More

    ದಾವಣಗೆರೆ ಜಿಲ್ಲೇಲಿ 40 ಕೇಸ್, ವೃದ್ಧ ಸಾವು

    ದಾವಣಗೆರೆ: ಜಿಲ್ಲೆಯಲ್ಲಿ ಗುರುವಾರ ಬರೋಬ್ಬರಿ 40 ಕರೊನಾ ಪ್ರಕರಣಗಳು ಪತ್ತೆಯಾಗಿದ್ದು, 73 ವರ್ಷದ ವೃದ್ಧರೊಬ್ಬರು ಬಲಿಯಾಗಿದ್ದಾರೆ. ಇದರೊಂದಿಗೆ ಕೋವಿಡ್‌ನಿಂದ ಮೃತಪಟ್ಟವರ ಸಂಖ್ಯೆ 14ಕ್ಕೇರಿದೆ.

    ನಗರದ ಎಂಸಿಸಿ ‘ಎ’ ಬ್ಲಾಕ್‌ನ ನಿವಾಸಿಯಾಗಿದ್ದ ವೃದ್ಧ ಸಕ್ಕರೆ ಕಾಯಿಲೆ, ರಕ್ತದೊತ್ತಡ, ಕಿಡ್ನಿ ವೈಫಲ್ಯದಿಂದ ಬಳಲುತ್ತಿದ್ದರು. ಉಸಿರಾಟ ತೊಂದರೆಯಿಂದ ಮಂಗಳವಾರ ಆಸ್ಪತ್ರೆಗೆ ದಾಖಲಾಗಿದ್ದ ಅವರು ಬುಧವಾರ ಮೃತಪಟ್ಟರು.

    ದಾವಣಗೆರೆ ತಾಲೂಕಿನಲ್ಲಿ 23, ಹೊನ್ನಾಳಿಯಲ್ಲಿ 15, ಹರಿಹರ ಮತ್ತು ಚನ್ನಗಿರಿಯಲ್ಲಿ ತಲಾ 1 ಪ್ರಕರಣಗಳು ಕಂಡು ಬಂದಿವೆ. ದಾವಣಗೆರೆಯ ಸರಸ್ವತಿನಗರ, ಮಹಾದೇವಪುರ 6ನೇ ಮೈಲಿಕಲ್ಲು, ಶ್ರೀನಿವಾಸನಗರ, ಬಸಾಪುರ ಬಂಬೂಬಜಾರ್, ಬಾಷಾನಗರ, ಶಿವಕುಮಾರಸ್ವಾಮಿ ಬಡಾವಣೆ, ವಿದ್ಯಾನಗರ, ಕೊಂಡಜ್ಜಿ ರಸ್ತೆ ವೆಂಕಾಬೋವಿ ಕಾಲನಿ, ಅಶೋಕ ನಗರ, ಕೆಬಿ ಬಡಾವಣೆ, ಪಿಜೆ ಬಡಾವಣೆ, ತರಳಬಾಳು ನಗರ, ಗೊಲ್ಲರಹಳ್ಳಿ, ವಿನೋಬನಗರ, ಕೆಟಿಜೆ ನಗರ, ಕೆ.ಆರ್. ರಸ್ತೆ, ಶೇಖರಪ್ಪ ನಗರ, ನರಸರಾಜಪೇಟೆಯಲ್ಲಿ ಕರೊನಾ ಸೋಂಕಿತರು ಪತ್ತೆಯಾಗಿದ್ದಾರೆ.

    ಹೊನ್ನಾಳಿಯ ಕೋಟೆ, ಸಂತೆಮೈದಾನ, ಬಾಲರಾಜ್‌ಘಾಟ್, ಹಳೇಪೇಟೆ, ಟಿ.ಎಂ.ರಸ್ತೆ, ದೊಡ್ಡಗನ್ನರ ಬೀದಿ ಪ್ರದೇಶಗಳಲ್ಲಿ ಕರೊನಾ ಪಾಸಿಟಿವ್ ಪ್ರಕರಣಗಳು ಕಂಡುಬಂದಿವೆ.

    ಹರಿಹರ ತಾಲೂಕು ಎಳೇಹೊಳೆಯಲ್ಲಿ 55 ವರ್ಷದ ವ್ಯಕ್ತಿಗೆ, ಚನ್ನಗಿರಿ ತಾಲೂಕು ದಿಗ್ಗೇನಹಳ್ಳಿಯ 27 ವರ್ಷದ ವ್ಯಕ್ತಿಗೆ ಸೋಂಕು ತಗುಲಿದೆ.

    ಸೋಂಕಿತರಲ್ಲಿ ಕೆಲವರು ಮಹಾರಾಷ್ಟ್ರದಿಂದ ವಾಪಸಾದವರಿದ್ದಾರೆ. ಜ್ವರ, ಕೆಮ್ಮು, ಉಸಿರಾಟದ ತೊಂದರೆಯ ಲಕ್ಷಣ ಹೊಂದಿವರೂ ಇದ್ದಾರೆ. ಮತ್ತೆ ಕೆಲವರಿಗೆ ಸೋಂಕು ಹೇಗೆ ಬಂದಿತು ಎಂದು ಪತ್ತೆಹಚ್ಚಲಾಗುತ್ತಿದೆ.

    ಗುರುವಾರ ಆಸ್ಪತ್ರೆಯಿಂದ 4 ಮಂದಿಯನ್ನು ಬಿಡುಗಡೆ ಮಾಡಲಾಗಿದ್ದು, ಚೇತರಿಸಿಕೊಂಡವರ ಸಂಖ್ಯೆ 328ಕ್ಕೆ ಏರಿಕೆಯಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts