More

    4 ಸಾವಿರ ತಬ್ಲಿಘಿಗಳ ಬಿಡುಗಡೆಗೆ ದೆಹಲಿ ಸರ್ಕಾರದ ಆದೇಶ

    ನವದೆಹಲಿ: ಇಲ್ಲಿನ ವಿವಿಧ ಆರೋಗ್ಯ ಕೇಂದ್ರಗಳಲ್ಲಿ ಕರೊನಾ ಕ್ವಾರಂಟೈನ್ ಅವಧಿ ಪೂರ್ಣಗೊಳಿಸಿದ ತಬ್ಲಿ ಜಮಾತ್‌ನ ಸುಮಾರು 4 ಸಾವಿರ ಸದಸ್ಯರ ಬಿಡುಗಡೆಗೆ ದೆಹಲಿ ಸರ್ಕಾರ ಬುಧವಾರ ಆದೇಶ ಹೊರಡಿಸಿದೆ.

    ಈ ಎಲ್ಲರೂ ದೇಶದ ನಾನಾ ರಾಜ್ಯಗಳಿಗೆ ಸೇರಿದವರಾಗಿದ್ದು, ಅವರನ್ನು ಅವರವರ ಸ್ಥಳಗಳಿಗೆ ಕಳಿಸಲು ಸಾರಿಗೆಯ ವ್ಯವಸ್ಥೆ ಮಾಡುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ದೆಹಲಿ ಸರ್ಕಾರ ಸೂಚಿಸಿದೆ. ಈ 4 ಸಾವಿರ ಜನರ ಪೈಕಿ 900 ಜನರು ದೆಹಲಿಯವರೇ ಆಗಿದ್ದಾರೆ. ಬಹುತೇಕ ಜನರು ತೆಲಂಗಾಣ ಮತ್ತು ತಮಿಳುನಾಡಿನವರಾಗಿದ್ದಾರೆ.

    ಇದರಲ್ಲಿಯೇ ಕೆಲವರನ್ನು ಪೊಲೀಸ್ ವಿಚಾರಣೆಗೆ ಒಳಪಡಿಸುವ ಅವಶ್ಯಕತೆ ಇದ್ದು, ಅವರನ್ನು ಮಾತ್ರ ಕಸ್ಟಡಿಯಲ್ಲಿ ಉಳಿಸಿಕೊಳ್ಳುವಂತೆ ದೆಹಲಿಯ ಗೃಹ ಸಚಿವ ಸತ್ಯೇಂದರ್ ಜೈನ್ ಆದೇಶಿಸಿದ್ದಾರೆ.

    ಇದನ್ನೂ ಓದಿ ಕರೊನಾದಿಂದಾಗಿ ಶಿರಡಿ ಸಾಯಿಬಾಬಾ ಟ್ರಸ್ಟ್‌ಗೆ ಪ್ರತಿದಿನ ಒಂದೂವರೆ ಕೋಟಿ ರೂ. ನಷ್ಟ!

    ಲಾಕ್‌ಡೌನ್ ನಿಯಮ ಉಲ್ಲಂಘಿಸಿ ದೆಹಲಿಯ ನಿಜಾಮುದ್ದೀನ್‌ನಲ್ಲಿ ಸಮಾವೇಶ ಆಯೋಜಿಸಿದ್ದ ಹಿನ್ನೆಲೆಯಲ್ಲಿ ಸಾವಿರಾರು ಜನರನ್ನು ಪೊಲೀಸರು ಬಂಧಿಸಿದ್ದರು. ಇವರನ್ನು ತಪಾಸಣೆಗೆ ಒಳಪಡಿಸಿದಾಗ ಹಲವರಿಗೆ ಕರೊನಾ ಪಾಸಿಟಿವ್ ಬಂದಿತ್ತು. ಹಾಗಾಗಿ ಎಲ್ಲರನ್ನೂ ದೆಹಲಿಯ ವಿವಿಧ ಕ್ವಾರಂಟೈನ್ ಸೆಂಟರ್‌ಗಳಲ್ಲಿ ಇರಿಸಲಾಗಿತ್ತು.

    ಇದರಲ್ಲಿ ಕೆಲವರು ತಮ್ಮನ್ನು ನೋಡಿಕೊಳ್ಳುತ್ತಿದ್ದ ವೈದ್ಯರ ಜತೆಗೇ ಅನುಚಿತ ವರ್ತನೆ ತೋರಿದ್ದರು. ಇನ್ನು ಕೆಲವರು, ಮಹಿಳಾ ನರ್ಸ್‌ಗಳ ಜತೆ ಅನುಚಿತವಾಗಿ ನಡೆದುಕೊಂಡಿದ್ದರು. ಇದು ದೇಶಾದ್ಯಂತ ತೀವ್ರ ಆಕ್ರೋಶಕ್ಕೆ ಕಾರಣವಾಗಿತ್ತು.

    ಇದನ್ನೂ ಓದಿ ಸಾರಿಗೆ ಸಿಬ್ಬಂದಿ ಆತಂಕ ಪಡುವ ಅಗತ್ಯವಿಲ್ಲ; ಸಚಿವ ಲಕ್ಷ್ಮಣ್​ ಸವದಿ ಕೊಟ್ಟಿದ್ದಾರೊಂದು ಗುಡ್​ ನ್ಯೂಸ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts