More

    ಸಲಾರ್ ಆಗಮನಕ್ಕೆ ದಿನಾಂಕ ನಿಗದಿ; 2022ರ ಏ.14ರಂದು ಬಿಡುಗಡೆ

    ಬೆಂಗಳೂರು: ಇಂಡಿಯನ್ ಸಿನಿಮಾ ಎಂದೇ ಘೋಷಿಸಿಕೊಂಡಿರುವ ಪ್ರಶಾಂತ್ ನೀಲ್ ನಿರ್ದೇಶನದ ‘ಸಲಾರ್’ ಸಿನಿಮಾ ಈಗಾಗಲೇ ಒಂದು ಹಂತದ ಶೂಟಿಂಗ್ ಮುಗಿಸಿಕೊಂಡಿದೆ. ಹೀಗಿರುವಾಗಲೇ ಇದೇ ತಂಡ ಭಾನುವಾರ ಅನಿರೀಕ್ಷಿತವಾಗಿ ಸರ್ಪ್ರೖೆಸ್ ಸುದ್ದಿಯೊಂದನ್ನು ಹಂಚಿಕೊಂಡಿದೆ. ಯಾವ ಸುಳಿವೂ ನೀಡದೆ, ಬಿಡುಗಡೆ ದಿನಾಂಕವನ್ನು ಘೋಷಣೆ ಮಾಡಿಕೊಂಡಿದೆ. 2022ರ ಏಪ್ರಿಲ್ 14ರಂದು ‘ಸಲಾರ್’ ಚಿತ್ರ ಏಕಕಾಲದಲ್ಲಿ ವಿಶ್ವದಾದ್ಯಂತ ಬಿಡುಗಡೆ ಆಗಲಿದೆ. ಅಂದಹಾಗೆ, ಟಾಲಿವುಡ್ ನಟ ಪ್ರಭಾಸ್ ನಾಯಕನಾಗಿ ನಟಿಸುತ್ತಿರುವ ‘ಸಲಾರ್’ ಚಿತ್ರವನ್ನು ಹೊಂಬಾಳೆ ಸಂಸ್ಥೆ ನಿರ್ಮಾಣ ಮಾಡುತ್ತಿದೆ. ಇಡೀ ಸಿನಿಮಾದ ಶೂಟಿಂಗ್ ಹೈದರಾಬಾದ್​ನ ಸೆಟ್​ನಲ್ಲಿಯೇ ನಡೆಯುತ್ತಿದ್ದು, ಒಂದಷ್ಟು ಭಾಗದ ಚಿತ್ರೀಕರಣ ಈಗಾಗಲೇ ಮುಕ್ತಾಯವಾಗಿದೆ. ಇತ್ತೀಚೆಗಷ್ಟೇ ಇದೇ ತಂಡಕ್ಕೆ ನಾಯಕಿಯಾಗಿ ಶ್ರುತಿ ಹಾಸನ್ ಸಹ ಎಂಟ್ರಿಕೊಟ್ಟಿದ್ದರು. ಅವರೂ ಸಹ ಚಿತ್ರೀಕರಣದಲ್ಲಿ ಪಾಲ್ಗೊಂಡಿದ್ದು, ಚಿತ್ರದ ಬಗ್ಗೆ ಎಗ್ಸೈಟ್​ ಆಗಿದ್ದಾರೆ.

    ಇತ್ತ ಪ್ರಭಾಸ್ ಸದ್ಯ ನಾಲ್ಕು ಸಿನಿಮಾಗಳಲ್ಲಿ ತೊಡಗಿಸಿ ಕೊಂಡಿದ್ದಾರೆ. ಆ ಪೈಕಿ ಜು.30ಕ್ಕೆ ‘ರಾಧೆ ಶ್ಯಾಮ್ ಚಿತ್ರ ಬಿಡುಗಡೆ ಆಗುವುದು ಅಧಿಕೃತವಾಗಿದೆ. ಈ ನಡುವೆ ಬಾಲಿವುಡ್​ನಲ್ಲಿ ತಯಾರಾಗುತ್ತಿರುವ ‘ಆದಿಪುರುಷ್’ ಚಿತ್ರದ ಶೂಟಿಂಗ್​ನಲ್ಲಿಯೂ ಪ್ರಭಾಸ್ ಭಾಗವಹಿಸಿ ದ್ದಾರೆ. ಇನ್ನೇನು ಕೆಲ ದಿನಗಳಲ್ಲಿ ನಾಗ್ ಅಶ್ವಿನ್ ನಿರ್ದೇಶನದ ಚಿತ್ರವೂ ಸೆಟ್ಟೇರಲಿದೆ. ಈ ಎಲ್ಲ ಸಿನಿಮಾಗಳ ಪೈಕಿ ಇದೇ ವರ್ಷ ಪ್ರಭಾಸ್ ಅಭಿನಯದ 3 ಸಿನಿಮಾ ರಿಲೀಸ್ ಫಿಕ್ಸ್ ಎಂದೇ ಹೇಳಲಾಗಿತ್ತು. ಆ ಪೈಕಿ ‘ರಾಧೆ ಶ್ಯಾಮ್ ಒಂದೇ ಈ ವರ್ಷ ತೆರೆಗೆ ಬರಲಿದೆ. ‘ಸಲಾರ್’ 2022 ಏ.14ಕ್ಕೆ ರಿಲೀಸ್ ದಿನವನ್ನು ನಿಗದಿ ಮಾಡಿಕೊಂಡಿದೆ.

    ನೀವೂ ಬಿಗ್​ಬಾಸ್​ ಮನೆಯೊಳಗೆ ಹೋಗಬಹುದು! ಇಲ್ಲಿದೆ ನೋಡಿ ಅವಕಾಶ

    ಬಿಗ್​ಬಾಸ್​ ಮನೆಯಲ್ಲಿ ಚಾಮಯ್ಯ ಮೇಷ್ಟ್ರ ಮಗ ಪಾಠ ಮಾಡ್ತಾರಾ? ಆಟ ಆಡ್ತಾರಾ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts