More

    ಕಣಕಣದಲ್ಲೂ ದೇಶಭಕ್ತಿ ಜಾಗೃತವಾಗಿರಬೇಕು ಅಂತಾರೆ ದರ್ಶನ್​

    ಇಂದು ಸ್ವಾತಂತ್ರ್ಯ ದಿನಾಚರಣೆ. 74ನೇ ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ಶುಭ ಕೋರಿ ಹಲವು ಚಿತ್ರತಂಡಗಳು ಇಂದು ಸೋಷಿಯಲ್​ ಮೀಡಿಯಾ ಮೂಲಕ ಜನತೆಗೆ ಶುಭಕೋರಿವೆ.

    ಇದನ್ನೂ ಓದಿ: ‘ರಾಕಿಂಗ್​ಸ್ಟಾರ್​’ ಯಶ್​ ಕಡೆಯಿಂದ ಮತ್ತೊಂದು ಹೊಸ ಸುದ್ದಿ…

    ಬರೀ ಚಿತ್ರತಂಡಗಳಷ್ಟೇ ಅಲ್ಲ, ಹಲವು ನಟ-ನಟಿಯರು ಸಹ ಇಂದು ಶುಭ ಕೋರುವುದರ ಜತೆಗೆ, ಸ್ವಾತಂತ್ರ್ಯ ದಿನದ ಮಹತ್ವವನ್ನು ತಿಳಿಸಿದ್ದಾರೆ. ದರ್ಶನ್​ ಸಹ ಈ ಕುರಿತು ಟ್ವೀಟ್​ ಮಾಡಿದ್ದು, ಜತೆಗೆ ‘ರಾಬರ್ಟ್​’ ಚಿತ್ರದ ಶುಭಾಶಯದ ಪೋಸ್ಟರ್​ ಹಂಚಿಕೊಂಡಿರುವುದು ವಿಶೇಷ.

    ಈ ಕುರಿತು ಟ್ವೀಟ್​ ಮಾಡಿರುವ ಅವರು, ‘ಆಗಸ್ಟ್‌ 15 ಭಾರತೀಯರ ಪಾಲಿನ ಸುದಿನ. ಈ ಶುಭ ದಿನವನ್ನು ನಾವು ಹೆಮ್ಮೆಯಿಂದ ಆಚರಿಸಬೇಕು. ನಮ್ಮ ಜೀವನದ ಕಣಕಣದಲ್ಲೂ ದೇಶಭಕ್ತಿ ಜಾಗೃತವಾಗಿರಬೇಕು. ಸರ್ವರಿಗೂ 74ನೇ ಸ್ವಾತಂತ್ರ್ಯ ದಿನಾಚರಣೆಯ ಶುಭಾಶಯಗಳು’ ಎಂದು ಹೇಳಿದ್ದಾರೆ.

    ಅಂದಹಾಗೆ, ‘ರಾಬರ್ಟ್​’ ಚಿತ್ರದ ಕೆಲಸಗಳು ಮುಗಿದಿದ್ದು, ಚಿತ್ರ ಬಿಡುಗಡೆಗೆ ಕಾದಿದೆ. ಎಲ್ಲಾ ಅಂದುಕೊಂಡಂತೆ ಆಗಿದ್ದರೆ, ಇಷ್ಟರಲ್ಲಿ ಚಿತ್ರ ಬಿಡುಗಡೆಯಾಗಿ ನಾಲ್ಕು ತಿಂಗಳುಗಳಾಗಬೇಕಿತ್ತು. ಆದರೆ, ಕರೊನಾ ಮತ್ತು ಲಾಕ್​ಡೌನ್​ನಿಂದ ಚಿತ್ರದ ಬಿಡುಗಡೆ ಅನಿರ್ಧಿಷ್ಟಾವಧಿ ಮುಂದಕ್ಕೆ ಹೋಗಿದೆ.

    ಇದನ್ನೂ ಓದಿ: ಡಾಲಿ ಚಿತ್ರಕ್ಕೆ ಹೆಡ್​ ಬುಷ್​ ಶೀರ್ಷಿಕೆ; ಎಂ.ಪಿ. ಜಯರಾಜ್​ ಪಾತ್ರದಲ್ಲಿ ಧನಂಜಯ್​

    ಈ ಮಧ್ಯೆ, ಚಿತ್ರತಂಡದವರು ಹಬ್ಬ ಮತ್ತು ವಿಶೇಷ ದಿನಗಳಲ್ಲಿ ಚಿತ್ರದ ಹಲವು ಪೋಸ್ಟರ್​ಗಳನ್ನು ಬಿಡುಗಡೆ ಮಾಡುತ್ತಲೇ ಬಂದಿದ್ದು, ಈಗ ಸ್ವಾತಂತ್ರ್ಯ ದಿನಾಚರಣೆಯ ಶುಭ ಕೋರಿ ಹೊಸ ಪೋಸ್ಟರ್​ವೊಂದನ್ನು ಇದೀಗ ಬಿಡುಗಡೆ ಮಾಡಿದೆ.

    PHOTOS: ತಾರೆಯರ ಕಲರ್​ಫುಲ್​ ಸ್ವಾತಂತ್ರ್ಯೋತ್ಸವ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts