ಬಾಕ್ಸ್​ ಆಫೀಸ್​ ಸುಲ್ತಾನನೆಂಬುದು ಮತ್ತೆ ಸಾಬೀತು: ಮೊದಲ ದಿನವೇ ಸ್ಯಾಂಡಲ್​ವುಡ್​ ದಾಖಲೆ ಮುರಿದ ಡಿ ಬಾಸ್!​

ಬೆಂಗಳೂರು: ಮಹಾಶಿವರಾತ್ರಿಯ ವಿಶೇಷ ದಿನದಂದು ದೇಶಾದ್ಯಂತ ತೆರೆಗೆ ಅಪ್ಪಳಿಸಿರುವ ಚಾಲೆಂಜಿಂಗ್​ ಸ್ಟಾರ್​ ದರ್ಶನ್​ ಅಭಿನಯದ ಬಹುನಿರೀಕ್ಷಿತ ರಾಬರ್ಟ್​ ಸಿನಿಮಾ ಮೊದಲ ದಿನವೇ ಅಬ್ಬರಿಸಿ ಬೊಬ್ಬಿರಿದಿದ್ದು, ಬಾಕ್ಸ್​ ಆಫೀಸ್​ನಲ್ಲಿ ಧೂಳೆಬ್ಬಿಸಿದೆ.

ಕನ್ನಡ ಚಿತ್ರರಂಗದ ಇತಿಹಾಸದಲ್ಲೇ ಬಿಡುಗಡೆಯಾದ ಮೊದಲ ದಿನ ಅತಿ ಹೆಚ್ಚು ಕಲೆಕ್ಷನ್ ಪಡೆದ ಚಿತ್ರ ಎಂಬ ಖ್ಯಾತಿಗೆ ರಾಬರ್ಟ್ ಚಿತ್ರ ಭಾಜನವಾಗಿದ್ದು, ಮೊದಲ ದಿನವೇ 17.24 ಕೋಟಿ ರೂಪಾಯಿ ಗಳಿಸುವ ಮೂಲಕ ಹೊಸ ದಾಖಲೆಯನ್ನು ನಿರ್ಮಿಸಿದೆ.

ಇದನ್ನೂ ಓದಿರಿ: ನಿಶ್ಚಿತಾರ್ಥದ ಬೆನ್ನಲ್ಲೇ ಕೈಕೊಟ್ಟ ವರ: ಮದ್ವೆ ಮುನ್ನ ಗೋವಾ ಭೇಟಿಯ ಕರಾಳತೆ ಬಿಚ್ಚಿಟ್ಟ ವಧು!

ಆಂಧ್ರ ಮತ್ತು ತೆಲಂಗಾಣದಲ್ಲಿ ಮೊದಲ ದಿನ 3.12 ಕೋಟಿ ರೂ. ಗಳಿಕೆ ಮಾಡಿದ್ದು, ಮೂರು ರಾಜ್ಯಗಳ ಒಟ್ಟು ಗಳಿಕೆ 20 ಕೋಟಿಗೂ ಅಧಿಕ ಎಂದು ಹೇಳಲಾಗುತ್ತದೆ. ಎರಡನೇ ದಿನವೂ ತನ್ನ ವಿಜಯಯಾತ್ರೆಯನ್ನು ಅದ್ಧೂರಿಯಾಗಿ ಮುಂದುವರಿಸಿರುವ ರಾಬರ್ಟ್​ ಇಂದು ಬಾಕ್ಸ್​ ಆಫೀಸ್​ನಲ್ಲಿ ಕಮಾಲ್​ ಮಾಡುವ ಲಕ್ಷಣಗಳು ಕಾಣುತ್ತಿವೆ.

ಒಟ್ಟು ಒಂದೂವರೆ ಸಾವಿರಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿರುವ ರಾಬರ್ಟ್​ ಚಿತ್ರ ನಿನ್ನೆ ಭರ್ಜರಿ ಓಪನಿಂಗ್​ ಪಡೆದುಕೊಂಡಿದ್ದು, ದರ್ಶನ್ ಕರಿಯರ್​ನಲ್ಲೇ ಅತಿದೊಡ್ಡ ಓಪನಿಂಗ್ ಎನಿಸಿಕೊಂಡಿದೆ.

ಚಿತ್ರ ನೋಡಿದ ಅನೇಕ ಪ್ರೇಕ್ಷಕರು ಮತ್ತು ಅಭಿಮಾನಿಗಳು ರಾಬರ್ಟ್​ ಸಿನಿಮಾ ಪಕ್ಕಾ ಪೈಸಾ ವಸೂಲ್​ ಚಿತ್ರವೆಂದು ಗುಣಗಾನ ಮಾಡಿದ್ದಾರೆ. ದರ್ಶನ್​ ನಟನೆ, ಹಾಡುಗಳು, ಡೈಲಾಗ್​, ಕಾಮಿಡಿ, ಆ್ಯಕ್ಸನ್​ ಮತ್ತು ಚಿತ್ರಕತೆಯನ್ನು ಕೊಂಡಾಡಿದ್ದಾರೆ.

ಇದನ್ನೂ ಓದಿರಿ: ಪ್ರ್ಯಾಂಕ್​ ಹೆಸರಲ್ಲಿ ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ: ಭಾರತದ ಯೂಟ್ಯೂಬರ್​ಗಳಿಗೆ ಕಾದಿದೆ ಸಂಕಷ್ಟ!

ಒಟ್ಟಾರೆ ಚಿತ್ರದ ಬಗ್ಗೆ ಒಳ್ಳೆಯ ಅಭಿಪ್ರಾಯ ವ್ಯಕ್ತವಾಗಿದೆ. ಅದರ ಫಲಿತಾಂಶ ಮೊದಲ ದಿನದ ಗಳಿಕೆಯಲ್ಲೂ ಪ್ರತಿಬಿಂಬಿಸುತ್ತಿದೆ. ಹೀಗಾಗಿ ರಾಬರ್ಟ್​ ಚಿತ್ರ ದರ್ಶನ್​ ಕೆರಿಯರ್​ನಲ್ಲೇ ಹೊಸ ಮೈಲಿಗಲ್ಲಾಗಾಲಿದೆ ಎಂದು ಹೇಳಲಾಗುತ್ತಿದೆ.

ವಿಜಯವಾಣಿ ಸಿನಿಮಾ ವಿಮರ್ಶೆ: ರಾಬರ್ಟ್, ಸಂತನೊಳಗಿನ ಸೇಡಿನ ಕಥೆ!

ಪೈರಸಿ ಹಾವಳಿ: ಮೊದಲು ನಾವು ಬದಲಾಗಬೇಕು ಎನ್ನುತ್ತಾರೆ ಪುನೀತ್ ರಾಜ್​ಕುಮಾರ್

ಮತ್ತೆ ಒಂದಾದ ಹರ್ಷ-ಶಿವರಾಜ್ ಕುಮಾರ್: ವೇದನಾದ ಶಿವಣ್ಣ

Share This Article

Skin care: ಕಣ್ಣುಗಳ ಕೆಳಗಿರುವ ಚರ್ಮ ಸುಕ್ಕುಗಟ್ಟಿದೆಯೇ? ಹೀಗೆ ಮಾಡಿ..

ಕಣ್ಣುಗಳು(Skin care) ಸೂಕ್ಷ್ಮ ಅಂಗಗಳಾಗಿದ್ದು, ಅವುಗಳ ಕೆಳಗಿರುವ ಚರ್ಮವು ಸಹ ಸೂಕ್ಷ್ಮವಾಗಿರುತ್ತದೆ. ಬಿಸಿಲು, ಪೌಷ್ಠಿಕ ಆಹಾರದ…

Health Tips : ಮೆಟ್ಟಿಲು ಹತ್ತುವಾಗ ಸುಸ್ತಾಗುತ್ತದಾ..! ಈ ಸಲಹೆಗಳನ್ನು ಅನುಸರಿಸಿ

ಬೆಂಗಳೂರು: ಮೆಟ್ಟಿಲು ಹತ್ತುವಾಗ ಉಸಿರಾಟದ ತೊಂದರೆ ಸಾಮಾನ್ಯ. ಈ ಸಮಸ್ಯೆಯು ವಯಸ್ಸಾದಂತೆ ಹೆಚ್ಚಾಗುತ್ತಿದೆ, ಆದರೆ ಇತ್ತೀಚಿನ…