More

    ದಲಿತ ಕಾರ್ಮಿಕ ನಾಯಕಿ ನೋದೀಪ್ ಕೌರ್​​ಗೆ ಜಾಮೀನು

    ಚಂಡೀಗಢ: ಒಂದೂವರೆ ತಿಂಗಳಿಂದ ಹರಿಯಾಣದ ಕರ್ಣಾಲ್ ಜೈಲಿನಲ್ಲಿ ಬಂಧನದಲ್ಲಿರುವ ದಲಿತ ಕಾರ್ಮಿಕ ಚಳುವಳಿಕಾರ್ತಿ ನೊದೀಪ್ ಕೌರ್​ಗೆ ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್ ಇಂದು ಜಾಮೀನು ನೀಡಿದೆ. ಇಪ್ಪತ್ಮೂರು ವರ್ಷ ವಯಸ್ಸಿನ ಕೌರ್ ಮೇಲೆ ದಾಖಲಾಗಿರುವ ಸುಲಿಗೆ ಮತ್ತು ಕೊಲೆ ಯತ್ನದ ಪ್ರಕರಣದಲ್ಲಿ ಜಾಮೀನು ನೀಡಿರುವ ನ್ಯಾಯಮೂರ್ತಿ ಅವನೀಶ್ ಝಿಂಗನ್, ಕಾನೂನು ಮತ್ತು ಸುವ್ಯವಸ್ಥೆಗೆ ಧಕ್ಕೆ ತರದಂತೆ ನಡೆದುಕೊಳ್ಳಬೇಕೆಂಬ ಷರತ್ತು ವಿಧಿಸಿದ್ದಾರೆ.

    ಕೃಷಿ ಕಾನೂನುಗಳ ವಿರುದ್ಧ ನಡೆಯುತ್ತಿರುವ ರೈತ ಹೋರಾಟಕ್ಕೂ ಬೆಂಬಲ ಸೂಚಿಸುತ್ತಾ, ದೆಹಲಿಯ ಕುಂಡ್ಲಿ ಗಡಿ ಭಾಗದಲ್ಲಿ ಕಾರ್ಮಿಕರ ಪ್ರತಿಭಟನೆಯಲ್ಲಿ ಕೌರ್ ನಿರತರಾಗಿದ್ದರು. ಜನವರಿ 12 ರಂದು ಕಾರ್ಮಿಕರಿಗೆ ಹೆಚ್ಚಿನ ವೇತನ ಕೇಳಿ ಫ್ಯಾಕ್ಟರಿಯೊಂದರ ಮುಂದೆ ನಡೆಸುತ್ತಿದ್ದ ಪ್ರತಿಭಟನೆಯ ವೇಳೆ ಹರಿಯಾಣ ಪೊಲೀಸರು ಆಕೆಯನ್ನು ಬಂಧಿಸಿದ್ದರು. ಆಕೆಯ ಮೇಲೆ ಧಂಗೆ, ಕೊಲೆಯ ಯತ್ನ ಮತ್ತು ಅಪರಾಧಿಕ ಬೆದರಿಕೆ ಮುಂತಾದ ಆರೋಪಗಳನ್ನು ದಾಖಲಿಸಲಾಗಿದೆ. ಇತರ ಎರಡು ಪ್ರಕರಣಗಳಲ್ಲಿ ಕೌರ್​ಗೆ ಈ ಮುನ್ನ ಜಾಮೀನು ಲಭಿಸಿತ್ತು.

    ಇದನ್ನೂ ಓದಿ: ದೀಪ್ ಸಿಧು ಫೇಸ್​ಬುಕ್ ಖಾತೆ ನಡೆಸುತ್ತಿದ್ದಾಳೆ ಒಬ್ಬ ವಿದೇಶೀ ಸ್ನೇಹಿತೆ !

    ಈ ನಡುವೆ ಕಸ್ಟಡಿಯಲ್ಲಿ ಪೊಲೀಸರು ತನ್ನ ಮೇಲೆ ಶಾರೀರಿಕ ಹಲ್ಲೆ ನಡೆಸಿದ್ದಾರೆ ಎಂದು ಮಜದೂರ್ ಅಧಿಕಾರ್ ಸಂಘಟನ್​ನ ಸದಸ್ಯೆಯಾಗಿರುವ ಕೌರ್ ಆಪಾದಿಸಿದ್ದಾರೆ. ಈ ಬಗ್ಗೆ ಆಕೆಯ ವೈದ್ಯಕೀಯ ವರದಿಗಳ ಆಧಾರದ ಮೇಲೆ ಕೋರ್ಟ್ ಪ್ರತ್ಯೇಕವಾಗಿ ವಿಚಾರಣೆ ನಡೆಸಲಿದೆ. ಅದರೊಂದಿಗೆ ಆಕೆಯನ್ನು ಅಕ್ರಮ ಬಂಧನಕ್ಕೊಳಪಡಿಸಲಾಗಿದೆ ಎಂಬ ಈ-ಮೇಲ್ ಆಧಾರದ ಮೇಲೆ ನ್ಯಾಯಾಲಯ ಸ್ವಯಂಪ್ರೇರಿತವಾಗಿ ಕೈಗೆತ್ತಿಕೊಂಡಿರುವ ವಿಚಾರಣೆಯೂ ನಡೆಯಲಿದೆ ಎಂದು ಕೌರ್ ಪರ ವಕೀಲ ದೀಪ್ ಸಿಂಗ್ ಬೈನ್ಸ್ ಹೇಳಿದ್ದಾರೆ.(ಏಜೆನ್ಸೀಸ್)

    ಕ್ಷಣಕ್ಷಣದ ಮಾಹಿತಿಗಾಗಿ ವಿಜಯವಾಣಿ ಫೇಸ್​ಬುಕ್​ ಪೇಜ್​ ಲೈಕ್​ ಮಾಡಿ

    ಮಾರ್ಚ್​ 1 ರಿಂದ 60 ವರ್ಷ ಮೇಲ್ಪಟ್ಟವರಿಗೆ, ಆಯ್ದ 45 ಮೇಲ್ಪಟ್ಟವರಿಗೆ ಕರೊನಾ ಲಸಿಕೆ ಲಭ್ಯ

    “ಕಾರು, ಬೈಕಿನಂತೆ ಹೆಂಡತಿಯನ್ನೂ ನಿಮ್ಮ ಆಸ್ತಿ ಎಂದು ತಿಳಿಯಬೇಡಿ” : ಗಂಡಸರಿಗೆ ಹೈಕೋರ್ಟ್ ಕಿವಿಮಾತು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts