More

    ದುಬೈನಲ್ಲಿ ದರ್ಶನ್; ಹಲವು ದಾಖಲೆಗಳ ಸರದಾರ ಕನ್ನಡದ ‘ಕಾಟೇರ’

    ಬೆಂಗಳೂರು: ದರ್ಶನ್ ಅಭಿನಯದ, ತರುಣ್ ಕಿಶೋರ್ ಸುಧೀರ್ ನಿರ್ದೇಶನದ, ರಾಕ್‌ಲೈನ್ ವೆಂಕಟೇಶ್ ನಿರ್ಮಾಣದ ‘ಕಾಟೇರ’ ಚಿತ್ರ ಬಾಕ್ಸಾಫೀಸಿನಲ್ಲಿ ಭರ್ಜರಿ ಕಲೆಕ್ಷನ್ ಮಾಡಿಕೊಂಡು ಯಶಸ್ಸಿನ ಆಗಸದಲ್ಲಿ ಹಾರಾಡುತ್ತಿದೆ. ಡಿ. 29ಕ್ಕೆ ಸಿನಿಮಾ ತೆರೆಕಂಡಿದ್ದು ಮೊದಲ ವಾರದಲ್ಲಿ 104.58 ಕೋಟಿ ರೂ. ಗಳಿಕೆ ಮಾಡಿಕೊಂಡು ದಾಖಲೆ ಬರೆದಿದೆ. ಮೊದಲ ವಾರದಿಂದ ಎರಡನೇ ವಾರಕ್ಕೆ ಥಿಯೇಟರ್‌ಗಳ ಸಂಖ್ಯೆಯನ್ನೂ ಏರಿಸಲಾಗಿದೆ. ಮೊದಲ ವಾರ 72 ಮಲ್ಟಿಪ್ಲೆಕ್ಸ್, 406 ಸಿಂಗಲ್ ಸ್ಕ್ರೀನ್ ಥಿಯೇಟರ್ ಸೇರಿ ಒಟ್ಟು 478 ಸ್ಕ್ರೀನ್‌ಗಳಲ್ಲಿ ಸಿನಿಮಾ ಪ್ರದರ್ಶನ ಕಂಡಿತ್ತು. ಮೂಲಗಳ ಪ್ರಕಾರ ಸದ್ಯ ಒಂದೇ ವಾರದಲ್ಲಿ ಸುಮಾರು 10,961 ಪ್ರದರ್ಶನಗಳು ಕಂಡಿದ್ದು, 6,117 ಪ್ರದರ್ಶನಗಳು ಹೌಸ್‌ುಲ್ ಆಗಿವೆಯಂತೆ. 52.77 ಲಕ್ಷಕ್ಕೂ ಅಧಿಕ ಟಿಕೆಟ್‌ಗಳು ಮಾರಾಟವಾಗಿದ್ದವು. ಇದೀಗ ಎರಡನೇ ವಾರಕ್ಕೆ ಹೆಚ್ಚುವರಿ 56 ಥಿಯೇಟರ್‌ಗಳಲ್ಲಿ ಸಿನಿಮಾ ಅಬ್ಬರಿಸಲು ಸಜ್ಜಾಗಿದ್ದು, ಒಟ್ಟು 462 ಸಿಂಗಲ್ ಸ್ಕ್ರೀನ್ ಚಿತ್ರಮಂದಿರಗಳಲ್ಲಿ ಪ್ರದರ್ಶನವಿರಲಿದೆ. ಈ ಮಧ್ಯೆ ಪರಭಾಷೆಗಳಲ್ಲೂ ಚಿತ್ರಕ್ಕೆ ಡಿಮ್ಯಾಂಡ್ ಹೆಚ್ಚಾಗಿದ್ದು, ಬೇರೆ ಭಾಷೆಗಳಲ್ಲೂ ಸಿನಿಮಾ ರಿಲೀಸ್ ಆಗುವ ಸಾಧ್ಯತೆಯಿದೆ. ಅದರ ಬೆನ್ನಲ್ಲೇ ಅಮೆರಿಕಾ, ಬ್ರಿಟನ್, ಕೆನಡಾ, ಯೂರೋಪ್ ಸೇರಿ ಹಲವೆಡೆಗಳಲ್ಲಿ ಸಿನಿಮಾ ರಿಲೀಸ್ ಆಗಿದೆ. ದುಬೈನಲ್ಲಿ ಇಂದು ವಿಶೇಷ ಪ್ರದರ್ಶನ ಆಯೋಜಿಸಲಾಗಿದ್ದು, ನಟ ದರ್ಶನ್ ಕೂಡ ಭಾಗವಹಿಸಲಿದ್ದಾರೆ.

    ಪ್ರಚಾರದ ನಡುವೆ ಹೊಸಬರಿಗೂ ಸಾಥ್:
    ‘ಕಾಟೇರ’ ಯಶಸ್ಸು, ಪ್ರಚಾರಗಳ ನಡುವೆ ಬಿಜಿಯಿರುವ ದರ್ಶನ್ ಈ ಮಧ್ಯೆ ಹೊಸಬರ ತಂಡಕ್ಕೂ ಸಾಥ್ ನೀಡುತ್ತಿದ್ದಾರೆ. ಕೆ.ಎಮ್. ರಘು ಆೃಕ್ಷನ್-ಕಟ್ ಹೇಳಿರುವ ಚಿತ್ರ ‘ಜಸ್ಟ್ ಪಾಸ್’. ರಂಗಾಯಣ ರಘು ಮುಖ್ಯ ಭೂಮಿಕೆಯಲ್ಲಿ ನಟಿಸುತ್ತಿದ್ದು, ಈಗಾಗಲೇ ಚಿತ್ರದ ಟೀಸರ್ ಬಿಡುಗಡೆ ಮಾಡಲಾಗಿತ್ತು. ಇದೀಗ ಚಿತ್ರದ ಮೊದಲ ಹಾಡನ್ನು ಇದೇ 12ಕ್ಕೆ ದರ್ಶನ್ ರಿಲೀಸ್ ಮಾಡಲಿದ್ದಾರೆ. ಪ್ರಮೋದ್ ಮರವಂತೆ ಸಾಹಿತ್ಯ ಬರೆದಿದ್ದು, ಹರ್ಷವರ್ಧನ್ ರಾಜ್ ಸಂಗೀತವಿರುವ ಗೀತೆಯಿದು.

    ದುಬೈನಲ್ಲಿ ದರ್ಶನ್; ಹಲವು ದಾಖಲೆಗಳ ಸರದಾರ ಕನ್ನಡದ ‘ಕಾಟೇರ’

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts