More

    ಧನ್ವಂತರಿ: ಸನ್ನಡತೆಯ ನವರತ್ನಗಳು

    ಧನ್ವಂತರಿ: ಸನ್ನಡತೆಯ ನವರತ್ನಗಳುಮಾನವನಿಗೆ ಯಾವ ಸಂದರ್ಭಗಳಲ್ಲಿ ಹೇಗಿರಬೇಕು ಎಂಬುದು ಅರ್ಥವಾದರೆ ಬದುಕು ಸುಂದರವಾಗಲು, ನೆಮ್ಮದಿ ನೆಲೆಯೂರಲು ಸುಲಭ ಸಾಧ್ಯವಾಗುತ್ತದೆ. ಆಯುರ್ವೆದವು ಸದ್​ವೃತ್ತದ ವಿವರಣೆಯ ಮೂಲಕ ಇದನ್ನೂ ಜನರಿಗೆ ಅರುಹಿದ್ದೂ ಜೀವನವು ಸುಗಮವಾಗಲು ರಹದಾರಿಯಾಗಿದೆ. ಕೋಪಗೊಂಡವರ ಬಳಿ ವಿನಯದಿಂದ ಇರಬೇಕು. ಅದುವೇ ಬುದ್ಧಿವಂತಿಕೆ. ಅದು ತಪ್ಪಿರಲಿ, ಸರಿಯಿರಲಿ, ಆ ಕ್ಷಣದಲ್ಲಿ ಅದುವೇ ಪ್ರಶಸ್ತ ನಡವಳಿಕೆ. ಎಂದೂ ತಾಳ್ಮೆ ಕಳೆದುಕೊಳ್ಳಬಾರದು. ಸಹನೆಯೆಂಬುದು ಯಶಸ್ಸಿನ ಹಿಂದಿರುವ ಮಹತ್ವಪೂರ್ಣ ಗುಣ. ಅತಿಯಾದ ಭಯರಹಿತ ನಡೆಯೂ ಸಮಂಜಸವಲ್ಲ. ಭಯವೇ ಇಲ್ಲವೆಂದಾದರೆ ಸರಿದಾರಿ ತಪ್ಪಲು ಬೇರೇನು ಬೇಕು? ಕಾಲಕ್ಕೆ ಅನುಗುಣವಾಗಿ ಮಾಡಬೇಕಾದ ಕರ್ಮಗಳಲ್ಲಿ ಕೆಲಸಗಳ್ಳತನ ಇರಕೂಡದು. ಅತಿಯಾಗಿ ಕಾಲಹರಣ ಮಾಡುವುದೂ ಸಲ್ಲದು. ಸರ್ಕಾರಿ ಕೆಲಸಗಳ ಅನುಭವವಿರುವವರಿಗೆ ಇದರ ಬಗ್ಗೆ ವಿವರಣೆಯೇ ಬೇಡ! ಪರೀಕ್ಷಿಸಿ ನೋಡದೆ ಕ್ರಮಕ್ಕೆ ಮುಂದಾಗಬಾರದು. ಕಣ್ಣಾರೆ ಕಂಡರೂ ಪರಾಂಬರಿಸಿ ನೋಡೆಂದು ಹಿರಿಯರು ಹೇಳಿದ್ದು ಇದಕ್ಕಾಗಿಯೇ. ತನ್ನ ದೇಹದ ಸ್ವಭಾವ, ಪ್ರಕೃತಿ ಹೇಗೆಂಬುದನ್ನು ನೆನಪಿನಲ್ಲಿಟ್ಟುಕೊಂಡೇ ಕಾರ್ಯ ನಿರ್ವಹಿಸಬೇಕು. ಇಲ್ಲವಾದಲ್ಲಿ ಉತ್ಸಾಹದಲ್ಲಿ ಆರಂಭಿಸಿದ ಕೆಲಸ ಮಧ್ಯದಲ್ಲೇ ನಿಲ್ಲಬಹುದು. ತಾನು ಮಾಡಿದ ಕೆಲಸವೆಂದು ಗರ್ವಪಡುವುದೂ ಉಚಿತವಲ್ಲ. ಶೌರ್ಯ ಕಳೆದುಕೊಳ್ಳಬಾರದು, ತನಗಾದ ಅಪಮಾನವನ್ನು ಸ್ಮರಿಸಬಾರದು.

    ಇದನ್ನೂ ಓದಿ 4 ಸಾವಿರ ತಬ್ಲಿಘಿಗಳ ಬಿಡುಗಡೆಗೆ ದೆಹಲಿ ಸರ್ಕಾರದ ಆದೇಶ

    ಆರೋಗ್ಯ ಎಂಬುದು ಉಪೇಕ್ಷೆಯಿಂದ ಸಿಗುವಂಥದ್ದಲ್ಲ. ಅಪೇಕ್ಷೆಯಿಂದಲೂ ದೊರಕುವುದಲ್ಲ. ಸ್ವಾಸ್ಥ್ಯ ನಮ್ಮದಾಗಬೇಕಾದರೆ ಪ್ರತಿಯೊಂದು ನಡೆ ನುಡಿಯೂ ಘನತೆಯಿಂದಿರಬೇಕು. ಬಹುಅಂತಸ್ತಿನ ಭವ್ಯ ಕಟ್ಟಡದ ಕೆಳಗಿರುವ, ಕಣ್ಣಿಗೆ ಕಾಣದ ಅಡಿಪಾಯದಂತೆ ಸುಭದ್ರವಾಗಿರಬೇಕು. ಬ್ರಹ್ಮಚರ್ಯ, ಜ್ಞಾನ, ದಾನ, ಮೈತ್ರಿ, ಕಾರುಣ್ಯ, ಹರ್ಷ, ಅಪೇಕ್ಷೆ, ಮನಃಶಾಂತಿಗಳೆಂಬ ಎಂಟು ವಿಷಯಗಳ ಬಗ್ಗೆ ಸದಾ ನಿಗಾ ಇರಲಿ ಎಂದಿರುವುದೂ ಆಲಿಸಿ ಪಾಲಿಸಬೇಕಾದ ವಿಚಾರಗಳು. ಇವುಗಳಿಗೂ ಆರೋಗ್ಯಕ್ಕೂ ನೇರ ಸಂಬಂಧವಿದೆ! ಒಬ್ಬೊಬ್ಬರಲ್ಲಿ ಒಂದೊಂದು ಬಗೆಯಾಗಿ ಒಂದೇ ವಿಷಯವನ್ನು ಹೇಳಿಕೊಂಡು ಊರು ಸುತ್ತಿದರೆ ಅವೆಲ್ಲವನ್ನೂ ನೆನಪಿನಲ್ಲಿ ಇಟ್ಟುಕೊಳ್ಳುವುದು ಎಷ್ಟೊಂದು ಕಠಿಣ. ಇದರಿಂದಾಗುವ ಮಾನಸಿಕ ಒತ್ತಡವೊಂದೇ ಆರೋಗ್ಯ ಕೆಡಿಸಲು ಸಾಕು. ಇದೊಂದು ಉದಾಹರಣೆಯಷ್ಟೆ.

    ಧನ ಸಂಪಾದನೆಯ ಗುರಿಯುಳ್ಳ ಜನರು ಅತೀವ ಕಾಳಜಿ ವಹಿಸಿ ಸಂಗ್ರಹಿಸುವ ಸುವಸ್ತುಗಳಿಗೆ ರತ್ನ ಎಂದು ಪ್ರಾಜ್ಞರು ಹೇಳುತ್ತಾರೆ ಎಂಬುದಾಗಿ ಭಾವಪ್ರಕಾಶ ಗ್ರಂಥದಲ್ಲಿದೆ. ಮುತ್ತು, ಮಾಣಿಕ್ಯ, ವೈಡೂರ್ಯ, ಗೋಮೇಧಕ, ವಜ್ರ, ಹವಳ, ಪುಷ್ಯರಾಗ, ಪಚ್ಚೆಹರಳು ಹಾಗೂ ಇಂದ್ರನೀಲಗಳು ನವರತ್ನಗಳು ಎಂದು ಬಿರುದಾಂಕಿತವಾಗಿದೆ. ಹಾಗೆಯೇ ಮಹಾಪದ್ಮ, ಪದ್ಮ, ಶಂಖ, ಮಕರ, ಕಚ್ಛಪ, ಮುಕುಂದ, ಕುಂದ, ನೀಲ ಹಾಗೂ ಖರ್ವಗಳು ಕುಬೇರನ ನವನಿಧಿಗಳು. ಚಿನ್ನ, ವಜ್ರ, ನೀಲ, ಪದ್ಮರಾಗ ಹಾಗೂ ಮುತ್ತುಗಳಿಗೆ ಪಂಚರತ್ನವೆಂಬ ಪಟ್ಟವನ್ನೂ ಮಹರ್ಷಿಗಳು ನೀಡಿದ್ದಾರೆ. ಆಚಾರ್ಯ ಚಾಣಕ್ಯನ ಮಾತೂ ಅತುಲ್ಯವಾಗಿದೆ. ದಾನ, ಧರ್ಮ, ವಿದ್ಯೆ, ಸೌಂದರ್ಯ, ಶೀಲ, ಕುಲಗೌರವ, ಸುಖ, ಆಯುಷ್ಯ ಮತ್ತು ಯಶಸ್ಸುಗಳೆಂಬ ನವರತ್ನಗಳನ್ನು ಪ್ರಯತ್ನಪೂರ್ವಕವಾಗಿ ಕಾಪಾಡುವುದು ಪ್ರತಿಯೊಬ್ಬರ ಆದ್ಯ ಕರ್ತವ್ಯ. ಏಕೆಂದರೆ ಇವು ಸನ್ನಡತೆಯ ಜೀವನಕ್ಕಾಗಿರುವ ಒಂಬತ್ತು ಅಮೂಲ್ಯ ರತ್ನಗಳು!

    ಇದನ್ನೂ ಓದಿ ರಾಜ್ಯ ಸರ್ಕಾರದ ಕಾರ್ಯಕ್ಕೆ ಡಾ. ಪ್ರಭಾಕರ ಕೋರೆ ಮೆಚ್ಚುಗೆ: ಕೆಎಲ್‌ಇಯಿಂದ 2 ಕೋಟಿ ರೂ. ದೇಣಿಗೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts