More

    ಶ್ರೀ ರಾಘವೇಂದ್ರ ಸಪ್ತಾಹ ಮಹೋತ್ಸವಕ್ಕೆ ಬೆಣ್ಣೆನಗರಿ ಸಜ್ಜು

    ದಾವಣಗೆರೆ : ಗುರು ರಾಯರ ಪಟ್ಟಾಭಿಷೇಕ ಮತ್ತು ವರ್ಧಂತಿಯ ಸಂಸ್ಮರಣೆಗಾಗಿ 31ನೇ ಶ್ರೀ ರಾಘವೇಂದ್ರ ಸಪ್ತಾಹ ಮಹೋತ್ಸವ ಸೋಮವಾರದಿಂದ ಆರಂಭವಾಗಲಿದ್ದು, 7 ದಿನಗಳ ಧಾರ್ಮಿಕ ಹಬ್ಬಕ್ಕೆ ಬೆಣ್ಣೆನಗರಿ ಸಜ್ಜಾಗಿದೆ.
     ಉತ್ಸವ ನಡೆಯಲಿರುವ ನಗರದ ಶಾಮನೂರು ರಸ್ತೆಯ ಬಾಪೂಜಿ ಬ್ಯಾಂಕ್ ಸಮುದಾಯ ಭವನದಲ್ಲಿ ಸಕಲ ಸಿದ್ಧತೆಗಳು ಪೂರ್ಣಗೊಂಡಿವೆ. ಪ್ರವೇಶ ದ್ವಾರದಲ್ಲಿ ಫ್ಲೆಕ್ಸ್‌ಗಳನ್ನು ಹಾಕಲಾಗಿದ್ದು ವೇದಿಕೆಯನ್ನು ಸುಂದರವಾಗಿ ಅಲಂಕರಿಸಲಾಗಿದೆ.
     ಸಮುದಾಯ ಭವನ ಆವರಣದಲ್ಲಿರುವ ಗಣೇಶನ ದೇವಸ್ಥಾನದ ಬಳಿ ಯಜ್ಞಶಾಲೆ ಸಿದ್ಧವಾಗಿದ್ದು ಅಲ್ಲಿ ಹೋಮ, ಹವನಾದಿಗಳು ನಡೆಯಲಿವೆ. ಮಂತ್ರಾಲಯದಿಂದ 50ಕ್ಕೂ ಹೆಚ್ಚು ಜನರ ತಂಡ ಆಗಮಿಸಿದೆ. ಅಡುಗೆ ಸಿಬ್ಬಂದಿ ಪ್ರಸಾದ ತಯಾರಿಯಲ್ಲಿ ತೊಡಗಿದ್ದಾರೆ. ಗುರುಗಳು, ಪಂಡಿತರು ಸೇರಿ ಪರಸ್ಥಳದಿಂದ ಬಂದವರಿಗೆ ವಸತಿಯ ವ್ಯವಸ್ಥೆ ಮಾಡಲಾಗಿದೆ.
     ನೋಂದಣಿ, ಸೇವೆ ಹಾಗೂ ಪ್ರಸಾದದ ಕೌಂಟರ್‌ಗಳನ್ನು ಮಾಡಲಾಗಿದೆ. ಪೂಜಾ ಸಾಮಗ್ರಿ, ತಿನಿಸುಗಳು, ಧಾರ್ಮಿಕ ಪುಸ್ತಕಗಳು, ದೇವತಾ ಚಿತ್ರಗಳು, ಹವನ ಸಾಮಗ್ರಿಗಳ ಮಾರಾಟಕ್ಕಾಗಿ 10 ಮಳಿಗೆಗಳನ್ನು ವ್ಯವಸ್ಥೆಗೊಳಿಸಲಾಗಿದೆ. ಲಕ್ಷ ಪುಷ್ಪಾರ್ಚನೆಗೆ ವಿಶೇಷ ಮಂಟಪ ನಿರ್ಮಿಸಲಾಗಿದೆ.
     ಮಂತ್ರಾಲಯದ ಶ್ರೀ ಗುರುಸಾರ್ವಭೌಮ ದಾಸಸಾಹಿತ್ಯ ಪ್ರಾಜೆಕ್ಟ್‌ನ ನಿರ್ದೇಶಕರಾದ ಕೆ. ಅಪ್ಪಣ್ಣಾಚಾರ್ಯರು, ಮೂಲ ಅರ್ಚಕರಾದ ಪರಿಮಳಾಚಾರ್ ಸೇರಿ ಅನೇಕ ಪಂಡಿತರು ಆಗಮಿಸಿದ್ದಾರೆ.
     …
     
     ಪಲಿಮಾರು ಶ್ರೀಗಳ ಪುರ ಪ್ರವೇಶ
     ಉಡುಪಿ ಪಲಿಮಾರು ಮಠಾಧೀಶರಾದ ಶ್ರೀ ವಿದ್ಯಾಧೀಶತೀರ್ಥ ಶ್ರೀಪಾದಂಗಳವರು, ಕಿರಿಯ ಮಠಾಧೀಶರಾದ ಶ್ರೀ ವಿದ್ಯಾರಾಜೇಶ್ವರ ತೀರ್ಥ ಶ್ರೀಪಾದಂಗಳವರು ಭಾನುವಾರ ಸಂಜೆ ಪುರ ಪ್ರವೇಶ ಮಾಡಿದರು.
     ಬಾಪೂಜಿ ಬ್ಯಾಂಕ್ ಸಮುದಾಯ ಭವನದ ಬಳಿ ಉಭಯ ಸ್ವಾಮೀಜಿಗಳನ್ನು ಶ್ರದ್ಧಾ ಭಕ್ತಿ, ಸಂಭ್ರಮದಿಂದ, ಮಂಗಳ ವಾದ್ಯಗಳು, ಪೂರ್ಣ ಕುಂಭಗಳೊಂದಿಗೆ ಸ್ವಾಗತಿಸಲಾಯಿತು.
     ಮಹೋತ್ಸವ ಸಮಿತಿಯ ಅಧ್ಯಕ್ಷ ಸಂಪನ್ನ ಮುತಾಲಿಕ್, ಕಾರ್ಯದರ್ಶಿ ಕಂಪ್ಲಿ ಗುರುರಾಜಾಚಾರ್, ಸಹ ಕಾರ್ಯದರ್ಶಿ ಸತ್ಯಬೋಧ ಕುಲಕರ್ಣಿ, ಕೋಶಾಧ್ಯಕ್ಷ ಡಾ.ಎಂ.ಸಿ. ಶಶಿಕಾಂತ್, ಡಾ.ಸಿ.ಕೆ. ಆನಂದತೀರ್ಥಾಚಾರ್, ಪಲ್ಲಕ್ಕಿ ವಾಸುದೇವಾಚಾರ್, ಕೆ. ರಘುನಾಥರಾವ್, ನಾಗರಾಜರಾವ್, ವಾಚಸ್ಪತಿ, ಗೀತಾ ಗುರುರಾಜಾಚಾರ್ ಇದ್ದರು.
     …

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts