More

    ದರ್ಶನ್ ನೋಡಿ ಸುಮ್ನೆ ಹೆಂಗಿರ್ಲಿ!; ಜವಾರಿ ಹಾಡಿಗೆ ಆಶಾ ಭಟ್ ಕುಣಿತ

    ಬೆಂಗಳೂರು: ‘ಚಾಲೆಂಜಿಂಗ್ ಸ್ಟಾರ್’ ದರ್ಶನ್ ಅಭಿನಯದ ‘ರಾಬರ್ಟ್’ ಸಿನಿಮಾ ಮಾರ್ಚ್ 11ಕ್ಕೆ ಬಿಡುಗಡೆಯಾಗಲಿದೆ. ಹಾಗಾಗಿ ಪ್ರಚಾರ ಕಣಕ್ಕಿಳಿದಿರುವ ಚಿತ್ರತಂಡ, ಒಂದಾದ ಮೇಲೊಂದು ವಿಶೇಷತೆಗಳನ್ನು ಹೊರಹಾಕುತ್ತಲೇ ಇದೆ. ದರ್ಶನ್ ಹುಟ್ಟುಹಬ್ಬದ ವಿಶೇಷತೆಯಾಗಿ ‘ರಾಬರ್ಟ್’ ಚಿತ್ರದ ಟ್ರೇಲರ್ ಬಿಡುಗಡೆಯಾಗಿತ್ತು. ಇದೀಗ ಉತ್ತರ ಕರ್ನಾಟಕ ಶೈಲಿಯ ಹಾಡೊಂದನ್ನು ಬಿಡುಗಡೆ ಮಾಡಿದೆ.

    ‘ಕಣ್ಣು ಹೊಡಿಯಾಕ ಮೊನ್ನೆ ಕಲತೇನಿ … ನಿನ್ನ ನೋಡಿ ಸುಮನೆಂಗಿರ್ಲಿ…’ ಅನ್ನೋ ಹಾಡು ಶನಿವಾರ ಆನಂದ್ ಆಡಿಯೋದಲ್ಲಿ ಬಿಡುಗಡೆ ಆಗಿದೆ. ಪಕ್ಕಾ ಟಪ್ಪಾಂಗುಚ್ಚಿ ಶೈಲಿಯಲ್ಲಿರುವ ಯೋಗರಾಜ್ ಭಟ್ ಸಾಹಿತ್ಯ ಇರುವ ಈ ಹಾಡು, ಸಂಪೂರ್ಣ ಉತ್ತರ ಕರ್ನಾಟಕ ಶೈಲಿಯ ಜವಾರಿ ಭಾಷೆಯಲ್ಲಿದೆ. ಅರ್ಜುನ್ ಜನ್ಯ ಮತ್ತು ಯೋಗರಾಜ್ ಭಟ್ ಕಾಂಬಿನೇಷನ್​ನಲ್ಲಿ ಈಗಾಗಲೇ ಸಾಕಷ್ಟು ಹಾಡುಗಳು ಹೊರಬಂದಿದ್ದು, ಇದೀಗ ‘ಕಣ್ಣು ಹೊಡೆಯಾಕ …’ ಹಾಡು ಸೇರ್ಪಡೆಯಾಗಿದೆ. ಶ್ರೇಯಾ ಘೋಷಾಲ್ ಕಂಠಸಿರಿಯಲ್ಲಿ ಈ ಹಾಡು ಮೂಡಿಬಂದಿದೆ.

    ಗುಜರಾತ್​ನ ರಣ್ ಆಫ್ ಕಛ್​ನಲ್ಲಿ ಈ ಹಾಡಿನ ಶೂಟಿಂಗ್ ಮಾಡಲಾಗಿದೆ. ಸುಧಾಕರ್ ರಾಜ್ ಛಾಯಾಗ್ರಹಣ ಮಾಡಿದ್ದು, ತರುಣ್ ಕಿಶೋರ್ ಸುಧೀರ್ ನಿರ್ದೇಶನ ಮಾಡಿದ್ದಾರೆ. ಉಮಾಪತಿ ಶ್ರೀನಿವಾಸ್ ಗೌಡ ಬಂಡವಾಳ ಹೂಡಿದ್ದಾರೆ. ಚಿತ್ರವು ಮಾರ್ಚ್ 11ರಂದು ಕನ್ನಡ ಮತ್ತು ತೆಲುಗಿನಲ್ಲಿ ಏಕಕಾಲಕ್ಕೆ ಬಿಡುಗಡೆಯಾಗುತ್ತಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts