More

    ಸಿಡಿ ಲೇಡಿ ಕೋರ್ಟ್​ಗೆ ಬರಲು ದಿನಾಂಕ ಮತ್ತು ಸಮಯ ಫಿಕ್ಸ್!

    ಬೆಂಗಳೂರು: ಭಾರಿ ಕುತೂಹಲ ಮೂಡಿಸಿದ್ದ ರಮೇಶ್​ ಜಾರಕಿಹೊಳಿ ಸಿಡಿ ಕೇಸ್​ನ ಯುವತಿ ಕೋರ್ಟ್​ಗೆ ಹಾಜರಾಗಲು ಅಧಿಕೃತ ಸಮಯ ಮತ್ತು ದಿನಾಂಕ ನಿಗದಿ ಆಗಿದೆ ಎಂದು ತಿಳಿದು ಬಂದಿದೆ.

    ನ್ಯಾಯಾಧೀಶರ ಮುಂದೆ ಸಿಡಿ ಕೇಸ್​ನ ಸಂತ್ರಸ್ತ ಯುವತಿ ಹಾಜರಾಗಲು ಇಂದು ನೃಪತುಂಗ ರಸ್ತೆಯಲ್ಲಿರುವ 24ನೇ ಎಸಿಎಂಎಂ ಕೋರ್ಟ್ ಅನುಮತಿ ಕೊಟ್ಟಿದೆ. ಕೋರ್ಟ್​ಗೆ ಯುವತಿ ಬಂದ ಬಳಿಕ ತನಿಖಾಧಿಕಾರಿಯೂ ಆಕೆಯ ಹೇಳಿಕೆ ದಾಖಲಿಸಬಹುದು ಎಂದು ಕೋರ್ಟ್ ಹೇಳಿದೆ.

    ಸದ್ಯ ಎಸ್​ಐಟಿ ವಿಚಾರಣೆಯಲ್ಲಿ ರಮೇಶ್​ ಜಾರಕಿಹೊಳಿ, ನನಗೆ ಸಿಡಿ ಲೇಡಿ ಯಾರೆಂದು ಗೊತ್ತೇ ಇಲ್ಲ ಎಂದಿದ್ದಾರೆ ಎಂದು ಮೂಲಗಳು ತಿಳಿಸಿವೆ. ಆದರೆ, ಯುವತಿ ಮಾತ್ರ ಆ ವಿಡಿಯೋದಲ್ಲಿ ಇರುವುದೆಲ್ಲ ಸತ್ಯ, ಉದ್ಯೋಗದ ಆಮಿಷವೊಡ್ಡಿ ನನ್ನನ್ನ ಲೈಂಗಿಕವಾಗಿ ಬಳಸಿಕೊಂಡು ಬಳಿಕ ಅನ್ಯಾಯ ಮಾಡಿದರು. ನ್ಯಾಯ ಕೇಳಿದ್ದಕ್ಕೆ ಅವಾಚ್ಯವಾಗಿ ನಿಂದಿಸಿದ್ದರು. ಈಗ ವಿಡಿಯೋ ಬಹಿರಂಗ ಮಾಡಿ ಮರ್ಯಾದೆ ತೆಗೆದಿದ್ದಾರೆ. ನನಗೆ ಜೀವ ಬೆದರಿಕೆ ಇದೆ ಎಂದು ಯುವತಿ ವಿಡಿಯೋ ಮೂಲಕ ಮಾತ್ರವಲ್ಲ, ಪೊಲೀಸ್​ ಕಮಿಷನರ್​ಗೆ ಬರೆದ ಪತ್ರ ಹಾಗೂ ನ್ಯಾಯಾಧೀಶರಿಗೆ ಬರೆದಿದ್ದ ಪತ್ರದಲ್ಲೂ ವಿವರಿಸಿದ್ದಳು.

    ಇದಗ ನ್ಯಾಯಾಲಯದಲ್ಲಿ ಸಿಡಿ ಲೇಡಿ ಕೊಡುವ ಹೇಳಿಕೆ ಮೇಲೆ ಈ ಕೇಸ್​ ನಿಲ್ಲಲಿದೆ. ಇಂದು(ಮಂಗಳವಾರ) ಮಧ್ಯಾಹ್ನ 3 ಗಂಟೆಗೆ ಯುವತಿ ಕೋರ್ಟ್​ಗೆ ಹಾಜರಾಗಲಿದ್ದು, ಯುವತಿ ಇರೋ ಜಾಗದಲ್ಲಿ ವಿಐಪಿ ಭದ್ರತೆ ನೀಡಲಾಗಿದೆ ಎಂದು ಮೂಲಗಳು ತಿಳಿಸಿವೆ.

    ಇದೇ ವೇಳೆ ಮಾತನಾಡಿದ ಯುವತಿ ಪರ ವಕೀಲ ಜಗದೀಶ್, ಎಲ್ಲರ ಸಹಕಾರದಿಂದ ಅಪ್ಲಿಕೇಷನ್ ಸಬಿಟ್ ಮಾಡಿದ್ವಿ. ಸಮಯವನ್ನು ನ್ಯಾಯಾಲಯ ನಿಗದಿ ಮಾಡಿಲ್ಲ. ರೆಕಾರ್ಡಿಂಗ್‌ಗೆ ನ್ಯಾಯಾಲಯ ಒಪ್ಪಿಗೆ ಕೊಟ್ಟಿದೆ. ಅಪ್ಲಿಕೇಷನ್ ಅಲೌ ಆಗಿದೆ. ಹೇಳಿಕೆಯನ್ನು ರೆಕಾರ್ಡ್ ಮಾಡ್ತಿವಿ ಅಂದಿದ್ದಾರೆ. ಈ ಪ್ರಕರಣದ ತನಿಖಾಧಿಕಾರಿಗಳನ್ನು ಚೇಂಜ್ ಮಾಡಿದೆ. ಅಲಿಗೇಷನ್‌ನಲ್ಲಿ ಸತ್ಯ ಇದೆ. ಹೀಗಾಗಿ ಸರ್ಕಾರ ಸ್ವತಃ ತನಿಖಾಧಿಕಾರಿಯನ್ನು ನಿಗದಿ ಮಾಡಿದೆ ಎಂದರು.

    ಯುವತಿ ಈಗಾಗಲೇ ಬೆಂಗಳೂರಿನಲ್ಲಿದ್ದಾರೆ. ಬಾ ಎಂದ ತಕ್ಷಣ ನಾವು ಕರೆದುಕೊಂಡು ಬರ್ತೀವಿ. ಈಗಾಗಲೇ ಯುವತಿ ಸೆಕ್ಯುರಿಟಿ ಜತೆಯಲ್ಲಿದ್ದಾರೆ. 28 ದಿನಗಳಿಂದ ಆಕೆ ಸ್ಟ್ರೆಸ್‌ನಲ್ಲಿದ್ದಾರೆ. ಮಹಜರು, ಮೆಡಿಕಲ್ ಚೆಕಪ್ ಎಲ್ಲವನ್ನೂ ಮಾಡಿಸುತ್ತೇವೆ. ಯಾವುದೇ ಕಾರಣಕ್ಕೂ ಪೊಲೀಸರು ಒತ್ತಾಯ ಮಾಡಿ ಹೇಳಿಕೆ ಪಡೆಯುವಂತಿಲ್ಲ. ನಿನ್ನೆ ಎಸ್​ಐಟಿ ವಿಚಾರಣೆ ವೇಳೆ ಅನೇಕ ಪ್ರಶ್ನೆಗಳಿಗೆ 4 ದಿನದಲ್ಲಿ ಉತ್ತರ ಕೊಡುತ್ತೇವೆ ಎಂದು ಆರೋಪಿ ಹೇಳಿದ್ದಾರೆ. ಅವರಿಗೆ ವಿಐಪಿ P ಟ್ರೀಟ್‌ ಮಾಡಿದ್ದಾರೆ. ನಮಗೇಕೆ ನೀಡೋದಿಲ್ಲ? ಎಂದು ವಕೀಲ ಜಗದೀಶ್​ ಹೇಳಿದರು.

    ನಗ್ನವಾಗಿ ನೋಡಿದ್ರು, ಲೈಂಗಿಕವಾಗಿ ಬಳಸಿಕೊಂಡ್ರು.. ಎಲ್ಲ ಮುಗಿದ ಮೇಲೆ ಮಾಡಬಾರದ್ದನ್ನ ಮಾಡಿದ್ರು… ಎಳೆಎಳೆಯಾಗಿ ಬಿಚ್ಚಿಟ್ಟ ಯುವತಿ

    ಅಕ್ಕಿ ಪಡೆಯಲು ಬಾಗಿಲು ತೆಗೆದ ಯುವತಿಯನ್ನ ಬೆತ್ತಲೆ ಮಾಡಿ ಚಿತ್ರೀಕರಿಸಿದ! ಮುಂದೆ ಆಗಿದ್ದೆಲ್ಲವೂ ಅವಾಂತರ

    ಸಿಡಿ ಕೇಸ್​ಗೆ ಸ್ಫೋಟಕ ತಿರುವು: ಸತ್ಯ ಒಪ್ಪಿಕೊಂಡ ಡಿಕೆಶಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts