More

    ಲಿಂಗದಹಳ್ಳಿ ರಸ್ತೆಯ ಹೈಮಾಸ್ಟ್ ದೀಪದ ಸುತ್ತ ಕತ್ತಲು!

    ಬೀರೂರು: ಬೀರೂರಿನ ಲಿಂಗದಹಳ್ಳಿ ರಸ್ತೆಯಲ್ಲಿ ಅಳವಡಿಸಿರುವ ಹೈಮಾಸ್ಟ್ ದೀಪ ಹಾಳಾಗಿ ಎರಡು ತಿಂಗಳಾದರೂ ದುರಸ್ತಿ ಮಾಡಿಲ್ಲ. ಇದರಿಂದ ಆ ರಸ್ತೆಯಲ್ಲಿ ಸಂಚರಿಸುವ ಜನರಿಗೆ ತೊಂದರೆಯಾಗಿದೆ.

    ಪಟ್ಟಣದ ಮುಖ್ಯ ಮಾರ್ಗ ಲಿಂಗದಹಳ್ಳಿ ರಸ್ತೆಯಲ್ಲಿ ಅಳವಡಿಸಿರುವ ಹೈಮಾಸ್ಟ್ ದೀಪ ವರ್ಷದಲ್ಲಿ ಎರಡು ಅಥವಾ ಮೂರು ತಿಂಗಳು ಮಾತ್ರ ಸುಸ್ಥಿತಿಯಲ್ಲಿರುತ್ತದೆ. ಬಲ್ಬ್‌ಗಳು, ವೈರಿಂಗ್, ಗ್ರೌಂಡಿಂಗ್, ಸ್ವಿಚ್‌ಗಳ ಸಮಸ್ಯೆ ಹೀಗೆ ಒಂದಲ್ಲ ಒಂದು ಕಾರಣಕ್ಕೆ ಕೆಟ್ಟುಹೋಗಿರುತ್ತದೆ.
    ಬೀದಿ ದೀಪಗಳ ನಿರ್ವಹಣೆಯನ್ನು ಪುರಸಭೆ ಗುತ್ತಿಗೆ ನೀಡಿದೆ. ಗುತ್ತಿಗೆದಾರರ ನಿರ್ಲಕ್ಷೃದಿಂದ ಜನರು ಕತ್ತಲಲ್ಲೇ ಓಡಾಡುವಂತಾಗಿದೆ. ಇದಕ್ಕೆ ಭಗೀರಥ ವೃತ್ತ ಎಂದು ನಾಮಕರಣ ಮಾಡಲಾಗಿದ್ದು, ಇಲ್ಲಿ ಖಾಸಗಿ ಬಸ್ ನಿಲ್ದಾಣವೂ ಇದೆ. ಅಲ್ಲಿಯೇ ಎರಡು ಮದ್ಯದ ಅಂಗಡಿಗಳಿವೆ. ಮಹಿಳೆಯರು, ಮಕ್ಕಳಿಗೆ ಓಡಾಡಲು ಕಿರಿಕಿರಿಯಾಗುತ್ತಿದೆ.
    ಈ ರಸ್ತೆ ಬೀರೂರಿನಿಂದ ಕಲ್ಲತ್ತಿಗಿರಿ, ಕೆಮ್ಮಣ್ಣುಗುಂಡಿ, ದತ್ತಪೀಠ ಸೇರಿ ಚಿಕ್ಕಮಗಳೂರಿಗೆ ಸಂಪರ್ಕ ಕಲ್ಪಿಸುತ್ತದೆ. ಬಹಳಷ್ಟು ಪ್ರವಾಸಿಗರು ಈ ರಸ್ತೆಯಿಂದಲೇ ಹಾದುಹೋಗಬೇಕು. ಮುಖ್ಯವಾಗಿ ಪ್ರೇಕ್ಷಣೀಯ ಸ್ಥಳಗಳಿಗೆ ತಲುಪಬೇಕಾದ ರಸ್ತೆಯನ್ನು ಅಚ್ಚುಕಟ್ಟಾಗಿ ಉತ್ತಮ ಬೆಳಕಿನಿಂದ ನಿರ್ವಹಣೆ ಮಾಡಬೇಕಾದುದು ಸ್ಥಳೀಯ ಆಡಳಿತದ ಕರ್ತವ್ಯ. ಆದರೆ ಗುತ್ತಿಗೆ ನೀಡಿದ ಪುರಸಭೆ ಬೀದಿ ದೀಪಗಳು ವ್ಯವಸ್ಥಿತವಾಗಿ ಇವೆಯೋ, ಇಲ್ಲವೋ ಎಂಬ ಬಗ್ಗೆ ಗಮನಹರಿಸುತ್ತಿಲ್ಲ. ಈ ಮಾರ್ಗವಾಗಿಯೇ ಸಂಚರಿಸುವ ಜನಪ್ರತಿನಿಧಿಗಳೂ ಗಮನಹರಿಸದಿರುವುದು ಅವ್ಯವಸ್ಥೆಗೆ ಹಿಡಿದ ಕೈಗನ್ನಡಿ.
    ಬೀದಿದೀಪಗಳ ನಿರ್ವಹಣೆಯಲ್ಲಿ ಗುಣಮಟ್ಟದ ಸಾಮಗ್ರಿ ಬಳಸಿದರೆ ಬಾಳಿಕೆ ಬರುತ್ತವೆ. ಮೂಲಸೌಲಭ್ಯ ಒದಗಿಸುವಲ್ಲಿ ಸಂಬಂಧಿಸಿದ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಸೂಕ್ತ ಕ್ರಮ ಕೈಗೊಳ್ಳಬೇಕು ಎಂಬುದು ಸಾರ್ವಜನಿಕರ ಒತ್ತಾಯ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts