More

    ಕರೊನಾ ಜತೆ ಹೋರಾಡಿದೆವು, ಒಟ್ಟಿಗೆ ಜಯಿಸಿದೆವು!; ನಿಟ್ಟುಸಿರು ಬಿಟ್ಟ ಕೃಷ್ಣ- ಮಿಲನಾ…

    ಬೆಂಗಳೂರು: ಏಪ್ರಿಲ್ 14ರಂದು ಡಾರ್ಲಿಂಗ್ ಕೃಷ್ಣ ಮತ್ತು ನಟಿ ಮಿಲನಾ ನಾಗರಾಜ್ ‘ಇಬ್ಬರಿಗೂ ಕೋವಿಡ್ ಸೋಂಕು ತಗುಲಿದೆ’ ಎಂದು ಹೇಳಿಕೊಂಡು, ನಮ್ಮ ಸಂಪರ್ಕಕ್ಕೆ ಬಂದ ಎಲ್ಲರೂ ಕೋವಿಡ್ ಪರೀಕ್ಷೆ ಮಾಡಿಸಿಕೊಳ್ಳಿ ಎಂದು ಮನವಿ ಮಾಡಿದ್ದರು. ಇದೀಗ ಇದೇ ಜೋಡಿಯ ಕೋವಿಡ್ ವರದಿ ನೆಗೆಟಿವ್ ಬಂದಿದೆ.

    ಇದನ್ನೂ ಓದಿ: ಸಾರ್… ಒಳಗೆ ಹೋದವ್ರು ಶವವಾಗಿ ಬರ್ತಿದ್ದಾರೆ… ಚಿಕಿತ್ಸೆ ಏನ್‌ ಕೊಡ್ತಾರೋ ಗೊತ್ತಿಲ್ಲ- ರೋಗಿಗಳ ಸ್ಥಿತಿ ಹೇಳೋರೂ ಇಲ್ಲ

    ಈ ವಿಚಾರವನ್ನು ಇದೀಗ ಸೋಷಿಯಲ್ ಮೀಡಿಯಾ ಮೂಲಕ ಬಹಿರಂಗಪಡಿಸಿರುವ ಜೋಡಿ, ‘ಇಬ್ಬರೂ ಕರೊನಾ ಜತೆಗೆ ಹೋರಾಡಿದೆವು. ಇದೀಗ ಇಬ್ಬರೂ ಅದರಿಂದ ಜಯಶಾಲಿಗಳಾಗಿ ಹೊರಬಂದಿದ್ದೇವೆ. ಕೋವಿಡ್ ವರದಿ ನೆಗೆಟಿವ್ ಬಂದಿದೆ. ಹರಸಿ ಹಾರೈಸಿದ ಎಲ್ಲರಿಗೂ ಧನ್ಯವಾದಗಳು’ ಎಂದು ಸಂದೇಶ ರವಾನಿಸಿದೆ.

    ಕರೊನಾ ಜತೆ ಹೋರಾಡಿದೆವು, ಒಟ್ಟಿಗೆ ಜಯಿಸಿದೆವು!; ನಿಟ್ಟುಸಿರು ಬಿಟ್ಟ ಕೃಷ್ಣ- ಮಿಲನಾ...

    https://www.instagram.com/p/COKREfUHPSK/?utm_source=ig_web_copy_link

    ಎರಡು ವಾರಗಳ ಹಿಂದೆ ಪಾಸಿಟಿವ್ ಬಂದ ತಕ್ಷಣ ಈ ಜೋಡಿ ಮನೆಯಲ್ಲಿಯೇ ಪ್ರತ್ಯೇಕವಾಗಿ ಕ್ವಾರಂಟೈನ್​ನಲ್ಲಿದ್ದರು. ಮಿಲನಾ ಅವರ ಸಹೋದರ ವೃತ್ತಿಯಲ್ಲಿ ವೈದ್ಯರು ಆಗಿರುವ ಮಹಾಂತ್ ಅವರಿಂದ ಸಲಹೆ ಪಡೆದುಕೊಂಡಿದ್ದರು. ಇದೀಗ ಕರೊನಾವನ್ನು ಗೆದ್ದು ಬಂದಿದ್ದಾರೆ. ಎಲ್ಲರೂ ಮನೆಯಲ್ಲಿಯೇ ಇರಿ, ಸಾಮಾಜಿಕ ಅಂತರವನ್ನು ಕಾಪಾಡಿಕೊಳ್ಳಿ ಎಂದು ಮನವಿ ಮಾಡಿದ್ದಾರೆ.

    ಇದನ್ನೂ ಓದಿ: ಮಾಲಾಶ್ರೀ ಪತಿ, ನಿರ್ಮಾಪಕ ರಾಮು ಮೃತಪಟ್ಟದ್ದು ಕರೊನಾದಿಂದಲ್ಲ! ಸಾವಿಗೆ ಬೇರೆ ಕಾರಣ ಇದೆ

     

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts