಗೂ ಹಣ್ಣಿನ ಗಿಡಗಳನ್ನು ನೆಡಲಾಯಿತು.
     ಯಕ್ಕನಹಳ್ಳಿಯ ಬಡ ಮಹಿಳೆ ಸುನೀತಾ ಅವರಿಗೆ ಲಯನ್ಸ್ ಕ್ಲಬ್ ವತಿಯಿಂದ ಹೊಲಿಗೆ ಯಂತ್ರವನ್ನು ಸಿ.ಎಚ್. ದೇವರಾಜ್ ಕೊಡುಗೆಯಾಗಿ ನೀಡಿದರು.
     ವನ ಮಹೋತ್ಸವ ಕಾರ್ಯಕ್ರಮದಲ್ಲಿ ಲಯನ್ಸ್ ಪ್ರಾಂತೀಯ ಅಧ್ಯಕ್ಷ ಎಸ್. ಓಂಕಾರಪ್ಪ, ವಲಯ ಅಧ್ಯಕ್ಷ ದಿಳ್ಳೆಪ್ಪ, ಲಯನ್ಸ್ ಮಾಜಿ ಗವರ್ನರ್ ಎಚ್.ಎನ್. ಶಿವಕುಮಾರ್, ಕಾರ್ಯದರ್ಶಿ ಜಿ.ಎನ್.ಎಚ್. ಕುಮಾರ್. ಶೀತಲ್ ಕುಮಾರ್, ಶಿವಶಂಕರ್, ಒ.ಜಿ. ರುದ್ರಗೌಡ್ರು, ಆಸರೆ ಕ್ಲಬ್ ಮೌನೇಶ್, ಸಿರಿಗೆರೆ ಸಿದ್ದಣ್ಣ, ಮಹಾಲಿಂಗಪ್ಪ ಭಾಗವಹಿಸಿದ್ದರು.
     ಗಿರೀಶ್, ಎಸ್.ಡಿ.ಎಂ.ಸಿ. ಅಧ್ಯಕ್ಷ ಎಸ್.ಕೊಟ್ರೇಶ್, ಮುಖಂಡರಾದ ಟಿ.ಎಸ್. ಜಗದೀಶ್, ಸಿ.ವಿ.ವಾಸುದೇವ್, ಸಿ.ಪರಮೇಶ್, ಸಿ.ಬಿ.ನಾಗರಾಜ್, ಶಿವಕುಮಾರಸ್ವಾಮಿ, ಗಡ್ಲವರ ತಿಪ್ಪಣ್ಣ, ಮಹಾದೇವಸ್ವಾಮಿ, ಸಿ.ಎನ್. ಬಸವರಾಜ್, ಸಿ.ಬಿ.ಬಸವರಾಜ್, ಶಾಲಾ ಮಕ್ಕಳು, ಶಿಕ್ಷಕರು, ಗ್ರಾಮಸ್ಥರು ಪಾಲ್ಗೊಂಡಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts