More

    ‘ಗೃಹಜ್ಯೋತಿ ಯೋಜನೆ’ ಪಡೆಯಲು ನೋಂದಣಿ ದಿನಾಂಕ ಪ್ರಕಟ; ಯಾವಾಗ ಪ್ರಾರಂಭ? ಇಲ್ಲಿದೆ ಮಾಹಿತಿ

    ಬೆಂಗಳೂರು: ಗೃಹ ಜ್ಯೋತಿ ಯೋಜನೆ(GruhaJyothi Scheme) ನೋಂದಣಿ ದಿನಾಂಕವನ್ನು ಇದೀಗ ರಾಜ್ಯ ಸರ್ಕಾರ(State Government) ಪ್ರಕಟಿಸಿದ್ದು, ಯಾವ ದಿನಾಂಕದಿಂದ ಪ್ರಾರಂಭ? ಪ್ರಕ್ರಿಯೆ ಹೇಗೆ? ಎಂಬ ಮಾಹಿತಿಯನ್ನು ಸುತ್ತೋಲೆಯಲ್ಲಿ ತಿಳಿಸಿದೆ. ಮಾಹಿತಿ ಈ ಕೆಳಕಂಡಂತಿದೆ ಅನುಸರಿಸಿ.

    ಇದನ್ನೂ ಓದಿ: ಸ್ಪೇಸ್​ಎಕ್ಸ್ ಇಂಜಿನಿಯರ್​ಗೆ ಲಿಂಕ್ಡ್​​ಇನ್​ನಲ್ಲಿ ‘ಸ್ಪೇಸ್’ ಇಲ್ಲ; 14ರ ಹರೆಯದಲ್ಲೇ ಭಾರಿ ಸಾಧನೆ ಮಾಡಿದಾತನ ಖಾತೆ ಬ್ಲಾಕ್​ ಮಾಡಿದ್ಯಾಕೆ?

    ಕರ್ನಾಟಕ ಸರ್ಕಾರ ಇಂಧನ ಇಲಾಖೆ ಪ್ರಕಟಿಸಿರುವ ಗೃಹ ಜ್ಯೋತಿ ಯೋಜನೆ ನೋಂದಣಿ ದಿನಾಂಕವು ಇದೇ ಜೂನ್ 18 ರಿಂದ ಆರಂಭವಾಗಲಿದೆ. ಫಲಾನುಭವಿಗಳು ಸೇವಾ ಸಿಂಧು ಪೋರ್ಟ್​ನಲ್ಲಿ ನೋಂದಾಯಿಸಿಕೊಳ್ಳಬಹುದು. (https://sevasindhugs.karnataka.gov.in/)
    ಈ ಲಿಂಕ್ ಕ್ಲಿಕ್ ಅನ್ನು ತೆರಯಲು ನಿಮ್ಮ ಬಳಿ ಇರುವ ಸ್ಮಾರ್ಟ್​​ಫೋನ್​, ಕಂಪ್ಯೂಟರ್‌, ಲ್ಯಾಪ್‌ಟಾಪ್‌ಗಳನ್ನು ಉಪಯೋಗಿಸಿಕೊಳ್ಳಬಹುದು.

    ಫಲಾನುಭವಿಗಳು ತಮ್ಮ ನೋಂದಣಿಗಾಗಿ ತಮ್ಮ ಆಧಾರ್ ಕಾರ್ಡ್(Aadhar Card), ಗ್ರಾಹಕರ ಖಾತೆ ಐಡಿ (ವಿದ್ಯುತ್ ಬಿಲ್‌ನಲ್ಲಿ ಉಲ್ಲೇಖಿಸಿದಂತೆ) ಸಿದ್ಧವಾಗಿರಬೇಕಾಗುತ್ತದೆ. ನೋಂದಣಿಯನ್ನು ಬೆಂಗಳೂರು ಒನ್, ಗ್ರಾಮ ಒನ್, ಕರ್ನಾಟಕ ಒನ್ ಕೇಂದ್ರಗಳಲ್ಲಿ ಅಥವಾ ಯಾವುದೇ ವಿದ್ಯುತ್ ಕಚೇರಿಯಲ್ಲಿಯೂ ಮಾಡಬಹುದು. ಹೆಚ್ಚಿನ ಮಾಹಿತಿಗಾಗಿ, ಯಾವುದೇ ವಿದ್ಯುತ್ ಕಚೇರಿಯನ್ನು ಸಂಪರ್ಕಿಸಿ ಅಥವಾ 24×7 ಸಹಾಯವಾಣಿ 1912 ಗೆ ಕರೆ ಮಾಡಿ ಎಂದು ತಿಳಿಸಿದೆ.

    ಇದನ್ನೂ ಓದಿ: ದೊಡ್ಡ ಪ್ರಮಾಣದಲ್ಲಿ ಟೋಲ್ ದರ ಹೆಚ್ಚಿಸಿರುವುದು ‘ಹೆದ್ದಾರಿಯಲ್ಲಿ ಹಗಲು ದರೋಡೆ’ಯಷ್ಟೇ: ಎಚ್​ಡಿಕೆ

    “ಗೃಹ ಜ್ಯೋತಿ ಯೋಜನೆಯು ರಾಜ್ಯ ಸರ್ಕಾರದ ಪ್ರಮುಖ ಕಾರ್ಯಕ್ರಮವಾಗಿದ್ದು, ಮಾಸಿಕ ಬಳಕೆ ಗರಿಷ್ಠ 200 ಯೂನಿಟ್‌ಗಳವರೆಗೆ, ಪ್ರತಿ ಗ್ರಾಹಕ ಕಳೆದ ಹಣಕಾಸು ವರ್ಷದಲ್ಲಿ ಅವರ ಮಾಸಿಕ ಸರಾಸರಿ ಬಳಕೆಯ ಮೇಲೆ ಮತ್ತು ಅವರ ಸರಾಸರಿ ಬಳಕೆಯ ಮೇಲೆ 10% ಉಚಿತ ಅರ್ಹತೆಗೆ ಅರ್ಹರಾಗಿರುತ್ತಾರೆ. ಈ ಉಪಕ್ರಮವು ಎಲ್ಲರನ್ನೂ ಒಳಗೊಳ್ಳುವ ಮತ್ತು ಕಲ್ಯಾಣಕಾರಿಯಾಗಿದ್ದು, ಈ ರೀತಿಯ ಮೊದಲನೆಯದು ಮತ್ತು ಇದು ಕರ್ನಾಟಕ ರಾಜ್ಯದ 2 ಕೋಟಿ ದೇಶೀಯ ಗ್ರಾಹಕರಿಗೆ ಪ್ರಯೋಜನವನ್ನು ನೀಡುತ್ತದೆ. ಯೋಜನೆಯು ಆಗಸ್ಟ್ 1, 2023 ರಿಂದ (ಜುಲೈನಲ್ಲಿ ವಿದ್ಯುತ್ ಬಳಕೆಗಾಗಿ) ಜಾರಿಗೆ ಬರಲಿದೆ. ಫಲಾನುಭವಿಗಳು ತಮ್ಮ ಅರ್ಹತೆಯೊಳಗೆ ಬಳಕೆಯಾಗಿದ್ದರೆ ಆಗಸ್ಟ್ 1 ರಿಂದ ‘ಶೂನ್ಯ ಬಿಲ್’ ಪಡೆಯುತ್ತಾರೆ” ಎಂದು ಸುತ್ತೋಲೆಯಲ್ಲಿ ಪ್ರಕಟಿಸಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts