More

    ಅತ್ತೆಯ ಗುಡಿಯ ಕಟ್ಟಿ ಪ್ರತಿದಿನ ಪೂಜೆ ಸಲ್ಲಿಸುವ ಸೊಸೆಯಂದಿರು! ಅತ್ತೆ ಹೆಸರಲ್ಲೇ ಭಜನೆ, ಕೀರ್ತನೆ!

    ಬಿಲಾಸ್ಪುರ್: ಅತ್ತೆ ಸೊಸೆಯಂದಿರ ಜಗಳದ ಬಗ್ಗೆ ಎಷ್ಟು ಸುದ್ದಿಗಳನ್ನು ಕೇಳಿಲ್ಲ. ಅತ್ತೆ ಸೊಸೆ ಎಂದ ಮೇಲೆ ಜಗಳ ಮಾಮೂಲು ಎನ್ನುವುದು ಎಲ್ಲರಿಗೂ ಗೊತ್ತಿರುವ ವಿಚಾರ. ಆದರೆ ಈ ಕುಟುಂಬದಲ್ಲಿ ಹಾಗಿಲ್ಲ. ಇಲ್ಲಿ ಅತ್ತೆಯೇ ದೇವರು. ಅತ್ತೆ ಸತ್ತು 10 ವರ್ಷವಾದರೂ ಈಗಲೂ ಅವರೇ ಸೊಸೆಯಂದಿರ ಪಾಲಿನ ನಿಜ ದೇವತೆ. ಅದಕ್ಕೆಂದೇ ಅತ್ತೆಯ ಗುಡಿಯನ್ನು ಕಟ್ಟಿ ಪ್ರತಿದಿನ ಪೂಜೆಯನ್ನೂ ಮಾಡಲಾಗುತ್ತದೆ. ತಿಂಗಳಿಗೊಮ್ಮೆ ಅತ್ತೆ ಹೆಸರಿನಲ್ಲಿ ಭಜನೆ, ಕೀರ್ತನೆಯೂ ಆಗುತ್ತದೆ.

    ಇದನ್ನೂ ಓದಿ: ರಾಮಮಂದಿರಕ್ಕೆ ದೇಣಿಗೆ ಸಂಗ್ರಹ ವೇಳೆ ಗುಂಪು ಘರ್ಷಣೆ, ಮೂವರಿಗೆ ಗಾಯ; ಒಬ್ಬನ ಸಾವು?

    ಹೌದು! ನಿಜಕ್ಕೂ ಇಂತದ್ದೊಂದು ಕುಟುಂಬ ಇದೆ. ಚತ್ತೀಸಗಢದ ಬಿಲಾಸ್ಪುರದ ಜಿಲ್ಲೆಯ ರತ್ನಾಪುರ ಗ್ರಾಮದ ತಂಬೋಲಿ ಕುಟುಂಬವೇ ಅದಕ್ಕೆ ಸಾಕ್ಷಿ. ಇದು ಕೂಡು ಕುಟುಂಬ. ಕುಟುಂಬದ ಮುಖ್ಯಸ್ಥೆಯಾಗಿದ್ದ ಗೀತಾ ದೇವಿ. ಈ ಕುಟುಂಬದಲ್ಲಿ ಇರುವುದು ಬರೋಬ್ಬರಿ 39 ಜನರು. 11 ಸೊಸೆಯಂದಿರ ಅತ್ತೆ ಗೀತಾ 2010ರಲ್ಲಿಯೇ ಕೊನೆಯುಸಿರೆಳೆದಿದ್ದಾರೆ. ಆದರೆ ಅತ್ತೆ ಕಲಿಸಿಕೊಟ್ಟ ಆದರ್ಶ ಆ ಮನೆಯ ಸೊಸೆಯಂದಿರಿಗೆ ಇಂದಿಗೂ ನಂದಾದೀಪದಂತಿದೆಯಂತೆ.

    ಅತ್ತೆಯ ಗುಡಿಯ ಕಟ್ಟಿ ಪ್ರತಿದಿನ ಪೂಜೆ ಸಲ್ಲಿಸುವ ಸೊಸೆಯಂದಿರು! ಅತ್ತೆ ಹೆಸರಲ್ಲೇ ಭಜನೆ, ಕೀರ್ತನೆ!
    ಗೀತಾ ದೇವಿ

    ಅತ್ತೆ ಬದುಕಿದ್ದಾಗ ಸೊಸೆಯಂದಿರನ್ನು ಸ್ವಂತ ಮಕ್ಕಳಂತೆ ನೋಡಿಕೊಂಡಿದ್ದರಂತೆ. ಅದೇ ಪ್ರೀತಿಯನ್ನು ಅತ್ತೆಯ ಬಗ್ಗೆ ತೋರಿಸುತ್ತಿದ್ದ ಸೊಸೆಯಂದಿರಿಗೆ ಅತ್ತೆ ತೀರಿಕೊಂಡಾಗ ಬಹಳ ದುಃಖವಾಗಿತ್ತಂತೆ. ಅದಕ್ಕೆಂದು ಅವರು ತೀರಿಕೊಂಡ ನಂತರ ಅವರ ಹೆಸರಿನಲ್ಲಿ ಒಂದು ಸಣ್ಣ ಗುಡಿಯನ್ನು ಕಟ್ಟಿದ್ದಾರೆ. ಅತ್ತೆಯ ಮೂರ್ತಿ ಮಾಡಿಸಿ, ಅದಕ್ಕೆ ತಮ್ಮ ಚಿನ್ನಾಭರಣವನ್ನು ಹಾಕಿದ್ದಾರೆ. ಅಂದಿನಿಂದ ಇಂದಿನವರೆಗೆ ಆ ಮೂರ್ತಿಗೆ ಪ್ರತಿದಿನ ಪೂಜೆ ಮಾಡಿಕೊಂಡು ಬಂದಿದ್ದಾರೆ. ಅಷ್ಟೇ ಅಲ್ಲದೆ ತಿಂಗಳಿಗೊಮ್ಮೆ ಅತ್ತೆಯ ಹೆಸರಿನಲ್ಲಿ ಭಜನೆ, ಕೀರ್ತನೆಯನ್ನೂ ಮಾಡುತ್ತಾರಂತೆ.

    ಇದನ್ನೂ ಓದಿ: ದುಬೈನಲ್ಲಿ ಗಂಡನ ಕಾರಿಗೆ ಬಲಿಯಾದ ಭಾರತೀಯ ಮಹಿಳೆ! ಗಾಡಿ ನಿಲ್ಲಿಸಲು​ ಸಹಾಯ ಮಾಡಿದ್ದೇ ತಪ್ಪಾಯಿತು

    ಅತ್ತೆಯ ಗುಡಿಯ ಕಟ್ಟಿ ಪ್ರತಿದಿನ ಪೂಜೆ ಸಲ್ಲಿಸುವ ಸೊಸೆಯಂದಿರು! ಅತ್ತೆ ಹೆಸರಲ್ಲೇ ಭಜನೆ, ಕೀರ್ತನೆ!
    ಅಂದ ಹಾಗೆ ಈ ಕುಟುಂಬದ ವಿಶೇಷತೆ ಇಷ್ಟಕ್ಕೇ ಮುಗಿಯುವುದಿಲ್ಲ. ಕುಟುಂಬದ ಎಲ್ಲ ಹೆಣ್ಣು ಮಕ್ಕಳು ವಿದ್ಯಾವಂತರೇ. ಸ್ನಾತಕೋತ್ತರ ಪದವಿ ಪಡೆದವರೂ ಇದ್ದಾರೆ. ಆದರೆ ಯಾರೊಬ್ಬರೂ ಅಹಂ ತೋರಿಸದೆ ಹೊಂದಾಣಿಕೆಯಿಂದ ಬದುಕುತ್ತಿದ್ದಾರೆ. ಪ್ರತಿದಿನ ಎಲ್ಲರು ಸೇರಿ ಅಡುಗೆ ಮಾಡುತ್ತಾರೆ, ಒಟ್ಟಿಗೆ ಊಟ ಮಾಡುತ್ತಾರೆ. ಈ ಕುಟುಂಬಕ್ಕೆ ಸೇರಿದಂತೆ ಒಂದು ಹೋಟೆಲ್​, ಒಂದು ದಿನಸಿ ಅಂಗಡಿ, ಒಂದು ಪಾನ್​ ಶಾಪ್​ ಮತ್ತೊಂದು ಸೋಪ್​ ಫ್ಯಾಕ್ಟರಿ ಇದೆ. 20 ಎಕರೆ ಜಮೀನು ಸಹ ಇದ್ದು, ಪೂರ್ತಿ ಕುಟುಂಬ ಎಲ್ಲದರಲ್ಲೂ ಒಟ್ಟಾಗಿ ಕೆಲಸ ಮಾಡುತ್ತದೆಯಂತೆ. (ಏಜೆನ್ಸೀಸ್​)

    ಮದ್ವೆಗೆ ಬರ್ದಿದ್ರೂ ಉಡುಗೊರೆ ಹಾಕಿ! ಲಗ್ನಪತ್ರಿಕೆಯಲ್ಲೇ ಗೂಗಲ್​ ಪೇ, ಫೋನ್​ ಪೇ ಕ್ಯೂಆರ್​ ಕೋಡ್​

    ಗರ್ಭಿಣಿಯಾದಾಗ ಎಲ್ಲವೂ ಸರಿಯಾಗುತ್ತದೆ- ಗಾತ್ರದ ಬಗ್ಗೆ ಮುಜುಗರ ಬೇಡ…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts