More

    ಪೌಷ್ಟಿಕ ಕೈತೋಟ ನಿರ್ವಹಣೆ ತರಬೇತಿ

    ದಾವಣಗೆರೆ: ಐಸಿಎಆರ್-ತರಳಬಾಳು ಕೃಷಿ ವಿಜ್ಞಾನ ಕೇಂದ್ರದಿಂದ ನ್ಯಾಮತಿ ತಾಲೂಕು ರಾಮೇಶ್ವರ ಗ್ರಾಮದಲ್ಲಿ ಪೌಷ್ಠಿಕ ಕೈತೋಟ ನಿರ್ವಹಣೆ ವಿಷಯದಲ್ಲಿ ತರಬೇತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.

    ಕೇಂದ್ರದ ತೋಟಗಾರಿಕೆ ವಿಜ್ಞಾನಿ ಬಸವನಗೌಡ ಎಂ.ಜಿ ಮಾತನಾಡಿ, ಮನುಷ್ಯನ ಆರೋಗ್ಯದಲ್ಲಿ ಪೋಷಕಾಂಶಗಳ ಸಮತೋಲನ ಅಗತ್ಯವಿದೆ. ಅಸಮರ್ಪಕ ಆಹಾರ ಪದ್ಧತಿಯಿಂದ ರೋಗ ನಿರೋಧಕ ಶಕ್ತಿ ಕಡಿಮೆಯಾಗುತ್ತಿದೆ. ಹಾಗಾಗಿ ರಾಸಾಯನಿಕ ಮುಕ್ತ ಆಹಾರ ಉತ್ಪಾದನೆಗೆ ಮನೆ ಸಮೀಪ ಸಾವಯವ ತರಕಾರಿ ಮತ್ತು ಹಣ್ಣುಗಳನ್ನು ಬೆಳೆಯುವುದೇ ಮಾರ್ಗವೆಂದು ತಿಳಿಸಿದರು.

    ಆಯ್ದ ರೈತ ಮಹಿಳೆಯರಿಗೆ ಸಾವಯವ ಬೇವಿನ ಎಣ್ಣೆ ವಿತರಿಸಲಾಯಿತು. ರೈತರಾದ ರಾಕೇಶ್, ಯಶೋದಮ್ಮ, ಗಾಯತ್ರಮ್ಮ, ಓಂಕಾರಮ್ಮ, ಸಾಕಮ್ಮ ಗೌರಮ್ಮ, ಶಿವಕುಮಾರ್, ಮಲ್ಲಿಕಾರ್ಜುನ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts