More

    ಹರಪನಹಳ್ಳಿಯ ಉರಿ ಬಿಸಿಲಲ್ಲಿ ಬಿರುಸಿನ ಪ್ರಚಾರ

    ದಾವಣಗೆರೆ : ಉರಿ ಬಿಸಿಲಿನ ನಡುವೆಯೂ ಹಳ್ಳಿ ಹಳ್ಳಿಯಲ್ಲಿ ರೋಡ್ ಶೋ. ಹೋದ ಕಡೆಗೆಲ್ಲ ಆರತಿ ಬೆಳಗಿ ಆತ್ಮೀಯ ಸ್ವಾಗತ ಕೋರಿದ ಗ್ರಾಮಸ್ಥರು. ಮೆರವಣಿಗೆಯಲ್ಲಿ ಕಾರ್ಯಕರ್ತರು, ಅಭಿಮಾನಿಗಳ ಉತ್ಸಾಹ. ಚುನಾವಣೆಯಲ್ಲಿ ಅಭ್ಯರ್ಥಿಯನ್ನು ಗೆಲ್ಲಿಸುವ ಸಂಕಲ್ಪ.
     ದಾವಣಗೆರೆ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಡಾ. ಪ್ರಭಾ ಮಲ್ಲಿಕಾರ್ಜುನ್ ಹರಪನಹಳ್ಳಿ ವಿಧಾನಸಭಾ ಕ್ಷೇತ್ರದಲ್ಲಿ ಶುಕ್ರವಾರ ನಡೆಸಿದ ಮತಯಾಚನೆ ವೇಳೆ ಕಂಡುಬಂದ ದೃಶ್ಯಗಳಿವು.
     ಕಣ್ತುಂಬ ನಿದ್ದೆಯಾಗದಿದ್ದರೂ ಮೊದಲೇ ನಿಗದಿಯಾದಂತೆ ಪ್ರಭಾ ಮಲ್ಲಿಕಾರ್ಜುನ್, ಬೆಳಗ್ಗೆ ಹರಪನಹಳ್ಳಿ ಕಡೆಗೆ ಹೊರಟು ನಿಂತರು. ಮನೆಗೆ ಆಗಮಿಸಿದ ಅಂಕಲಿ ಮಠದ ಸ್ವಾಮೀಜಿಯ ಆಶೀರ್ವಾದ ಪಡೆದರು. ನಂತರ ನಲ್ಕುಂದ ಇನ್ನಿತರ ಗ್ರಾಮಗಳಿಂದ ಬಂದಿದ್ದ ಜನರು ಹಾಗೂ ವೈದ್ಯಕೀಯ ನೆರವು ಕೇಳಲು ಬಂದವರನ್ನು ಮಾತನಾಡಿಸಿ ಕಾರು ಏರಿದರು.
     ನಿಚ್ಚವ್ವನಹಳ್ಳಿಯಿಂದ ಅವರು ಮತಯಾಚನೆ ಆರಂಭಿಸಿದರು. ಹರಪನಹಳ್ಳಿ ಶಾಸಕಿ ಎಂ.ಪಿ. ಲತಾ ಮತ್ತು ಕಾಂಗ್ರೆಸ್ ಮುಖಂಡ ಕೊಟ್ರೇಶ್ ಸಾಥ್ ನೀಡಿದರು. ಮೂವರೂ ತೆರೆದ ವಾಹನದಲ್ಲಿ ಊರಿನ ಬೀದಿಗಳಲ್ಲಿ ಸಂಚರಿಸಿ ಪ್ರಚಾರ ನಡೆಸಿದರು. ಗ್ರಾಮಸ್ಥರನ್ನು ಉದ್ದೇಶಿಸಿ ಮಾತನಾಡಿದರು.
     ಅಲ್ಲಿಂದ ಅವರು ಬಂದಿದ್ದು ಕಡಬಗೆರೆ ಗ್ರಾಮಕ್ಕೆ. ಅಲ್ಲಿನ ಯುವತಿಯರು, ಮಕ್ಕಳು ಆರತಿ ಬೆಳಗಿ ಸ್ವಾಗತ ಕೋರಿದರು. ಸಾಸ್ವಿಹಳ್ಳಿ ಗ್ರಾಮದ ಆಂಜನೇಯ ದೇವಸ್ಥಾನದ ಬಳಿ ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡಿದರು. ಯಾವ ಕಾರಣಕ್ಕೆ ಜನ ತಮಗೆ ಮತ ಹಾಕಬೇಕು, ಇದುವರೆಗೆ ಅಧಿಕಾರ ನಡೆಸಿದವರ ವೈಫಲ್ಯಗಳನ್ನು ಜನರ ಮುಂದಿಟ್ಟರು.
     ಮಧ್ಯಾಹ್ನ 1.30ಕ್ಕೆ ಮತ್ತಿಹಳ್ಳಿಯಲ್ಲಿ ಭಾಷಣ. ನಂತರ ಗ್ರಾಮದೊಳಗೊಂದು ಸುತ್ತು ಹೋಗಿ ಬಂದರು. ಮನೆ ಬಾಗಿಲಲ್ಲಿ ನಿಂತಿದ್ದ ಮತದಾರರಿಗೆ ವಂದಿಸಿ ಮತಯಾಚನೆ ಮಾಡಿದರು. ಬಳಿಗನೂರು ಗ್ರಾಮದ ಹಿತೈಷಿಯೊಬ್ಬರ ಮನೆಯಲ್ಲಿ ಭೋಜನ ಸವಿದರು.
     ಊಟದ ನಂತರ ಮೈದೂರು ಗ್ರಾಮವನ್ನು ಪ್ರವೇಶಿಸಿದಾಗ ಅವರಿಗೆ ಪುಷ್ಪವೃಷ್ಟಿಯ ಸ್ವಾಗತ ದೊರೆಯಿತು. ಅಭಿಮಾನಿಗಳು ಜೆಸಿಬಿ ಮೇಲೆ ನಿಂತು ಹೂಮಳೆಗರೆದರು. ನಂದಿಬೇವೂರು, ಚಿಗಟೇರಿ, ಬೆಣ್ಣೆಹಳ್ಳಿ ಗ್ರಾಮಗಳ ನಂತರ ಹರಪನಹಳ್ಳಿ ಪಟ್ಟಣಕ್ಕೆ ಬಂದಾಗ ಅಪಾರ ಜನಸ್ತೋಮ ಸೇರಿತ್ತು.
     ಪ್ರತಿಯೊಂದು ಊರಿನಲ್ಲೂ ರೋಡ್ ಶೋ ವೇಳೆ ಜನರಿಗೆ ಕೈಮುಗಿದು ವಂದಿಸಿದರು. ಹಿರಿಯರ ಆಶೀರ್ವಾದ ಬೇಡಿದರು. ಹಳ್ಳಿ ಹಳ್ಳಿಗಳಲ್ಲೂ ಕಾರ್ಯಕರ್ತರಿಗೆ ಊಟದ ವ್ಯವಸ್ಥೆ ಮಾಡಲಾಗಿತ್ತು.
     …

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts