More

    ಶಾಲಾ ಚುನಾವಣೆಯಲ್ಲಿ ತಂತ್ರಜ್ಞಾನ ಬಳಕೆ

    ದಾವಣಗೆರೆ : ಗ್ರಾಮಾಂತರ ಪ್ರದೇಶದ ಶಾಲೆಯೊಂದು ಡಿಜಿಟಲ್ ಇಂಡಿಯಾದ ಡಿಂಡಿಮ ಬಾರಿಸಿದೆ. ಆಧುನಿಕ ತಂತ್ರಜ್ಞಾನ ಬಳಸಿ ಕಾಗದ ರಹಿತವಾಗಿ ಶಾಲಾ ಮಟ್ಟದ ಚುನಾವಣೆ ನಡೆಸಿರುವುದು ಶಾಲೆಯ ವಿಶೇಷ.
     ಬಹುತೇಕ ಶಾಲೆಗಳಲ್ಲೀಗ ಶಾಲೆಯ ಸಂಸತ್ ಚುನಾವಣೆ ನಡೆಯುತ್ತಿವೆ. ತಾಲೂಕಿನ ಮೆಳ್ಳೇಕಟ್ಟೆಯ ಶ್ರೀ ತರಳಬಾಳು ಆಂಗ್ಲ ಮಾಧ್ಯಮ ಶಾಲೆಯು ವಿಧಾನಸಭೆ ಹಾಗೂ ಲೋಕಸಭೆ ಚುನಾವಣೆ ಮಾದರಿಯಲ್ಲಿ ಆಧುನಿಕ ಆಪ್ ಬಳಸಿ, ಮೊಬೈಲ್‌ನ್ನೇ ಮತಪೆಟ್ಟಿಗೆಯನ್ನಾಗಿಸಿ ಚುನಾವಣೆ ನಡೆಸುವ ಮೂಲಕ ಪ್ರಜಾಪ್ರಭುತ್ವದ ಪರಿಕಲ್ಪನೆಯೊಂದಿಗೆ ಮಕ್ಕಳಿಗೆ ತಂತ್ರಜ್ಞಾನದ ಪರಿಚಯ ಮಾಡಿಸಿದೆ.
     ಶಾಲೆಯ 6ರಿಂದ 10ರ ವರೆಗಿನ ಪ್ರತಿ ತರಗತಿಯನ್ನು ಒಂದು ಕ್ಷೇತ್ರವನ್ನಾಗಿ ಪರಿಗಣಿಸಿ ಪ್ರತಿ ತರಗತಿಯಿಂದ ಮೂವರಿಗೆ ಸ್ಪರ್ಧಿಸಲು ಅವಕಾಶ ನೀಡಲಾಗಿತ್ತು. ಹಾಗೆ ಸ್ಪರ್ಧಿಸಿದ ಆಕಾಂಕ್ಷಿ ಮಕ್ಕಳು  ತಾವು ಚುನಾವಣೆಯಲ್ಲಿ ಗೆದ್ದು ಬಂದರೆ ಏನು ಮಾಡುತ್ತೇವೆ ಎಂಬ ಯೋಜನೆ ಹಾಗೂ ಪ್ರಣಾಳಿಕೆ ತಿಳಿಸಲು ಸಹ ಅವಕಾಶ ಕಲ್ಪಿಸಲಾಗಿತ್ತು.
     ಮಕ್ಕಳಿಗೆ ಚುನಾವಣೆಯ ಮಹತ್ವ ಮತ್ತು ವಿಧಾನ ತಿಳಿಸಲು ಶಾಲಾ ಹಂತದ ಚುನಾವಣೆ ವ್ಯವಸ್ಥಿತವಾಗಿ ನಡೆಸಲಾಯಿತು. ಮುಖ್ಯ ಶಿಕ್ಷಕಿ ಬಿ.ಎಂ. ರಶ್ಮಿ ಒಂದು ವಾರದ ಮೊದಲೇ ಚುನಾವಣೆ ಕುರಿತು ಅಧಿಸೂಚನೆ ಹೊರಡಿಸಿದ್ದರು. ಸಹ ಶಿಕ್ಷಕಿ ಡಿ.ಎಂ. ನೇತ್ರಾವತಿ ಚುನಾವಣಾಧಿಕಾರಿಯಾಗಿ ಎಲ್ಲ ಪ್ರಕ್ರಿಯೆಗಳನ್ನು ಸಮರ್ಥವಾಗಿ ನಿರ್ವಹಿಸಿದರು. ಸಹ ಶಿಕ್ಷಕ ಠಾಕ್ರಾ ನಾಯಕ್ ಸಹಕರಿಸಿದರು.
     ಎರಡು ಮೊಬೈಲ್‌ಗಳಲ್ಲಿ ನೂತನ ಆಪ್ ಅಳವಡಿಸಿ ಎರಡು ಮತಗಟ್ಟೆ ನಿರ್ಮಿಸಲಾಸಗಿತ್ತು. 6ರಿಂದ 10ನೇ ತರಗತಿಯ ಎಲ್ಲ ಮಕ್ಕಳು, ತಮ್ಮ ಆಧಾರ್ ಕಾರ್ಡ್‌ಗಳನ್ನು ಮತದಾರರ ಗುರುತಿನ ಚೀಟಿಯನ್ನಾಗಿ ಬಳಸಿದರು. ನಿಯೋಜಿತ ಶಿಕ್ಷಕರು ಪ್ರತಿ ಮಗುವಿನ ಬೆರಳಿಗೆ ಮತದಾನದ ಶಾಯಿ ಹಾಕಿದರಲ್ಲದೆ, ಮಕ್ಕಳು ಶಿಸ್ತು ಮತ್ತು ಉತ್ಸಾಹದಿಂದ ಮತದಾನ ಮಾಡಿದರು. ಶಾಲೆಯ ಸ್ಥಳೀಯ ಸಲಹಾ ಸಮಿತಿಯ ಸದಸ್ಯರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts